ಭಾರತ : ಅಳಿವಿನಂಚಿನಲ್ಲಿರುವ ಸಸ್ಯ ಮತ್ತು ಪ್ರಾಣಿಗಳನ್ನು ರಕ್ಷಿಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ (Wildlife Protection Act) ಅನ್ನು ಭಾರತ ಸರ್ಕಾರವು 1972 ರಲ್ಲಿ ಜಾರಿಗೆ ತಂದಿತ್ತು. ಈ ಕಾಯ್ದೆ ಅತೀ ಅಪಾಯದಲ್ಲಿ ಇರುವ ಪ್ರಾಣಿ, ಸಸ್ಯ ಪ್ರಭೇದಗಳ ರಕ್ಷಣೆ ಹಾಗೂ ಅವುಗಳ ಪರಿಸರ ಸಂರಕ್ಷಣೆಗೆ ಮಾರ್ಗಸೂಚಿಯಾಗಿದೆ.
ಈ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆಯುತ್ತಿರುವ ಪ್ರಾಣಿ ಡುಗಾಂಗ್ (Dugong dugon), ವಿಶ್ವದ ಏಕೈಕ ಸಮುದ್ರ ಸಸ್ಯಾಹಾರಿ ಸಸ್ತನಿಯಾಗಿದೆ. ಡುಗಾಂಗ್ ಸಾಮಾನ್ಯವಾಗಿ ಸಮುದ್ರ ಹುಲ್ಲುಗಳನ್ನು ತಿನ್ನುತ್ತದೆ, ಆದ್ದರಿಂದ ಇದನ್ನು “ಸಮುದ್ರ ಹಸು” ಎಂದು ಕೂಡ ಕರೆಯುತ್ತಾರೆ.
ಇದನ್ನು ಓದಿ: ರಾಜ್ಯದ ‘ಸರ್ಕಾರಿ ನೌಕರ’ರ ಗಮನಕ್ಕೆ: HRMS ತಂತ್ರಾಂಶದಲ್ಲಿ ಕೂಡಲೇ ಈ ಮಾಹಿತಿ ಸಲ್ಲಿಸುವಂತೆ ಸರ್ಕಾರ ಸೂಚನೆ!
ಭಾರತದಲ್ಲಿ ಡುಗಾಂಗ್ ಮುಖ್ಯವಾಗಿ ಪಾಕ್ ಕೊಲ್ಲಿನಲ್ಲಿ ಅತಿದೊಡ್ಡ ಜನಸಂಖ್ಯೆ ಕಂಡುಬರುತ್ತದೆ. ಇದರ ನಂತರ ಮನ್ನಾರ್ ಕೊಲ್ಲಿ ಮತ್ತು ಕಚ್ ಕೊಲ್ಲಿಗಳು ಸಹ ಡುಗಾಂಗ್ ವಾಸಸ್ಥಳಗಳಾಗಿ ಪರಿಗಣಿಸಲ್ಪಟ್ಟಿವೆ. ತಜ್ಞರು ಈ ಅಪರೂಪದ ಪ್ರಾಣಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

[…] […]