ನವದೆಹಲಿ: ಭಾರತದ ಸ್ವದೇಶಿ ಚಳವಳಿಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್ಸಿಇಆರ್ಟಿ) ಹೊಸ ಎರಡು ಪಠ್ಯಗಳನ್ನು ಪರಿಚಯಿಸಿದೆ.
ಹೊಸ ಪಾಠ್ಯಕ್ರಮದಡಿ 6ರಿಂದ 8ನೇ ತರಗತಿವರೆಗೆ “ಸ್ವದೇಶಿ: ವೋಕಲ್ ಫಾರ್ ಲೋಕಲ್” ಹಾಗೂ 9ರಿಂದ 12ನೇ ತರಗತಿವರೆಗೆ “ಸ್ವದೇಶಿ: ಆತ್ಮನಿರ್ಭರ ಭಾರತಕ್ಕಾಗಿ” ಎಂಬ ವಿಷಯಗಳನ್ನು ಸೇರಿಸಲಾಗಿದೆ.
ಎನ್ಸಿಇಆರ್ಟಿ ಅಧಿಕಾರಿಗಳ ಪ್ರಕಾರ, ಈ ಹೊಸ ಪಠ್ಯಗಳ ಉದ್ದೇಶ ದೇಶದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸ್ಥಳೀಯ ಉತ್ಪನ್ನಗಳ ಬಳಕೆ ಹಾಗೂ ಆತ್ಮನಿರ್ಭರತೆಯ ಮಹತ್ವವನ್ನು ಬೋಧಿಸುವುದು. ಸ್ವದೇಶಿ ಚಳವಳಿಯ ಇತಿಹಾಸ, ಅದರ ಸಾಮಾಜಿಕ-ಆರ್ಥಿಕ ಹಿನ್ನೆಲೆ ಹಾಗೂ ಇಂದಿನ “ವೋಕಲ್ ಫಾರ್ ಲೋಕಲ್” ಅಭಿಯಾನದ ಜೊತೆಗಿನ ಸಂಬಂಧವನ್ನು ಈ ಪಾಠ್ಯಗಳಲ್ಲಿ ಒಳಗೊಳ್ಳಲಾಗಿದೆ.
ಇದನ್ನು ಓದಿ: ಭಾರತಕ್ಕೆ ಬರುತ್ತಿದೆ ಬ್ರಹ್ಮೋಸ್ ಮೀರಿಸುವ ಹೈಪರ್ಸಾನಿಕ್ ಕ್ಷಿಪಣಿ – ಪಾಕಿಸ್ತಾನದಲ್ಲಿ ಆತಂಕ
ಪಾಠ್ಯಕ್ರಮದಲ್ಲಿ ಮಹಾತ್ಮ ಗಾಂಧಿ, ಬಾಳಗಂಗಾಧರ ತಿಲಕ್ ಮತ್ತು ರವೀಂದ್ರನಾಥ ಟಾಗೋರ್ ಅವರ ಪಾತ್ರ, ಹಾಗೂ ಸ್ವದೇಶಿ ಚಳವಳಿಯ ಪ್ರಭಾವದಿಂದ ಉದ್ಭವಿಸಿದ ಕೈಗಾರಿಕಾ ಮತ್ತು ಶಿಕ್ಷಣ ಕ್ಷೇತ್ರದ ಬದಲಾವಣೆಗಳನ್ನೂ ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ.
ಹೊಸ ಪಾಠಗಳು 2025-26 ಶೈಕ್ಷಣಿಕ ವರ್ಷದಿಂದ ದೇಶದಾದ್ಯಂತ ಜಾರಿಯಾಗಲಿದ್ದು, ರಾಷ್ಟ್ರೀಯ ಪಾಠ್ಯಕ್ರಮ ರೂಪುರೇಷೆ (NCF) ಅನುಗುಣವಾಗಿ ಸಿದ್ಧಪಡಿಸಲಾಗಿದೆ.

[…] ಇದನ್ನು ಓದಿ: ಎನ್ಸಿಇಆರ್ಟಿ ಹೊಸ ಪಾಠ್ಯಕ್ರಮ: ಸ್ವದೇಶಿ… […]