ರಾಯ್ಪುರ: ಛತ್ತೀಸ್ಗಢ ರಾಜ್ಯ ಸರ್ಕಾರವು ಮಹತ್ವದ ಘೋಷಣೆ ಮಾಡಿದ್ದು, ಬಾಲೋಡ್ ಜಿಲ್ಲೆ ದೇಶದಲ್ಲೇ ಮೊದಲ ಬಾರಿಗೆ ಅಧಿಕೃತವಾಗಿ “ಬಾಲ್ಯವಿವಾಹ ಮುಕ್ತ ಜಿಲ್ಲೆ” ಎಂದು ಘೋಷಣೆಗೊಂಡಿದೆ.
‘Child Marriage-Free India’ ಅಭಿಯಾನದ ಅಡಿಯಲ್ಲಿ ಈ ಸಾಧನೆ ದಾಖಲಾಗಿದ್ದು, ಜಿಲ್ಲೆಯಾದ್ಯಂತ ನಡೆದ ತಪಾಸಣೆ, ಜಾಗೃತಿ ಅಭಿಯಾನಗಳು ಹಾಗೂ ಕಟ್ಟುನಿಟ್ಟಿನ ಕ್ರಮಗಳ ಫಲವಾಗಿ ಬಾಲ್ಯವಿವಾಹಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದನ್ನು ಓದಿ: ಫಿಲಿಫೈನ್ಸ್ ಭೂಕಂಪದಲ್ಲಿ ಸಿಲುಕಿದ ಕಾಫಿನಾಡ ವೈದ್ಯಕೀಯ ವಿದ್ಯಾರ್ಥಿನಿ; ಪೋಷಕರು ಕಣ್ಣೀರು!
ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲೂ ಇದೇ ಮಾದರಿಯನ್ನು ಅನುಸರಿಸಿ, ಬಾಲ್ಯವಿವಾಹ ನಿರ್ಮೂಲನೆ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
