ಚನ್ನರಾಯಪಟ್ಟಣ: ತಾಲೂಕಿನ ತೆವಡಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಆರ್ಥಿಕ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿ, ಹಾಗೂ ಕೆರೆ ಸಮಿತಿ, ಗ್ರಾಮಸ್ಥರ ಸಹಭಾಗಿತ್ವದೊಂದಿಗೆ
892ನೇ ನಮ್ಮೂರು ನಮ್ಮ ಕೆರೆ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ನಡೆಸಲಾಯಿತು,
ಶ್ರೀಯುತ ರೇಣುಕುಮಾರ್ ತಾಲ್ಲೂಕು ದಂಡಾಧಿಕಾರಿಗಳು ಹೊಳೆನರಸೀಪುರ ನಾಮಫಲಕ ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಬಾಗಿನ ಸಮರ್ಪಣೆ ಯನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ಯೋಗೀಶ್ ಸರ್ ಹಾಗೂ ಮಾನ್ಯ ಯೋಜನಾಧಿಕಾರಿಗಳಾದ ರಾಘವೇಂದ್ರ ಸರ್ ರವರು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಜಿಲ್ಲಾ ನಿರ್ದೇಶಕರಾದ ಯೋಗೀಶ್ ಸರ್ ರವರು ಮಾತನಾಡುತ್ತಾ, ರಾಜ್ಯಾದ್ಯಂತ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ 892ನೇ ಕೆರೆ ಹೂಳು ತೆಗೆದು ಅಭಿವೃದ್ಧಿ ಪಡೆಸಲಾಗಿದೆ ಇದರ ಮಹತ್ವ ಹಾಗೂ ಪ್ರಯೋಜನಗಳ ಮಾಹಿತಿ ನೀಡಿದರು ಹಾಗೆ ಶ್ರೀ ಕ್ಷೇತ್ರದ 800 ವರ್ಷಗಳ ಇತಿಹಾಸ ಹಾಗೂ ಪೂಜ್ಯರ ಚತುರ್ವಿಧದಾನ ಪರಂಪರೆ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಕೆರೆಯ ಪ್ರಯೋಜನಗಳ ಬಗ್ಗೆ ಮನಮುಟ್ಟುವಂತೆ ತಿಳಿಸಿದರು.
ಶ್ರೀಯುತ ಮಲ್ಲಿಕಾರ್ಜುನ್ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀ ಕ್ಷೇತ್ರದಿಂದ ಅನುದಾನ ಪಡೆದು ನಮ್ಮೂರ ಕೆರೆಗೆ ಪುನರ್ಜೀವ ನೀಡಿದಂತಾಗಿದೆ ಇದರ ಅನುಕೂಲ ಗ್ರಾಮಸ್ಥರು ಪಡೆಯಲು ತಿಳಿಸಿದರು ಹಾಗೆ ಪೂಜ್ಯರ ಅಧ್ಯಕ್ಷತೆಯಲ್ಲಿ ಸಂಸ್ಥೆ ಮಾಡುತ್ತಿರುವ ಸಮಾಜಮುಖಿ ಕಾರ್ಯಕ್ರಮಕ್ಕೆ ಎಲ್ಲರೂ ಕೃತಜ್ಞರಾಗಿರಬೇಕುಂದು ತಿಳಿಸುತ್ತಾ , ಇತ್ತೀಚಿನ ದಿನಗಳಲ್ಲಿ ಕೆಲವು ಕಿಡಿಗೇಡಿಗಳು ದುಷ್ಕೃತ್ಯ ನಡೆಸುತ್ತಿದ್ದು ಇದರ ವಿರುದ್ಧ ನಾವೆಲ್ಲರೂ ಸಿಡಿದು ನಿಲ್ಲುವ ಕಾಲ ಬಂದಿದೆ ಶ್ರೀ ಮಂಜುನಾಥ ಕಿಡಿಗೇಡಿಗಳ ನಾಶ ಮಾಡೇ ಮಾಡುತ್ತಾನೆ ಧರ್ಮಕ್ಕೆ ಸತ್ಯಕ್ಕೆ ಯಾವಾಗಲು ಜಯ ಎಂದು ತಿಳಿಸಿದರು
ಶ್ರೀಯುತ ಕೆರೆ ಸಮಿತಿ ಅಧ್ಯಕ್ಷರಾದ ಮಂಜುನಾಥ್ ರವರು ಮಾತನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು ನಮ್ಮ ಊರಿನಲ್ಲಿ ಅನುಕೂಲವಾಗುವಂತೆ ಕೆರೆಯ ಊಳನ್ನು ತೆಗೆದು ಜಾನುವಾರುಗಳಿಗೆ ರೈತರಿಗೆ ಅನುಕೂಲವಾಗುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭ ಹರೀಶ್ ಗ್ರಾಮ ಲೆಕ್ಕಾಧಿಕಾರಿಗಳು ಹೊಳೆನರಸೀಪುರ ಗ್ರಾಮ ಪಂಚಾಯತಿ ಸದಸ್ಯರಾದ ನಂಜೇಗೌಡರು ಕೆರೆ ಅಭಿಯಂತರದ ಕಾರ್ತಿಕ್ ಸಮಿತಿಯ ಸದಸ್ಯರಾದ ಮಂಜೇಗೌಡ್ರು ನಾರಾಯಣ್ ವರದೇ ಗೌಡ ರವಿಕುಮಾರ್ ಪುಟ್ಟೇಗೌಡರು ಅವಂತೇಶ್ ಮೇಲ್ವಿಚಾರಕರಾದ ನರಸಿಂಹಮೂರ್ತಿ ಕೃಷಿ ಮೇಲ್ವಿಚಾರಕ ಲಿಂಗರಾಜು ಯೂಟ್ಯೂಬರ್ ಶಶಿಕುಮಾರ್ ಸೇವಾ ಪ್ರತಿನಿಧಿ ಪ್ರಭಾವತಿ ನೀಲಾವತಿ , ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
ವರದಿ : ಮಂಜುನಾಥ್ ಐ ಕೆ
