ಕೆ.ಆರ್.ಪೇಟೆ ತಾಲ್ಲೂಕಿನಾದ್ಯಂತ ಕಳೆದ ವಾರದಿಂದ ಸುರಿದ ಮಳೆಗೆ ಕಾರಿಗನಹಳ್ಳಿ, ಹೆಗ್ಗಡಹಳ್ಳಿ,ಬಿ.ಬಿ ಕಾವಲ್,ಅಗ್ರಹಾರ ಬಡಾವಣೆಯ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಡ ಕುಟುಂಬ ಮನೆಗಳ ಗೋಡೆ ಬಿದ್ದು ಸಾಕಷ್ಟು ಹಾನಿಯದ ಹಿನ್ನೆಲೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಕಾರಿಗನಹಳ್ಳಿ ಗ್ರಾಮದ ಲೀಲಾವತಿ ಕಾಂತರಾಜು,ಪುಟ್ಟಮ್ಮ ಲೇಟ್ ರಾಜೇಗೌಡ,ಸುನಂದ ಸುರೇಶ್, ಹೆಗ್ಗಡಹಳ್ಳಿ ಶಿವಕುಮಾರ್ ಅವರಿಗೆ ಸೇರಿದ ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದ ಘಟನೆ ಸ್ಥಳಕ್ಕೆ ತಹಸೀಲ್ದಾರ್ ಡಾ.ಎಸ್.ಯು ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಮನೆಗಳಿಗೆ ಸರಕಾರದ ನಿಯಮಾವಳಿ ಪ್ರಕಾರ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ಅಶೋಕ್ ತಿಳಿಸಿದರು.

ಬಳಿಕ ಮಾತನಾಡಿದ ತಾಲ್ಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಕಳೆದ ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ನಮ್ಮ ಗ್ರಾಮ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಲ್ಲಿ ಬಡ ಕುಟುಂಬಗಳು ನಿರ್ಗತಿಕರು ವಾಸಿಸುತ್ತಿದ್ದ ಮನೆಗಳು ನೆಲಸಮಗೊಂಡಿವೆ. ಸರ್ಕಾರ ಪರಿಹಾರದ ನೆಪದಲ್ಲಿ 10 ಮೂಟೆ ಸಿಮೆಂಟು ಬಾರದ ಹಾಗೆ ಪರಿಹಾರ ನೀಡಿದರೆ ಪರಿಹಾರ ಎನ್ನುವುದಿಲ್ಲ. ಹಾಗಾಗಿ ಪರಿಹಾರದ ಹೆಸರಿನಲ್ಲಿ ಬಡ ಕುಟುಂಬಗಳಿಗೆ ಸರ್ಕಾರ ಅಥವಾ ಅಧಿಕಾರಿಗಳು ಮೂಗಿಗೆ ತುಪ್ಪ ಸವರೋದನ್ನ ಬಿಟ್ಟು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜಶ್ವನಿರಕ್ಷಕ ಜ್ಞಾನೇಶ್,ಗ್ರಾಮ ಲೆಕ್ಕಾಧಿಕಾರಿ ರಘು,ಗ್ರಾ. ಪಂ ಮಾಜಿ ಅಧ್ಯಕ್ಷ ಜಯರಾಮ್, ಮುಖಂಡರಾದ ಬಸವರಾಜಪ್ಪ, ರವಿಕುಮಾರ್, ನಾಗರಾಜ್, ಗಂಗಾಧರ್,ಸುರೇಶ ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
