ಹಾಸನ, ಅಕ್ಟೋಬರ್ 20: “ಸಿದ್ಧರಾಮಯ್ಯ ಸರ್ಕಾರ ಎಡಬಿಡಂಗಿ, ತುಘಲಕ್ ಆಡಳಿತ ನಡೆಸುತ್ತಿದೆ. ರಾಜ್ಯ ಸರ್ಕಾರಕ್ಕೆ ಸಮೀಕ್ಷೆ ಮಾಡುವ ಅಧಿಕಾರವಿಲ್ಲ, ಅದು ಕೇಂದ್ರ ಸರ್ಕಾರದ ಹಕ್ಕು,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ರಾಜ್ಯದ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಕಾರ್ಯದ ವಿಳಂಬವಾಗಿದೆ, “ದಸರಾ ಮುಗಿದರೂ ಶಾಲೆಗಳು ಆರಂಭವಾಗಿಲ್ಲ, ಮೂರು ತಿಂಗಳು ಕಳೆದರೂ ಸಮೀಕ್ಷೆ ಮುಗಿದಿಲ್ಲ” ಎಂದು ಕಿಡಿಕಾರಿದರು. ಸಮೀಕ್ಷೆಗಾರರಿಗೆ ತರಬೇತಿ ನೀಡದಿರುವುದರಿಂದ ಆತ್ಮಹತ್ಯೆ, ಅಪಘಾತ ಸಂಭವಿಸುತ್ತಿದೆ ಎಂದ ವಿರೋಧ ವ್ಯಕ್ತಪಡಿಸಿರುವ ಸುಧಾಮೂರ್ತಿ ಬಗ್ಗೆ ಸರ್ಕಾರದ ನಡೆಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಸಹಾಯ ಮಾಡಿದವರಿಗೆ ಸಹ ಧಮ್ಕಿ. ನೀವು ದೇವಲೋಕದಿಂದ ಬಂದವರಾ?” ಎಂದು ಪ್ರಶ್ನಿಸಿದರು.
ಇದನ್ನು ಓದಿ : ಆರ್ಎಸ್ಎಸ್ನ್ನು ಮುಟ್ಟಿದವರು ನಾಶವಾಗಿದ್ದಾರೆ”-ಹಾಸನಾಂಬ ದರ್ಶನ ಬಳಿಕ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ
ಹೈಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿ, “ನ್ಯಾಯಾಲಯದ ಆದೇಶದ ನಿರ್ಲಕ್ಷ್ಯ ಸರ್ಕಾರದ ಅವಗೌರವ. 165 ಕೋಟಿ ರೂ. ಖರ್ಚು ಮಾಡಿ ಫಲವನ್ನು ಶೂನ್ಯಗೊಳಿಸಿದ್ದಾರೆ. ಈಗ 400 ಕೋಟಿ ರೂ. ಮತ್ತೆ ಖರ್ಚು — ಜನರ ಹಣವನ್ನು ತೇಗಿಸುತ್ತಿದ್ದಾರೆ” ಎಂದು ಆರೋಪಿಸಿ, “ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ, ಭಿನ್ನಮತ ಇದೆ. ನ್ಯಾಯಾಂಗವನ್ನು ಅವಹೇಳನ ಮಾಡುವ, ಸಂವಿಧಾನಕ್ಕೆ ಅವಮಾನ ಮಾಡುವ ಸರ್ಕಾರ ಇದು” ಎಂದು ಖಂಡನೆ ವ್ಯಕ್ತಪಡಿಸಿದರು.
