ನವದೆಹಲಿ, ಆ.28: ಭಾರತದ ಗಾಳಿಯ ಮಾಲಿನ್ಯ ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆಯ (WHO) ಮಾನದಂಡಗಳನ್ನು ಮೀರಿರುವುದು ಕಂಡುಬಂದಿದ್ದು, ಇದರಿಂದ ಭಾರತೀಯರ ಜೀವಿತಾವಧಿ ಸುಮಾರು 3.5 ವರ್ಷ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್ 2025 ರ ವರದಿಯಲ್ಲಿ, ಅಪಾಯಕಾರಿ ಪಿಎಂ 2.5 ದೂಳಿನ ಕಣದ ಸಾಂದ್ರತೆ 2023 ರಲ್ಲಿ 2022 ರ ಹೋಲಿಕೆಯಂತೆ ಹೆಚ್ಚಳವಾಗಿದೆ. ವರದಿ ಪ್ರಕಾರ, ಪಿಎಂ 2.5 ದೂಳಿನ ಪ್ರಮಾಣವು WHO ವಾರ್ಷಿಕ ಮಾರ್ಗಸೂಚಿಯ 5 ಮೈಕ್ರೋಗ್ರಾಂ ಗೆ ವಿರುದ್ಧವಾಗಿ, ಭಾರತದ ಅಧಿಕೃತ ಮಿತಿ 40 ಮೈಕ್ರೋಗ್ರಾಂ ಇದೆ. ಪಿಎಂ 10 ದೂಳಿನ ಪ್ರಮಾಣವೂ ರಾಷ್ಟ್ರೀಯ ಮಿತಿಗಿಂತ ಹೆಚ್ಚು ಇದೆ.
ವರದಿ ಹೇಳಿದಂತೆ, ದೇಶದ ಶೇ.46 ಜನಸಂಖ್ಯೆ ಪಿಎಂ 2.5 ಮಟ್ಟವು ರಾಷ್ಟ್ರೀಯ ಮಾನದಂಡಕ್ಕೂ ಹೆಚ್ಚು ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. WHO ಮಾನದಂಡವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ, 54 ಕೋಟಿ ಜನರ ಜೀವಿತಾವಧಿ 5 ವರ್ಷ ಹೆಚ್ಚಾಗಬಹುದು. ದೇಶದ ಎಲ್ಲಾ ಪ್ರದೇಶಗಳಲ್ಲಿ WHO ಮಾನದಂಡ ಪಾಲನೆಯಾದರೆ, ಭಾರತೀಯರ ಜೀವಿತಾವಧಿ 8.2 ವರ್ಷಗಳಷ್ಟು ವೃದ್ಧಿಯಾಗಬಹುದು ಎಂದು ವರದಿ ಅಭಿಪ್ರಾಯಪಡಿಸಿದೆ.
