ನವದೆಹಲಿ: ಭಾರತ ಮತ್ತು ಬ್ರಿಟನ್ ರಾಷ್ಟ್ರಗಳು ‘ಮಾರ್ಟ್ಲೆಟ್’ (Martlet) ಎಂಬ ಹಗುರವಾದ ಬಹು-ಪಾತ್ರ ಕ್ಷಿಪಣಿ ವ್ಯವಸ್ಥೆ ಪೂರೈಕೆಗಾಗಿ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದವು ಎರಡೂ ದೇಶಗಳ ರಕ್ಷಣಾ ತಂತ್ರಜ್ಞಾನ ಸಹಕಾರಕ್ಕೆ ಮತ್ತೊಂದು ಬಲವಾದ ಹೆಜ್ಜೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾರ್ಟ್ಲೆಟ್ ಕ್ಷಿಪಣಿ ವ್ಯವಸ್ಥೆ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು, ಇದನ್ನು ಗಾಳಿಯಿಂದ ಗಾಳಿಗೆ, ಗಾಳಿಯಿಂದ ಮೇಲ್ಮೈಗೆ, ನೆಲದಿಂದ ಮೇಲ್ಮೈಗೆ, ಮತ್ತು ನೆಲದಿಂದ ಗಾಳಿಗೆ ಉದ್ದೇಶಿತ ಕ್ಷಿಪಣಿ ದಾಳಿಗಳಿಗೆ ಉಪಯೋಗಿಸಬಹುದು. ಈ ವ್ಯವಸ್ಥೆಯು ನೌಕಾ ಮತ್ತು ಭೂ ರಕ್ಷಣಾ ದಳಗಳಿಗೆ ವೇಗ, ನಿಖರತೆ ಹಾಗೂ ಪರಿಣಾಮಕಾರಿತ್ವದ ದೃಷ್ಟಿಯಿಂದ ಅತ್ಯುತ್ತಮವಾಗಲಿದೆ ಎಂದು ತಿಳಿದುಬಂದಿದೆ.
ಇದನ್ನು ಓದು: ಡಾ. ಎಂ.ಎಸ್. ಸ್ವಾಮಿನಾಥನ್ ಜನ್ಮ ಶತಮಾನೋತ್ಸವ: ಮಹಾರಾಷ್ಟ್ರ ಸರ್ಕಾರ ಆಗಸ್ಟ್ 7 ಅನ್ನು ಸುಸ್ಥಿರ ಕೃಷಿ ದಿನ ಘೋಷಣೆ
ಈ ಒಪ್ಪಂದದಿಂದ ಭಾರತಕ್ಕೆ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನ ಲಭ್ಯವಾಗಲಿದ್ದು, ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಮತ್ತೊಂದು ಹೆಜ್ಜೆ ಇರಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
