ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಶ್ರದ್ಧಾ ಭಕ್ತಿ ಕೇಂದ್ರವಾಗಿರುವ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ದೀಪಾವಳಿ ಅಮಾವಾಸ್ಯೆ ಹಿನ್ನೆಲೆ ಕಾಪನಹಳ್ಳಿ ಗವಿಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನವೀರಯ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರಿಗೆ ಒಂದು ಸಾವಿರದ ಒಂದು ಮೂಸಂಬಿ ಹಣ್ಣಿನಿಂದ ಅಲಂಕಾರಿಸಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು.

ಪೂಜಾ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಚನ್ನವಿರಯ್ಯ ಮಹಾಸ್ವಾಮಿ* ನಮ್ಮ ಪುಣ್ಯ ಕ್ಷೆತ್ರದಲ್ಲಿ ಪ್ರತಿ ಅಮಾವಾಸ್ಯೆಗೂ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಗಳಿಗೆ ವಿಶೇಷ ಅಲಂಕಾರ ಪೂಜೆ ಜೊತೆಗೆ ಈ ಬಾರಿಯ ದೀಪಾವಳಿ ಅಮಾವಾಸ್ಯೆ ಹಿನ್ನೆಲೆ. ವಿವಿಧ ಬಗೆಯ ಪುಷ್ಪಲಂಕಾರ ಹಾಗೂ ಒಂದು ಸಾವಿರದ ಒಂದು ಮೂಸುಂಬಿ ಹಣ್ಣಿನಿಂದ ವಿಶೇಷವಾಗಿ ಅಲಂಕರಿಸಿದೇವೆ ಎಂದ ಅವರು ದೀಪಾವಳಿ ಅಮಾವಾಸ್ಯೆಯ ಎಂದರೆ ಇತಿಹಾಸವಿದೆ 14 ವರ್ಷಗಳ ವನವಾಸದ ನಂತರ ಶ್ರೀರಾಮನು ಅಯೋಧ್ಯೆಗೆ ಹಿಂದಿರುಗಿದ ದಿನವನ್ನು ಗುರುತಿಸಲು ದೀಪಗಳನ್ನು ಬೆಳಗಿಸುವ ಸಂಪ್ರದಾಯವಿತ್ತು. ದೀಪಾವಳಿ ಅಮಾವಾಸ್ಯೆಯ ದಿನದಂದು ಪೂರ್ವಜರನ್ನು ಪೂಜಿಸಲು ಕೂಡ ಪವಿತ್ರ ದಿನವೆಂದು ಪರಿಗಣಿಸಿರುವ ಇತಿಹಾಸದಲ್ಲಿ ಉಲ್ಲೇಖಗಳಿವೆ ಹಿತಿಹಾಸ ತಿಳಿಸಿ ನೆರೆದಿದ್ದ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ* ನಮ್ಮ ತಾಲೂಕಿನಲ್ಲಿರುವ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಸಾಮಾನ್ಯ ದೇವಾಲಯ ಎಂಬ ಹೆಸರಿಗೆ ಸೀಮಿತವಾಗಿಲ್ಲ.ನಂಬಿ ಬಂದ ಭಕ್ತರ ಇಷ್ಟಾರ್ಥ ಸಿದ್ಧಿ ಕಲ್ಪಿಸಿ ಭಕ್ತರ ಮನದ ಅಂಗಳದಲ್ಲಿ ಶ್ರದ್ಧ ಭಕ್ತಿ ಕೇಂದ್ರವಾಗಿ ಕಂಗೊಳಿಸುತ್ತಿದೆ.ದಾನಿಗಳ ಸಹಕಾರದಿಂದ ಪ್ರತಿ ವಿಶೇಷ ದಿನಗಳಲ್ಲಿ ಭಗವಂತನಿಗೆ ವಿವಿಧ ಬಗೆಯ ಫಲ ಪುಷ್ಪಗಳಿಂದ ಅಲಂಕಾರಿಸಿ ವಿಭಿನ್ನವಾಗಿ ಭಗವಂತನ ದರ್ಶನಕ್ಕೆ ಮಠದ ಪೀಠಾಧ್ಯಕ್ಷರಾದ ಶ್ರೀ ಚನ್ನವೀರ ಮಹಾಸ್ವಾಮಿಗಳು ನೇತೃತ್ವದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ. ಇಂತಹ ಇತಿಹಾಸ ಪವಾಡ ಪುಣ್ಯಕ್ಷೇತ್ರ ದೇವಾಲಯ ನಮ್ಮ ತಾಲೂಕಿನಲ್ಲಿ ಇರುವುದು ನಮ್ಮೆಲ್ಲರ ಸುದೈವ ಎಂದರು
ವಿಶೇಷ ಅಲಂಕಾರ ಕಂಗೊಳಿಸುತ್ತಿದ್ದ ಭಗವಂತನ ದರ್ಶನ ಪಡೆಯಲು ಬಂದ ನೂರಾರು ಭಕ್ತರಿಗೆ ಮಠದಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ, ದೇವಾಲಯದ ಪ್ರಧಾನ ಅರ್ಚಕ ಹೇಮಂತ್, ಹಿರಿಯ ಮುಖಂಡ ಶೈಲೇಂದ್ರ,ಯೋಗೇಶ್,ಪಟೇಲ್ ಶಂಕರ್, ಸುರೇಶ್, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅವರ ಆಪ್ತ ಸಹಾಯಕ ಗಂಜೀಗೆರೆ ಮಹೇಶ್, ಶಾಂತೇಶ್,ಸೇರಿದಂತೆ ನೂರಾರು ಭಕ್ತರು ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
