ತುಮಕೂರು:ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಸುರೇಶ್ ಗೌಡರವರ ಹುಟ್ಟುಹಬ್ಬದ ಪ್ರಯುಕ್ತ ತುಮಕೂರು ಗ್ರಾಮಾಂತರ ಪ್ರದೇಶದ ಸಿರಿವರ ರಸ್ತೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳಿಗೆ ಸುರೇಶ್ ಗೌಡ ಅಭಿಮಾನಿಗಳ ಬಳಗ, ನಾಗರೀಕ ಹಿತಸಂರಕ್ಷಣಾ ಸಮಿತಿ ಹಾಗೂ ಡಾ|| ಎನ್.ಪಿ.ರಕ್ಷಿತ್ ಅಭಿಮಾನಿಗಳ ಬಳಗದ ಜಂಟಿ ಸಹಭಾಗಿತ್ವದಲ್ಲಿ ಸಿಹಿ ತಿಂಡಿ ವಿತರಿಸಿ ವಿಶೇಷವಾಗಿ ವಿನೂತನವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿಗಳು, ಮೂರು ಸಂಘಗಳ ಪ್ರಧಾನ ಕಾರ್ಯದರ್ಶಿಗಳಾದ ಹೆಗ್ಗೆರೆ ಚೇತನ್ ಯಾದವ್, ನಿರ್ದೇಶಕರಾದ ಗೂಳೂರಿನ ನವಾಜ್, ತಾವರೆಕೆರೆಯ ರಂಗಯ್ಯ ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
