ಚನ್ನರಾಯಪಟ್ಟಣ: ಪಟ್ಟಣದ ಭರತನಾಟ್ಯ ಕಲಾವಿದೆ ಕುಮಾರಿ ಸಿ.ಎಂ. ಶಶ್ಮಿತಾ ಅವರನ್ನು ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಸನ್ಮಾನಿಸಿ ಗೌರವಿಸಿದೆ.
ಸಂಸ್ಥೆಯು ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಶಶ್ಮಿತಾ ಭರತನಾಟ್ಯ ಪ್ರದರ್ಶನ ನೀಡಿದರು. ಶಿವನ ಕುರಿತಾದ ಅವರ ನೃತ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಕುಮಾರಿ ಶಶ್ಮಿತಾ, ಪಟ್ಟಣದ ಶ್ರೀಮತಿ ರಶ್ಮಿ ಹಾಗೂ ಮಂಜುನಾಥ್ ದಂಪತಿಯ ಸುಪುತ್ರಿ. ಕಳೆದ ನಾಲ್ಕು ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದು, ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ನೃತ್ಯ ವಿಶ್ವವಿದ್ಯಾಲಯ ನಡೆಸುವ ಜೂನಿಯರ್ ಗ್ರೇಡ್ ಹಂತವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ವಿದೂಷಿ ಶುಭ್ರತಾ ಅವರ ಬಳಿ ಸೀನಿಯರ್ ಹಂತದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇದನ್ನು ಓದಿ: ಚನ್ನರಾಯಪಟ್ಟಣ- ರಂಗೋಲಿ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರದೇಶದ ಜನಬಾಗಿ ಪೂರಿ ಭಟ್ಟಿ ಮಂಜಣ್ಣ
ಇವರ ಸಾಧನೆಯನ್ನು ಗುರುತಿಸಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯು ಸನ್ಮಾನಿಸಿ ಅಭಿನಂದಿಸಿದೆ.
ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರು ಹಾಗೂ ಸಮಿತಿಯ ಅಧ್ಯಕ್ಷರಾದ ಸಿ.ಎನ್. ಅಶೋಕ್, ಕಾರ್ಯದರ್ಶಿ ಮನೋಹರ್, ಸಿ.ಕೆ. ಕೃಷ್ಣ, ಪುರಿಬಟ್ಟಿ ಮಂಜಣ್ಣ, ಪುರಸಭೆ ಉಪಾಧ್ಯಕ್ಷೆ ಕವಿತಾ ರಾಜು, ಪುರಸಭೆಯ ಮಾಜಿ ಅಧ್ಯಕ್ಷೆ ಬನಶಂಕರಿ ರಘು, ರಾಧಾ, ಸಾಯಿ ಎಂಟರ್ಪ್ರೈಸಸ್ನ ರಕ್ಷಿತ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
