ಹಾಸನ: ನಗರದ ಪತಂಜಲಿ ಯೋಗ ಸಮಿತಿ ವೇದಭಾರತಿ ಮತ್ತು ಶ್ರೀ ಕನಿಕಾ ಪರಮೇಶ್ವರಿ ದೇವಾಲಯ ಸಮಿತಿ ಸಂಯುಕ್ತಾಶ್ರಯದಲ್ಲಿ ಅ.5 ರಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಂತ ಯಜ್ಞ ಪ್ರಭಾರಿ ಹರಿಹರ ಪುರ ಶ್ರೀಧರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಅಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪತಂಜಲಿ ಯೋಗ ಪೀಠದ ವರಿಷ್ಠ ರಾಜ್ಯ ಪ್ರಭಾರಿ ಶ್ರೀ ಭವರಲಾಲ್ ಆರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .ಆರ್ಯವೈಶ್ಯ ಮಂಡಳಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎಚ್ ವಿಶ್ವನಾಥ ಶ್ರೇಷ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.ಪತಂಜಲಿ ಯೋಗ ಪರಿವಾರದ ಜಿಲ್ಲಾ ಸಂರಕ್ಷಕ ಲೋಕನಾಥ್ ಭಾಗವಹಿಸಲಿದ್ದಾರೆ ಎಂದರು.
ಇದನ್ನು ಓದಿ: ಹಾಸನ ಅಡುಗೆ ವಿಚಾರಕ್ಕೆ ತಾಯಿ ಕೊಲೆ – ಮಗನೇ ಆರೋಪಿ
ಯಾವುದೇ ಜಾತಿ ಭೇದವಿಲ್ಲದೆ ಸಾಮೂಹಿಕ ಅಗ್ನಿಹೋತ್ರದಲ್ಲಿ ಭಾಗವಹಿಸಬಹುದಾಗಿದೆ ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾದ ಶಕ್ತಿ ದೊರೆಯಲಿದ್ದು ಎಲ್ಲರಿಗೂ ಯೋಗ ಎಲ್ಲರಿಗೂ ಯಜ್ಙ, ಎಲ್ಲರಿಗೂ ಆರೋಗ್ಯ ಎಂಬ ಘೋಷವಾ ಕ್ಯದೊಂದಿಗೆ ಕಾರ್ಯಗಾರವನ್ನು ಏರ್ಪಡಿಸಲಾಗಿದೆ ಎಂದರು .
ಈ ವೇಳೆ ಹೇಮಂತ್ ಕುಮಾರ್, ಲೋಕನಾಥ್ , ನಾಗರಾಜ, ಶಾರದಾ ಇದ್ದರು.

[…] […]
[…] […]