ಕೆ.ಆರ್.ಪೇಟೆ,ಸೆ.29: ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ 14ಮಂದಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯ ಅಂತಿಮ ಫಲಿತಾಂಶವು ಭಾನುವಾರ ಮಧ್ಯರಾತ್ರಿ ಸುಮಾರು 1.30ಗಂಟೆಗೆ ಹೊರಬಿದ್ದಿತು. ಜೆಡಿಎಸ್-ಬಿಜೆಪಿ ಮೈತ್ರಿ ಕೂಟವು 11ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ ಪಕ್ಷವು ಕೇವಲ 3 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಪ್ರಾಥಮಿಕ ಕೃಷಿ ಪತ್ತಿನ ಪ್ರತಿನಿಧಿಗಳ ಮೂಲ
ಕ ಆಯ್ಕೆಯಾಗಬೇಕಾದ ಎ.ವರ್ಗದ 6ಸ್ಥಾನದ ಪೈಕಿ ಜೆಡಿಎಸ್ ಪಕ್ಷದ ಟಿ.ಬಲದೇವ್-16, ಹೆಚ್.ಟಿ.ಲೋಕೇಶ್-16, ಬಿ.ಎಂ.ಕಿರಣ್-25 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಎಂ.ಪಿ.ಲೋಕೇಶ್-16, ಎ.ವೈ.ವಿಜಯಕುಮಾರ್-16, ಕಿಕ್ಕೇರಿ ಕಾಯಿ ಸುರೇಶ್-17 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ.
ಟಿಎಪಿಸಿಎಂಎಸ್ ರೈತ ಶೇರುದಾರರಿಂದ ಆಯ್ಕೆಯಾಗಬೇಕಾದ ಬಿ.ವರ್ಗದ 8ಸ್ಥಾನಕ್ಕೆ 8ಸ್ಥಾನಗಳಲ್ಲಿಯೂ ಜೆಡಿಎಸ್ ಅಭ್ಯರ್ಥಿಗಳು ಭರ್ಜರಿ ಜಯಸಾಧಿಸಿದ್ದಾರೆ. ಕಾಂಗ್ರೆಸ್ ಶೂನ್ಯ ಸಂಪಾದನೆ ಮಾಡಿದೆ. ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಸಾಮಾನ್ಯ ವರ್ಗದ ಕಿಕ್ಕೇರಿ ಕೆ.ಬಿ.ಮಧು(2532), ಶೀಳನೆರೆ ಎಸ್.ಎಲ್.ಮೋಹನ್(2438), ಬಿಸಿಎಂ.ಬಿ ವರ್ಗದ ಮಲ್ಲೇನಹಳ್ಳಿ ಎಂ.ಮೋಹನ್(2400), ಬಿಸಿಎಂ.ಎ ವರ್ಗದ ದಿಲೀಪ್ಕುಮಾರ್(2136), ಸಾಮಾನ್ಯ ಮಹಿಳಾ ವರ್ಗದ ಅನುವಿನಕಟ್ಟೆ ಕೆರೆಕೋಡಿ ಜ್ಯೋತಿದೇವರಾಜು(2465), ಬಂಡಿಹೊಳೆ ಬಿ.ಆರ್.ಲತಾಮಣಿಮಂಜುನಾಥ್(2187), ಪರಿಶಿಷ್ಟ ಜಾತಿ ವರ್ಗದ ರಂಗನಾಥಪುರ ನಾಗರಾಜು(1937), ಪರಿಶಿಷ್ಟ ಪಂಗಡ ವರ್ಗದ ಬೊಮ್ಮೇನಹಳ್ಳಿ ಮಂಜುನಾಥ್(1934) ಮತಗಳನ್ನು ಪಡೆದು ಬಿ ವರ್ಗದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಬಿ.ವರ್ಗದಲ್ಲಿ ಸೋತವರು:ಸಾಮಾನ್ಯ ವರ್ಗದ ಬಿ.ಎಲ್.ದೇವರಾಜು(2336), ಕೆ.ಟಿ.ಗಂಗಾಧರ್(2112), ಬಿಸಿಎಂ.ಬಿ ವರ್ಗದ ಹೊನ್ನೇನಹಳ್ಳಿ ಹೆಚ್.ಎ.ಕೃಷ್ಣೇಗೌಡ(2229), ಸಾಮಾನ್ಯ ಮಹಿಳೆ ಕೆ.ಎನ್.ಕೋಮಲಾ(1852), ಸುಕನ್ಯಲಕ್ಷö್ಮಣ್ಗೌಡ(1570), ಪರಿಶಿಷ್ಟ ಜಾತಿ ಚಲುವಯ್ಯ(1619), ಪರಿಶಿಷ್ಟ ಪಂಗಡ ಜಯರಾಮನಾಯಕ(1493), ಬಿಸಿಎಂ ಎ ವರ್ಗದ ಶಶಿಧರ್(1428), ಬಿಸಿಎಂಎ ಮಹಾದೇವ್(419) ಮತಗಳನ್ನು ಪಡೆದು ಬಿ ವರ್ಗದ ಅಭ್ಯರ್ಥಿಗಳು ಸೋಲುಂಡಿದ್ದಾರೆ.

