ಕೆ.ಆರ್.ಪೇಟೆ.ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಹಿರಿಯ ಮುಖಂಡ ಎ.ಬಿ. ನಂಜೇಗೌಡ (76) ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಶ್ರೀಯುತರಿಗೆ ಇಬ್ಬರು ಪುತ್ರಿಯರು ಒಬ್ಬ ಪುತ್ರ ಹಾಗೂ ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮೀಸೆ ಕಿಟ್ಟಣ್ಣ,ಹಾಗೂ *ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪೂರ್ಣಚಂದ್ರ ತೇಜಸ್ವಿ ರವರ ಸೋದರಮಾವ ಹಾಗೂ ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎನ್.ಆರ್.ರವಿಶಂಕರ್* ರವರ ಸೇರಿದಂತೆ ತುಂಬಿದ ಬಂಧು ಬಳಗ ಬಿಟ್ಟು ಅಗಲಿದ್ದಾರೆ.
ಮೃತರ ಅಂತಿಮ ವಿಧಿ ವಿಧಾನ ಮಂಗಳವಾರ ಮದ್ಯಾಹ್ನ 3 ಗಂಟೆಗೆ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ನಿಧನಕ್ಕೆ ಶಾಸಕರಾದ ಎಚ್. ಟಿ. ಮಂಜು, ಮಾಜಿ ಶಾಸಕರಾದ ಕೆ .ಬಿ .ಚಂದ್ರಶೇಖರ್, ಬಿ .ಪ್ರಕಾಶ್ ಮಾಜಿ ಸಚಿವರಾದ ಕೆ. ಸಿ .ನಾರಾಯಣಗೌಡ ,ಸಮಾಜ ಸೇವಕರಾದ ಆರ್. ಟಿ.ಓ ಮಲ್ಲಿಕಾರ್ಜುನ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ,ಎಂ. ಬಿ .ಹರೀಶ್, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರ ಕುಮಾರ್,ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ,ರಾಜ್ಯ ಜೆಡಿಎಸ್ ವಕ್ತರ ಗದ್ದೆಹೊಸೂರು ಅಶ್ವಿನ್ ಕುಮಾರ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್,ಅಕ್ಕಿಹೆಬ್ಬಾಳು ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.
ಮಾಹಿತಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] ಕೆ.ಆರ್.ಪೇಟೆ : ತಾಲೂಕಿನ ಅಕ್ಕಿಹೆಬ್ಬಾಳು ಗ್… […]