ಹಾಸನ, ಅ.22:“ಎಲ್ಲಾ ಇಲಾಖೆಗಳ ಸಹಕಾರ ಮತ್ತು ಜನಸಹಭಾಗಿತ್ವದಿಂದ ಈ ಬಾರಿ ಹಾಸನಾಂಬೆ ಜಾತ್ರೋತ್ಸವ ಅತ್ಯಂತ ಯಶಸ್ವಿಯಾಗಿದೆ,” ಎಂದು ಡಿಸಿ ಲತಾ ಕುಮಾರಿ ಹೇಳಿದರು.
ಮಾದ್ಯಮದೊಂದಿಗೆ ಮಾತನಾಡಿದ ಅವರು, ಸುಮಾರು 25 ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಹಾಸನಾಂಬೆಯ ಜಾತ್ರೆಯನ್ನು ಮನೆ ಹಬ್ಬದಂತೆಯೇ ಜಿಲ್ಲೆಯಾದ್ಯಾಂತ ಸಂಭ್ರಮಿಸಿದ್ದಾರೆ. ಭಕ್ತರ ನಿರಂತರ ಆಗಮನದಿಂದ ದೇವಾಲಯದ ಒಟ್ಟು 20ರಿಂದ 21 ಕೋಟಿಯವರೆಗೆ ಆದಾಯ ಬಂದಿದೆ.
ಇದನ್ನು ಓದು : ಭಾರತದ ಮೊದಲ ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್ ಹಡಗು: ಪ್ರಧಾನಿಯೊಂದಿಗೆ ದೀಪಾವಳಿ ಹಬ್ಬಾಚರಣೆ
ಜಾತ್ರಾ ಕಾಲದಲ್ಲಿ ಭಕ್ತರ ಸುರಕ್ಷತೆ, ಸಾರಿಗೆ, ಆರೋಗ್ಯ, ಸ್ವಚ್ಛತೆ, ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಮೂಲಸೌಕರ್ಯ ವ್ಯವಸ್ಥೆಗಳು ಸಮರ್ಪಕವಾಗಿ ನಿರ್ವಹಿಸಲ್ಪಟ್ಟಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.
ಜಾತ್ರಾ ವ್ಯವಸ್ಥೆಯಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ , ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ಹಾಗೂ ರಾಜಕೀಯ ಮುಖಂಡರು ಸಕ್ರೀಯವಾಗಿ ಪಾಲ್ಗೊಂಡು ಪೂರ್ಣ ಸಹಕಾರ ನೀಡಿದ್ದು, ಇಂದು ಹಾಸನಾಂಬೆ ಜಾತ್ರಾ ಮಹೋತ್ಸವ ಯಶಸ್ವಿಯಾಗಲೂ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಹಾಸನಾಂಬೆಯ ಭಕ್ತಿ ಜ್ಯೋತಿ ಜಿಲ್ಲೆಯ ಎಲ್ಲರ ಮನಗಳಲ್ಲಿ ಮತ್ತೆ ಹೊಸ ಆಶಾಭಾವನೆ ಮೂಡಿಸಿದೆ.
