ಗುವಾಹಟಿ: ಅಸ್ಸಾಂ ರಾಜ್ಯದ ಬ್ರಹ್ಮಪುತ್ರ ನದಿಯಡಿಯಲ್ಲಿ ನಿರ್ಮಾಣವಾಗಲಿರುವ ಭಾರತದ ಮೊದಲ ನೀರಿನೊಳಗಿನ ರಸ್ತೆ ಸುರಂಗ ಯೋಜನೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಯೋಜನೆ ಇದೀಗ ಕೇಂದ್ರ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ.
ಸುಮಾರು ₹6,000 ಕೋಟಿ ರೂ. ವೆಚ್ಚದ ಈ ಮಹತ್ವಾಕಾಂಕ್ಷೆಯ ಯೋಜನೆಯು ನುಮಲಿಗಢ ಮತ್ತು ಗೋಹ್ಪುರ್ ನಗರಗಳನ್ನು ಸಂಪರ್ಕಿಸಲಿದೆ. ಸುರಂಗ ನಿರ್ಮಾಣವಾದ ಬಳಿಕ ಇದು ಭಾರತದ ಇತಿಹಾಸದಲ್ಲೇ ಮೊದಲ ಬಾರಿ ನದಿಯಡಿ ನಿರ್ಮಿಸಲಾದ ರಸ್ತೆ ಸುರಂಗವಾಗಲಿದೆ.
ಇದನ್ನು ಓದಿ: ಟಾಟಾ–ಏರ್ಬಸ್ ಜಂಟಿಯಾಗಿ H125 ಹೆಲಿಕಾಪ್ಟರ್ ನಿರ್ಮಾಣಕ್ಕೆ ಮುಂದಾಗಿವೆ
ಅಧಿಕಾರಿಗಳ ಪ್ರಕಾರ, ಈ ಯೋಜನೆ ಪೂರ್ಣಗೊಂಡ ಬಳಿಕ ಅರುಣಾಚಲ ಪ್ರದೇಶದ ಚೀನಾದ ಗಡಿಯ ಭಾಗಕ್ಕೆ ರಸ್ತೆ ಸಂಪರ್ಕವನ್ನು ಬಲಪಡಿಸುವ ಪ್ರಮುಖ ಕಾರ್ಯತಂತ್ರದ ಮೂಲಸೌಕರ್ಯವಾಗಲಿದೆ. ಇದರ ಮೂಲಕ ರಕ್ಷಣಾ ಇಲಾಖೆ, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು ಬಹುಮುಖ್ಯ ಪ್ರಯೋಜನ ಪಡೆಯಲಿವೆ.
ಇದನ್ನು ಓದಿ: ಭಾರತಕ್ಕೆ ಬರುತ್ತಿದೆ ಬ್ರಹ್ಮೋಸ್ ಮೀರಿಸುವ ಹೈಪರ್ಸಾನಿಕ್ ಕ್ಷಿಪಣಿ – ಪಾಕಿಸ್ತಾನದಲ್ಲಿ ಆತಂಕ
ಬ್ರಹ್ಮಪುತ್ರ ನದಿ ಪ್ರದೇಶದ ವಾತಾವರಣ ಹಾಗೂ ನದಿಯ ಹರಿವುಗಳನ್ನು ಗಮನದಲ್ಲಿಟ್ಟುಕೊಂಡು ಸುರಂಗ ನಿರ್ಮಾಣ ತಂತ್ರಜ್ಞಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲಾಗುತ್ತಿದೆ. ಸುರಂಗದ ಉದ್ದ, ವಿನ್ಯಾಸ ಮತ್ತು ಭದ್ರತಾ ವ್ಯವಸ್ಥೆಗಳ ಕುರಿತು ಅಂತಿಮ ತೀರ್ಮಾನ ಕೇಂದ್ರದ ಅನುಮೋದನೆಯ ನಂತರ ಪ್ರಕಟವಾಗಲಿದೆ.

[…] […]