ಕುಡುತಿನಿ (ಬಳ್ಳಾರಿ ತಾ. ಮತ್ತು ಜಿಲ್ಲೆ): ಬೇರು ಭೂಮಿ ತಂಡದ ವತಿಯಿಂದ ಮತ್ತು ಆದ್ಯ ಟ್ರಸ್ಟ್ ಸಹಯೋಗದೊಂದಿಗೆ ಕುಡುತಿನಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಭಾವಪೂರ್ಣ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಯಿತು.
ನಮ್ಮ ಊರಿನ ಸ್ವಚ್ಛತೆ ಪರಿಸರದ ಆರೋಗ್ಯ ಮತ್ತು ಸಾರ್ವಜನಿಕರ ಸುಖಸಮೃದ್ಧಿಗಾಗಿ ದಿನನಿತ್ಯವೂ ಅಹರ್ನಿಶಿ ದುಡಿಯುತ್ತಿರುವ ಪೌರ ಕಾರ್ಮಿಕರ ಪರಿಶ್ರಮವನ್ನು ಗುರುತಿಸುವ ಹಿತದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಒಟ್ಟು 50 ಪೌರ ಕಾರ್ಮಿಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು ನೆನಪಿನ ಕಾಣಿಕೆಯಾಗಿ ಪ್ರತಿಯೊಬ್ಬರಿಗೆ ಅವರ ವೈಯಕ್ತಿಕ ಫೋಟೋ ಹಾಗೂ ಹಣ್ಣು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕರು
ಪೌರ ಕಾರ್ಮಿಕರು ನಮ್ಮ ನಿಜವಾದ ಹೀರೋಗಳು ಅವರ ಶ್ರಮವಿಲ್ಲದೆ ಸ್ವಚ್ಛ ನಗರ ಆರೋಗ್ಯಕರ ಪರಿಸರ ಸಾಧ್ಯವಿಲ್ಲ ಅವರ ಸೇವಾಭಾವ ಸಮಾಜಕ್ಕೆ ಮಾದರಿಯಾಗಿದೆ ಇಂತಹ ಕಾರ್ಯಕ್ರಮಗಳ ಮೂಲಕ ಅವರ ಪರಿಶ್ರಮವನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಹಾಜರಿದ್ದ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಗಣ್ಯರು ಪೌರ ಕಾರ್ಮಿಕರ ಸೇವಾಭಾವವನ್ನು ಶ್ಲಾಘಿಸಿ ಭವಿಷ್ಯದಲ್ಲಿಯೂ ಇಂತಹ ಸನ್ಮಾನ ಕಾರ್ಯಕ್ರಮಗಳನ್ನು ಮುಂದುವರಿಸಬೇಕೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರ ನೀಡಿದ ಬೇರು ಭೂಮಿ ತಂಡ ಆದ್ಯ ಟ್ರಸ್ಟ್ ಹಾಗೂ ಕುಡುತಿನಿ ಪಟ್ಟಣ ಪಂಚಾಯಿತಿಗೆ ವಿಶೇಷ ಧನ್ಯವಾದಗಳನ್ನು ಸಲ್ಲಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಗಿಡಗಳನ್ನು ನೇಡಲಾಯಿತು.
