ಹಾಸನ : ಅರಕಲಗೂಡಿನಲ್ಲಿ ಪಾರಂಪರಿಕವಾಗಿ ನಡೆಯುತ್ತಿರುವ ದಸರಾ ಉತ್ಸವದಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರದ ಟ್ಯಾಬ್ಲೊಗೆ ಅವಕಾಶ ನೀಡುವ ಮೂಲಕ ಹಿಂದೂಗಳ ಭಕ್ತಿ-ಭಾವನೆಗೆ ಧಕ್ಕೆ ತರಲಾಗಿದೆ ಎಂದು ಜಾನಕೆರೆ ಹೇಮಂತ್ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ಸವ ಪ್ರಾರಂಭವಾಗುವ ಮುನ್ನ ವಿವಾದಿತ ಟ್ಯಾಬ್ಲೊವನ್ನು
ಶ್ರೀರಾಮ ಸೇನಾ ಜಿಲ್ಲಾ ಘಟಕದ ಉಪಾಧ್ಯಕ್ಷ ಪುನೀತ್ ಕಾಳೇನಳ್ಳಿ, ತಾಲೂಕು ಘಟಕದ ಅಧ್ಯಕ್ಷ ಅಮಿತ್, ನಗರ ಘಟಕದ ಅಧ್ಯಕ್ಷ ಅನಿಲ್ ಹಾಗೂ ಹಲವು ಕಾರ್ಯಕರ್ತರು ಹಾಗು ಸ್ಥಳೀಯ ಪೊಲೀಸರ ಸಹಕಾರದಿಂದ ಟ್ಯಾಬ್ಲೊವನ್ನು ಹಿಂತೆಗೆದು ಕೊಳ್ಳಲಾಯಿತು ಎಂದು ತಿಳಿಸಿದರು.
ಇದನ್ನು ಓದಿ: ಹಾಸನ : ಅ.5 ರಂದು ಲೋಕ ಕಲ್ಯಾಣಕ್ಕಾಗಿ ಸಾಮೂಹಿಕ ಅಗ್ನಿಹೋತ್ರ ಮತ್ತು ಅಗ್ನಿಹೋತ್ರ ಕಾರ್ಯಗಾರ
ಈ ವಿಷಯವಾಗಿ ತಹಸೀಲ್ದಾರರನ್ನು ಸಂಪರ್ಕಿಸಿದಾಗ “ಟ್ಯಾಬ್ಲೊ ಪ್ರದರ್ಶನಕ್ಕೆ ನಾನೇ ಅನುಮತಿ ನೀಡಿದ್ದೇನೆ” ಎಂಬ ಹೇಳಿಕೆ ನೀಡಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಿದೆ.ಹಿಂದೂಗಳ ಧಾರ್ಮಿಕ ಉತ್ಸವದಲ್ಲಿ ಮತಾಂಧರು ಅಡ್ಡಿ ಪಡಿಸುತ್ತಿರುವುದು ಖಂಡನೀಯ. ಆದ್ದರಿಂದ ತಹಸೀಲ್ದಾರ್ ಅವರನ್ನು ಕೂಡಲೇ ಸೇವೆಯಿಂದ ವಜಾ ಗೊಳಿಸಬೇಕು” ಎಂದು ಆಗ್ರಹಿಸಿದರು.
ಉತ್ಸವದಲ್ಲಿ ವಿವಾದಿತ ಟ್ಯಾಬ್ಲೊವನ್ನು ತಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಪೊಲೀಸ್ ಇಲಾಖೆ ಆ ವಾಹನ ಹಾಗೂ ಟ್ಯಾಬ್ಲೊವನ್ನು ವಶಪಡಿಸಿಕೊಳ್ಳಬೇಕು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದAತೆ ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಚ್ಚರಿಸಿದರು.

[…] […]