ತುಮಕೂರು: ಭೀಮಸಂದ್ರ ವಲಯದ ಭೀಮಸಂದ್ರ ಗ್ರಾಮದಲ್ಲಿ ವಾಸವಾಗಿರುವ ನಿರ್ಗತಿಕರಾಗಿರುವ ಈರಮ್ಮ ರವರಿಗೆ ಡಾ||ಡಿ.ವೀರೇಂದ್ರ ಹೆಗ್ಗಡೆರವರ 58ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಟ್ಟಿಕೊಟ್ಟಿರುವ ವಾತ್ಸಲ್ಯಮನೆಯನ್ನು ಈರಮ್ಮನವರಿಗೆ ಹಸ್ತಾಂತಿರಿಸಿದರು.
ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಮಾತನಾಡಿ ಚತುರ್ದಾನಗಳಿಗೆ ಹೆಸರುವಾಸಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಸುದೀರ್ಘ 58 ವರ್ಷಗಳ ಕಾಲ ಈ ಸಮಾಜಕ್ಕೆ ತಮ್ಮ ಜೀವನವನ್ನು ಮುಡಿಪಾಗಿಸಿರುತ್ತಾರೆ. ನಿರ್ಗತಿಕರಾದ ಈರಮ್ಮ ರವರಿಗೆ ಮನೆಯನ್ನು ಕಟ್ಟಿಕೊಡಲು ಜಾಗ ನೀಡಿದ ಜಗನ್ನಾಥರವರಿಗೆ ಶುಭ ಹಾರೈಸಿ ನೊಂದವರ ಸೇವೆಯನ್ನು ಮಾಡಿದಾಗ ಮಂಜುನಾಥಸ್ವಾಮಿಯ ಸೇವೆಯನ್ನು ಮಾಡಿದಂತೆ ಹೇಳಿದರು. ಪೂಜ್ಯರ ಪಟ್ಟಭಿಷೇಕದ ಈ ದಿನದ ನೆನಪಿಗಾಗಿ ಈ ದಿನ 3 ಮನೆಗಳ ಹಸ್ತಾಂತರ ನಡೆಯಲಿದೆ ಎಂದು ತಿಳಿಸಿದರು.

ತುಮಕೂರು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷರಾದ ರಾಜಶೇಖರ್ ರವರು ಉದ್ಘಾಟನೆ ಮಾಡಿ ಪೂಜ್ಯ ಡಾ||ಡಿ.ವೀರೇಂದ್ರ ಹೆಗಡೆಯವರ ಪಟ್ಟಭಿಷೇಕದ ವರ್ಧಂತಿ ಪ್ರಯುಕ್ತ ಈ ದಿನದಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆಯನ್ನು ನೀಡಲು ನನ್ನ ಜೀವನಲ್ಲಿ ಸಿಕ್ಕ ದೊಡ್ಡ ಭಾಗ್ಯ ಎಂದು ಶುಭ ಹಾರೈಸಿದರು.
ಇದನ್ನು ಓದಿ:ತುಮಕೂರು: ಅ.25 ರಿಂದ ನವೆಂಬರ್ 4ರವರೆಗೆ ಮೈಸೂರು ಸ್ಯಾಂಡಲ್ ಸಾಬೂನು ಮೇಳ
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸಂದೇಶ್.ಪಿ.ಬಿ, ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಅಮರಾನಾಥಶೆಟ್ಟಿ, ಗ್ರಾಮದ ಧಾರ್ಮಿಕ ಕಾರ್ಯಕ್ರಮದ ಪೂಜಾ ಸಮಿತಿಯ ಸದಸ್ಯರು, ಶ್ರೀನಿವಾಸ್, ಶ್ರೀನಿವಾಸ್(ವಾಸಣ್ಣ) ಉಮೇಶ್, ಕುಂಬಯ್ಯ, ವಲಯದ ಮೇಲ್ವಿಚಾರಕರಾದ ಸುದರ್ಶನ್ ವೈ.ಎಂ, ಜ್ಞಾನವಿಕಾಸ ಸಮನ್ವಯ ಅಧಿಕಾರಿ, ಶ್ರೀಮತಿ ಧನಲಕ್ಷ್ಮಿ, ಸೇವಾಪ್ರತಿನಿಧಿ ಗಳಾದ ಮಂಗಳಮ್ಮ ಶೈಲಜಾ ಶಶಿಕಲಾ ಹಸೀನಾ, ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಸಂಘದ ಸದಸ್ಯರು,ಊರಿನ ಹಿರಿಯರು ಉಪಸ್ಥಿತರಿದ್ದರು.
– ಬಿ.ಕೆ.ಚಂದ್ರಚೂಡ
