ಟಿ. ನರಸೀಪುರ : ನಶೆ ಮಾದಕ ವಸ್ತುಗಳು ಆರೋಗ್ಯ ಮತ್ತು ಮಾನಸಿಕ ದೈಹಿಕವಾಗಿ ಮನುಷ್ಯನನ್ನು ಕುಗ್ಗಿಸುತ್ತದೆ ಆಗಾಗಿ ಅವುಗಳಿಂದ ದೂರ ಇರುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ. ಹೆಚ್. ಹನುಮಂತ್ ಕಿವಿ ಮಾತು ಹೇಳಿದರು.
ಪಟ್ಟಣದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಬಕಾರಿ ಇಲಾಖೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಮಾದಕ ವಸ್ತುಗಳ ಕುರಿತ ಜಾಗೃತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ನೆರವೇರಿಸಿ ಮಾತನಾಡಿ ಮಾದಕ ವಸ್ತುಗಳ ಉಪಯೋಗ ಪ್ರಪಂಚದಾದ್ಯಂತ ಕಂಡು ಬರುವ ಬಹು ದೊಡ್ಡ ಪಿಡುಗು.ಪುರಷ,ಮಹಿಳೆ,ಬಡವ,ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಉಪಯೋಗಿಸುವ ಮಾದಕ ವಸ್ತುಗಳು ನಮ್ಮ ಜೀವನದ ಮೇಲೆ ಹಲವಾರು ದುಷ್ಪರಿಣಾಮಗಳನ್ನು ಬೀರಿ ಹಲವಾರು ಸವಾಲುಗಳನ್ನು ಎದುರಿಸುವ ಮಟ್ಟಕ್ಕೆ ಕರೆದುಕೊಂಡು ಹೋಗಿ ಬಿಡುತ್ತವೆ.
ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘಕಾಲದ ಪ್ರಭಾವಿ ಪರಿಣಾಮ ಬೀರುತ್ತವೆ.ಮಾದಕ ಉತ್ತೇಜಿತ ಪದಾರ್ಥಗಳನ್ನು ಸೇವಿಸುತ್ತಿರುವಾಗ ವ್ಯಕ್ತಿಯು ತನ್ನನ್ನ ಸಂಪೂರ್ಣವಾಗಿ ಕಳೆದುಕೊಳ್ಳುವ ಮೂಲಕ ಸ್ಥಿರತೆಯನ್ನು ಕಳೆದುಕೊಂಡು ಪೋಷಕರಿಗೆ ಯೋಚನೆ ಕೊಡುವ ಮೂಲಕ ಪ್ರತಿನಿತ್ಯ ನರಕ ಅನುಭವಿಸುವಂತ್ತಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಚಟವನ್ನು ತಪ್ಪಿಸಲು ಸರ್ಕಾರ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಹಲವಾರು ಯೋಜನೆಗಳನ್ನು ರೂಪಿಸಿ ವ್ಯಸನದಿಂದ ಮುಕ್ತಗೊಳಿಸಲು ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿವೆ.ಯುವ ಜನತೆ ಮಾದಕ ವಸ್ತುಗಳ ಚಟಕ್ಕೆ ಬೀಳದೆ,ಪ್ರಭಾವಿತರಾಗದೆ ಸಮಾಜದಲ್ಲಿ ಒಳ್ಳೆಯ ಸತ್ಪ್ರಜೆಗಳಾಗಿ ಮಾದರಿಯಾಗಿ ಜೀವಿಸಬೇಕೆಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ಕಿರಿಯ ನ್ಯಾಯಾಧೀಶರಾದ ಎಚ್.ಆರ್. ಸಚಿನ್ ಮಾತನಾಡಿ ವಿದ್ಯಾರ್ಥಿಗಳಿಗೆ ಕಾಯ್ದೆಯ ದಂಡನೆ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಡಾ. ಮಹದೇವಿ ಬಾಯಿ ವಿದ್ಯಾರ್ಥಿಗಳನ್ನು ಕುರಿತು ಮಾದಕ ವಸ್ತುಗಳು ಮತ್ತು ಜೀವನದ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ತೊಟ್ಟವಾಡಿ ಮಹಾದೇವಸ್ವಾಮಿ,ಕಾಲೇಜಿನ ಪ್ರಾಂಶುಪಾಲರಾದ ಮಾನಸ,ವಲಯ ಅಬಕಾರಿ ನಿರೀಕ್ಷಕ ಸುಧಾರಾಣಿ , ನಂಜನಗೂಡು ಉಪ ವಿಭಾಗದ ಅಬಕಾರಿ ನಿರೀಕ್ಷಕ ಮುದಾಸರ್ ಭಾಷಾ, ಸಿಬ್ಬಂದಿಗಳಾದ ಶಿವಪ್ರಕಾಶ ಬಿ.ಪಿ, ರಮೇಶ್.ಎಂ, ಪರಶಿವಮೂರ್ತಿ, ಮಹೇಶ್ ಕೆ.ವಿ. ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
- ಎಂ.ನಾಗೇಂದ್ರ ಕುಮಾರ್
