ತುಮಕೂರು: ನಗರದ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ 22ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ಹಾಗೂ ಸನ್ಮಾನ ಸಮಾರಂಭವನ್ನು ದಿನಾಂಕ:28-09-2025ನೇ ಭಾನುವಾರ ಕಾಲೇಜಿನ ಆವರಣದಲ್ಲಿರುವ ಡಾ|| ಶ್ರೀ.ಶ್ರೀ.ಶಿವಕುಮಾರಸ್ವಾಮೀಜಿಗಳ ಸಭಾಂಗಣದಲ್ಲಿ ಬೆಳಿಗ್ಗೆ:10-30 ಗಂಟೆಗೆ ಸಂಘದ ಅಧ್ಯಕ್ಷರಾದ ಡಾ|| ಟಿ.ಬಿ.ನಿಜಲಿಂಗಪ್ಪ ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ.ಆರ್.ಎ.ಪೀರ್ ಸಾಬ್ ಗೋಲ್,ಗುಬ್ಬಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ||ಪ್ರಸನ್ನ,ನಿವೃತ್ತ ಪ್ರಾಂಶುಪಾಲರಾದ ಡಾ||ಎಸ್.ಕೆ.ನಂದೀಶಯ್ಯ,ನಿವೃತ್ತ ಮುಖ್ಯ ಅಗ್ನಿಶಾಮಕದಳದ ಅಧಿಕಾರಿ ಟಿ.ಆರ್.ಪುಟ್ಟಯ್ಯ,ಹೆಚ್.ಡಿ.ಎಫ್.ಸಿ ಬ್ಯಾಂಕ್ ನ ರಿಲೇಷನ್ ಶಿಪ್ ವ್ಯವಸ್ಥಾಪಕರಾದ ವಿಜಯ್.ಟಿ.ಆರ್. ಆಗಮಿಸುತ್ತಿದ್ದು, ಈ ಸಂದರ್ಭದಲ್ಲಿ ವಿವಿಧ ವಿಭಾಗಗಳಲ್ಲಿ, ವಿವಿಧ ವಿಷಯಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ, ಉತ್ತಮ ಸಾಧನೆಗೈದ ಎನ್.ಎಸ್.ಎಸ್, ಎನ್.ಸಿ.ಸಿ, ಕ್ರೀಡಾ ವಿಜೇತ ವಿದ್ಯಾರ್ಥಿಗಳನ್ನು, ರ್ಯಾಂಕ್ ವಿಜೇತರಿಗೆ ನಗದು ಮತ್ತು ನೆನಪಿನ ಕಾಣಿಕೆ ನೀಡಿ ಸಂಘದ ವತಿಯಿಂದ ಗೌರವಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕಾಲೇಜಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೋರಿದ್ದಾರೆೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕೆ.ಬಿ.ಚಂದ್ರಚೂಡ(ಪಿ.ಆರ್.ಓ)ಮೊ:9448661446, ಪ್ರೊ.ಲಿಂಗದೇವರಪ್ಪ.ಕೆ.ಎಸ್.ಮೊ.9632246106.
