
ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ ಅವರನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ-FBI)ನ ಹೊಸ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿಯನ್ನು ಅಮೆರಿಕ ಸೆನೆಟ್ 51-49 ಮತಗಳಿಂದ ಅನುಮೋದಿಸಿತು. ಕಾಶ್ ಪಟೇಲ್ ಅವರನ್ನು ಟ್ರಂಪ್ ಅವರ ಕಟ್ಟಾ ಬೆಂಬಲಿಗರೆಂದು ಪರಿಗಣಿಸಲಾಗಿದೆ.
ಕಾಶ್ ಪಟೇಲ್ ಅವರಿಗೆ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ. ಈ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಾಯಕ ಮತ್ತು ಶ್ವೇತಭವನದ ಉಪಮುಖ್ಯಸ್ಥ ಡಾನ್ ಸ್ಕ್ಯಾವಿನೊ ಅವರು ವಿಶಿಷ್ಟ ರೀತಿಯಲ್ಲಿ ಅಭಿನಂದಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಲದ್ಲಿ ವೈರಲ್ ಆಗುತ್ತಿದೆ. ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಬಾಜಿರಾವ್ ಮಸ್ತಾನಿ ಚಿತ್ರದ ‘ಮಲ್ಹಾರಿ’ ಹಾಡಿನ ನೃತ್ಯ ತುಣುಕನ್ನು ಸ್ಕ್ಯಾವಿನೋ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು, ರಣವೀರ್ ಅವರ ಮುಖವನ್ನು ಪಟೇಲ್ ಮುಖಕ್ಕೆ ಬದಲಾಯಿಸಲಾಗಿದೆ.
ಡ್ಯಾನ್ ಸ್ಕ್ಯಾವಿನೊ ಈ ವಿಡಿಯೋವನ್ನು ಹಂಚಿಕೊಂಡಿದ್ದು ‘ಹೊಸ ಎಫ್ಬಿಐ ನಿರ್ದೇಶಕ ಕಾಶ್ ಪಟೇಲ್ಗೆ ಅಭಿನಂದನೆಗಳು’ ಎಂದು ಬರೆದಿದ್ದಾರೆ. ವೈರಲ್ ಆದ 47 ಸೆಕೆಂಡುಗಳ ಈ ವಿಡಿಯೋವನ್ನು ಇದುವರೆಗೂ 3.5 ಮಿಲಿಯನ್ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.
https://x.com/i/status/1892658921409515569