ಸಕಲೇಶಪುರ: ಸಾಲದ ಕಂತು ಪಾವತಿಸಲು ಖಾಸಗಿ ಫೈನಾನ್ಸ್ ಸಂಸ್ಥೆ ಒತ್ತಡ ಹೇರಿದ ಪರಿಣಾಮ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಸಿಡಗಳಲೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮೃತರು ಗ್ರಾಮದ ಮಲ್ಲೇಶ್ ಅವರ ಪತ್ನಿ ಪುಟ್ಟಲಕ್ಷ್ಮೀ (45). ಅವರು ಹಾಸನದ ಖಾಸಗಿ ವಾಸ್ತು ಹೌಸಿಂಗ್ ಫೈನಾನ್ಸ್ ಸಂಸ್ಥೆಯಿಂದ ಮನೆ ನಿರ್ಮಾಣಕ್ಕಾಗಿ ಸಾಲ ಪಡೆದಿದ್ದರು. ಕಳೆದ ಒಂದು ವರ್ಷದಿಂದ ಯಾವುದೇ ಬಾಕಿ ಉಳಿಸದೆ ಪ್ರತಿ ತಿಂಗಳು ಕಂತು ಪಾವತಿಸುತ್ತಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಇತ್ತೀಚೆಗೆ ₹15,100 ಕಂತು ಪಾವತಿಸಲು ಕಾಲಾವಕಾಶ ಕೇಳಿದರೂ ಸಂಸ್ಥೆಯ ಅಧಿಕಾರಿಗಳು ಒಪ್ಪದೆ ನಿರಂತರವಾಗಿ ಮನೆಗೆ ಬಂದು ಒತ್ತಡ ಹೇರಿದ್ದರೆಂದು ಕುಟುಂಬದವರು ಆರೋಪಿಸಿದ್ದಾರೆ.
ಈ ಕಿರುಕುಳದಿಂದ ಬೇಸತ್ತ ಪುಟ್ಟಲಕ್ಷ್ಮೀ ಅಕ್ಟೋಬರ್ 1 ರಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದರು. ತಕ್ಷಣ ಪತಿ ಮಲ್ಲೇಶ್ ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹಾಸನ: ಹಾಸನಾಂಬೆ ದರ್ಶನೋತ್ಸವ – ಭಕ್ತರಿಗೆ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ವಿಡಿಯೋ ಮೂಲಕ ಮನವಿ
