ಬೆಳಗಾವಿ, ಅ.23: ಬೆಳಗಾವಿಯ ಹಿರೇಬಾಗೇವಾಡಿ ಪ್ರದೇಶದಲ್ಲಿ ಇತ್ತೀಚೆಗೆ ಮಲಬಾರ್ ಗ್ಲೈಡಿಂಗ್ ಫ್ರಾಗ್ (Malabar Gliding Frog) ಎಂಬ ಅಪರೂಪದ ಕಪ್ಪೆ ಪ್ರಭೇದ ಕಂಡುಬಂದಿದೆ. ವೈಜ್ಞಾನಿಕವಾಗಿ ಇದನ್ನು Rhacophorus malabaricus ಎಂದು ಕರೆಯಲಾಗುತ್ತದೆ.
ಈ ಕಪ್ಪೆ ಸುಮಾರು 10 ಸೆಂ.ಮೀ (4 ಇಂಚು) ಉದ್ದವಿರುವದು ಮತ್ತು ಪಶ್ಚಿಮ ಘಟ್ಟಗಳಲ್ಲಿ, ವಿಶೇಷವಾಗಿ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ತೇವ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮರಗಳಲ್ಲಿ ವಾಸಿಸುವ ಈ ತಾವಳೆ ಕಪ್ಪೆಗಳು (Arboreal species) ತಮ್ಮ ವಿಶಿಷ್ಟ ರೀತಿಯ ಗ್ಲೈಡಿಂಗ್ ಚಲನವಲನಕ್ಕಾಗಿ ಹೆಸರುವಾಸಿಯಾಗಿದೆ.
ಪ್ರಾಣಿ ಪ್ರೇಮಿ ಮತ್ತು ಪರಿಸರ ಸಂರಕ್ಷಣಾ ತಜ್ಞರು ಈ ಹೊಸ ದೃಶ್ಯಾವಳಿಯನ್ನು ಸ್ವಾಗತಿಸಿದ್ದಾರೆ ಮತ್ತು ಸ್ಥಳೀಯ ಅರಣ್ಯ ಹಾಗೂ ಹಸಿರು ಪರಿಸರವನ್ನು ಸಂರಕ್ಷಿಸುವ ಮಹತ್ವವನ್ನು ಪುನಃ ಒತ್ತಿ ಹೇಳಿದ್ದಾರೆ.

[…] […]
[…] […]