ಎ.ವರ್ಗದಲ್ಲಿ ಸೋತವರು: ಕಾಂಗ್ರೆಸ್ ಪಕ್ಷದ ಬಲ್ಲೇನಹಳ್ಳಿ ರಮೇಶ್, ಸಾರಂಗಿ ವಿಶ್ವನಾಥ್, ಕೋಡಿಮಾರನಹಳ್ಳಿ ಮಂಜೇಗೌಡ, ಜೆಡಿಎಸ್ ಪಕ್ಷದ ಕುರುಬಹಳ್ಳಿ ಕೆ.ಬಿ.ನಾಗೇಶ್, ಕಾಂತರಾಜು, ಕರಿಶೆಟ್ಟಿ ಅವರುಗಳು ಕೇವಲ 1ಮತಗಳ ಅಂತರದಿಂದ ಪರಾಭವಗೊಂಡರು.
ಜೆಡಿಎಸ್ ಸಂಭ್ರಮಾಚರಣೆ: ಟಿಎಪಿಸಿಎಂಎಸ್ ಚುನಾವಣೆಯ ಫಲಿತಾಂಶವು ಭಾನುವಾರ ಸುಮಾರು 1.30ಗಂಟೆಗೆ ಅಂತಿಮ ಫಲಿತಾಂಶ ಹೊರಬಿದ್ದಿತು. 14ಸ್ಥಾನಕ್ಕೆ 11ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸುತ್ತಿದ್ದಂತೆಯೇ ಜೆಡಿಎಸ್ ಕಾರ್ಯಕರ್ತರು ತಡರಾತ್ರಿಯೇ ಶಾಸಕ ಎಚ್.ಟಿ.ಮಂಜು ನೇತೃತ್ವದಲ್ಲಿ ಕೆಪಿಎಸ್ ಶಾಲಾ ಹೊರ ಆವರಣದಲ್ಲಿ ಪಟಾಕಿ ಸಿಡಿಸಿ, ಜೆಡಿಎಸ್ ಪರ, ಮಾಜಿ ಪ್ರಧಾನಿ ದೇವೇಗೌಡರ ಪರ, ಕೇಂದ್ರ ಸಚಿವ ಕುಮಾರಣ್ಣನ ಪರ, ಶಾಸಕರ ಪರ, ಜೈಕಾರದ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆ ಮಾಡಿದರು. ಶಾಸಕರನ್ನು ಹಾಗೂ ವಿಜೇತ ಅಭ್ಯರ್ಥಿಗಳನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಕುಣಿದು ಹರ್ಷೋದ್ಘಾರ ವ್ಯಕ್ತಪಡಿಸಿದರು.
