ನವದೆಹಲಿ: ಭಾರತದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ದೇಶದ ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ‘ವಿಕಸಿತ್ ಭಾರತ್ ಬ್ಯುಲ್ಡಥಾನ್ 2025’ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆನೀಡಿದ್ದಾರೆ.
ಈ ಅಭಿಯಾನವನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020 (NEP 2020) ಅಡಿಯಲ್ಲಿ, ತಂತ್ರಜ್ಞಾನ ಅಳವಡಿಕೆ ಮೂಲಕ ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾಗಿದೆ.
ಇದನ್ನು ಓದಿ: ಉಡುಪಿ: ರಾಜ್ಯದ ಮೊದಲ ಅನಾಥ ಮಾನಸಿಕ ರೋಗಿಗಳ ಚಿಕಿತ್ಸೆ ಕೇಂದ್ರ ಶೀಘ್ರ ಆರಂಭ
ಏನಿದು ವಿಕಸಿತ್ ಭಾರತ್ ಬ್ಯುಲ್ಡಥಾನ್?
ದೇಶಾದ್ಯಂತದ ಸುಮಾರು 3 ಲಕ್ಷ ಪ್ರೌಢಶಾಲೆಗಳ 5 ಕೋಟಿಗೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರಾಯೋಗಿಕ ಪ್ರತಿಭೆ, ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನ ಕೌಶಲ್ಯಗಳನ್ನು ಪ್ರದರ್ಶಿಸಲು ಈ ವೇದಿಕೆಯು ಅವಕಾಶ ನೀಡಲಿದೆ.
ಶಾಲಾ ಮಟ್ಟದಲ್ಲೇ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಅಭಿಯಾನಕ್ಕೆ ನೊಂದಾಯಿಸಿಕೊಳ್ಳಬಹುದು.
ಅಭಿಯಾನದ ಪ್ರಮುಖ ಥೀಮ್ಗಳು:
1️⃣ ಸ್ವಾವಲಂಬಿ ಭಾರತ
2️⃣ ಸ್ವದೇಶೀ
3️⃣ ವೋಕಲ್ ಫಾರ್ ಲೋಕಲ್
4️⃣ ಸಮೃದ್ಧ್ ಭಾರತ್
ಈ ನಾಲ್ಕು ವಿಷಯಗಳಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಹೊಸ ಆಯಾಮ ನೀಡಬಲ್ಲ ಆಲೋಚನೆಗಳು ಮತ್ತು ಪ್ರಸ್ತಾಪಗಳನ್ನು ವಿದ್ಯಾರ್ಥಿಗಳು ಮಂಡಿಸಬಹುದಾಗಿದೆ.
ಶಿಕ್ಷಣ ಸಚಿವ ಪ್ರಧಾನ್ ಅವರು, “ಈ ಅಭಿಯಾನವು ಯುವ ಮನಸ್ಸುಗಳಲ್ಲಿ