ನೂತನ ನಿರ್ದೇಶಕರನ್ನು ಶಾಸಕ ಹೆಚ್.ಟಿ.ಮಂಜು, ಪಿ.ಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್.ರಘು, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಜಿಲ್ಲಾ ದಿಶಾ ಸಮಿತಿ ಸದಸ್ಯ ನರಸನಾಯಕ್, ತಾ.ಪಂ.ಮಾಜಿ ಅಧ್ಯಕ್ಷ ಮೆಣಸ ಮಹಾದೇವೇಗೌಡ, ಹುಲ್ಲೇಗೌಡ, ಸಾಮಿಲ್ ರವಿಕುಮಾರ್, ವಸಂತಕುಮಾರ್, ಸ್ವಾಮೀಗೌಡ, ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ಮಹಾದೇವೇಗೌಡ, ಆನೆಗೊಳ ಕೃಷ್ಣೇಗೌಡ, ಕಿಕ್ಕೇರಿ ಶೇಖರ್, ಭೈರಾಪುರ ಹರೀಶ್, ಬೇಲದಕೆರೆ ನಂಜಪ್ಪ ಮತ್ತಿತರರು ಅಭಿನಂದಿಸಿದರು.

ಮುಗ್ಗರಿಸಿದ ಕಾಂಗ್ರೆಸ್ : ಇತ್ತೀಚೆಗೆ ನಡೆದ ಪಿ.ಎಲ್.ಡಿ. ಬ್ಯಾಂಕ್ ಮತ್ತು ಮನ್ಮುಲ್ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್ ಪಕ್ಷವು ಮಿನಿ ವಿಧಾನಸಭಾ ಚುನಾವಣೆ ಎಂದೇ ಬಿಂಬಿಸಲಾಗಿದ್ದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕೇವಲ 3ಸ್ಥಾನ ಪಡೆದು ಮುಗ್ಗರಿಸಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಬಾರೀ ಪೈಪೋಟಿ ನಡೆದಿತ್ತು. ಶಾಸಕ ಹೆಚ್.ಟಿ.ಮಂಜು ಅವರಿಗೆ ಹಿನ್ನೆಡೆ ಉಂಟು ಮಾಡಲು ಕಾಂಗ್ರೆಸ್ ಮುಖಂಡರು ಭಾರೀ ಕಸರತ್ತು ನಡೆಸಿದ್ದರು. ಆದರೆ ಮತದಾರರು ಶಾಸಕರ ನೇತೃತ್ವದಲ್ಲಿ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬರೋಬ್ಬರಿ 11ಸ್ಥಾನಗಳನ್ನು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿದ ಕಾರಣ ಶಾಸಕ ಮಂಜು ಅವರ ವರ್ಚಸ್ಸು ದ್ವಿಗುಣಗೊಂಡಿದೆ. ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಕಣದಲ್ಲಿದ್ದರಿಂದ ಈ ಚುನಾವಣೆಯು ತಾಲ್ಲೂಕಿನ ಜನರಲ್ಲಿ ಭಾರೀ ಕುತೂಹೂಲ ಮೂಡಿಸಿತ್ತು. ಫಲಿತಾಂಶದ ಬಳಿಕ ಕುತೂಹಲಕ್ಕೆ ತೆರೆ ಬಿದ್ದಿದ್ದು ಬಿ.ಎಲ್.ದೇವರಾಜು ಅವರನ್ನು ಮತದಾರರು ಕೈ ಹಿಡಿಯದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆ ಉಂಟು ಮಾಡಿದೆ.
*ಭಾರಿ ಅಂತರದ ಗೆಲುವು:* ಬಿಸಿಎಂಎ ವರ್ಗದಿಂದ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ನಾಗರಘಟ್ಟ ಎನ್.ಕೆ.ದಿಲೀಪ್ ಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿ ಶಶಿಧರ್ ಸಂಗಾಪುರ ಅವರಿಗಿಂತ 714ಮತಗಳನ್ನು ಹೆಚ್ಚು ಪಡೆದು ಭಾರೀ ಅಂತರದಿ0ದ ಗೆದ್ದು ಇತಿಹಾಸ ನಿರ್ಮಾಣ ಮಾಡಿದ್ದಾರೆ.
ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸಹ ಚುನಾವಣಾಧಿಕಾರಿಯಾಗಿ ಚುನಾವಣಾ ಶಾಖೆಯ ಶಿರಸ್ತೇದಾರ್ ಕೆ.ಎಸ್.ಹರೀಶ್, ಟಿಎಪಿಸಿಎಂಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಬೋರೇಗೌಡ, ರವಿಕುಮಾರ್ ಇತರರು ಕಾರ್ಯನಿರ್ವಹಿಸಿದರು.
– ಶ್ರೀನಿವಾಸ್ ಆರ್.
