ಚನ್ನರಾಯಪಟ್ಟಣ: ಡಾ.ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯು ಶುಕ್ರವಾರ ಚನ್ನರಾಯಪಟ್ಟಣ ನಗರಕ್ಕೆ ಆಗಮಿಸಿದ್ದು ಹೂವಿನ ಹಾರಗಳನ್ನು ಹಾಕಿ, ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು.
ಚನ್ನರಾಯಪಟ್ಟಣ ತಾಲ್ಲೂಕು ಕಚೇರಿಯ(ಮಿನಿವಿಧಾನಸೌಧ) ಮುಂದೆ ಪ್ರತಿಷ್ಠಾಪನೆ ಆಗಲಿರುವ 12 ಅಡಿ ಎತ್ತರದ ಡಾ.ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯು ಕೆಂಪೇಗೌಡ ವೃತ್ತಕ್ಕೆ ಆಗಮಿಸಿದಾಗ ಶಾಸಕ ಸಿ.ಎನ್. ಬಾಲಕೃಷ್ಣ, ಮಾಜಿ ಎಂಎಲ್ ಸಿ ಎಂ.ಎ. ಗೋಪಾಲಸ್ವಾಮಿ, ತಾಲೂಕು ದಂಡಾಧಿಕಾರಿಗಳಾದ ಶಂಕರಪ್ಪ, ತಾಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಜಿ ಆರ್ ಹರೀಶ್, ಅಂಬೇಡ್ಕರ್ ಪ್ರತಿಮೆಯ ನಿರ್ಮಾಣ ಕರ್ತರಾದ ರಾಮೋಹಳ್ಳಿ ಶಿವಕುಮಾರ್, ಸೇರಿದಂತೆ ಹಲವು ಜನಪ್ರತಿನಿಧಿಗಳು, ದಲಿತ ಸಂಘಟನೆಗಳ ಪದಾಧಿಕಾರಿಗಳು ಪುಷ್ಪವೃಷ್ಟಿ ಮಾಡಿ ಸ್ವಾಗತಿಸಿದರು.

ಜೈ ಭೀಮ್ ಘೋಷಣೆಗಳನ್ನು ಕೂಗುತ್ತ, ನಾಸಿಕ್ ಡೋಲ್ ನಾದಕ್ಕೆ ಕುಣಿಯುತ್ತ, ಪುತ್ಥಳಿಯ ಮೆರವಣಿಗೆಯನ್ನು ಪ್ರಾರಂಭಿಸಿದರು.ರಾಜ್ಯ ಹೆದ್ದಾರಿಯಲ್ಲಿ ಸಾಗಿ, ಮಖಾನ್ ವೃತ್ತ, ಹೊಸ ಬಸ್ ಸ್ಟ್ಯಾಂಡ್ ನಿಲ್ದಾಣದ 2 ವೃತ್ತಗಳು, ಬಿ ಎಂ ರಸ್ತೆ, ನವೋದಯ ವೃತ್ತ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದ ಮೂಲಕ ಚನ್ನರಾಯಪಟ್ಟಣ ಮಿನಿ ವಿಧಾನಸೌಧದ ಆವರಣಕ್ಕೆ ಸಾಗಿತು. ನಗರದ ವಿವಿಧ ವಾರ್ಡುಗಳ ಅಂಬೇಡ್ಕರ್ ಅಭಿಮಾನಿಗಳು ರಸ್ತೆ ಉದ್ದಕ್ಕೂ ಬಿಡಿ ಹೂಗಳು ಹಾಗೂ ಹೂವಿನ ಹಾರ ಹಾಕಿ ಡಾ. ಅಂಬೇಡ್ಕರ್ ಪ್ರತಿಮೆಗೆ ನಮಿಸಿದರು.
ಜೆಡಿಎಸ್ ಮುಖಂಡರಾದ ಬೆಳಗೀಹಳ್ಳಿ ಪುಟ್ಟಸ್ವಾಮಿ, ನವಿಲೇ ಚಂದ್ರಪ್ಪ, ಶ್ರವಣಬೆಳಗೊಳ ಲಕ್ಷ್ಮಣ್, ಗಣೇಶ್ ಗೌಡ, ಕಾಂಗ್ರೆಸ್ ಮುಖಂಡ ಅಣತಿ ಆನಂದ್, ಪುರಸಭೆ ಅಧ್ಯಕ್ಷ ಮೋಹನ್ ಕೋಟೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾದ ಬಿ.ಎನ್.ಮಂಜುನಾಥ್, ಟಿಎಪಿಎಂಎಸ್ ನ ಉಪಾಧ್ಯಕ್ಷರಾದ ಸಿ ಜಿ ಜಗದೀಶ್, ದಲಿತ ಸಂಘಟನೆಯ ಹಿರಿಯ ಮುಖಂಡರುಗಳಾದ ಅಂಬುಗ ಮಲ್ಲೇಶ್,ಕೃಷ್ಣದಾಸ್, ಈಶ್ವರನ್ , ಮಹಾದೇವ್, ದಂಡಿಗನಹಳ್ಳಿ ರವಿ, ಆಲದಹಳ್ಳಿ ವೆಂಕಟೇಶ್, ದಿಂಡಗೂರು ಗೋವಿಂದರಾಜ್, ಬಿ.ರಂಗಪ್ಪ, ಜಂಬೂರುಶಿವಣ್ಣ, ಜಗದೀಶ್, ಮತಿಘಟ್ಟ ಎಂ ಆರ್ ರಂಗಸ್ವಾಮಿ, ಗೋಪಾಲ, ನಾಗೇಶ, ಕೆ ಎನ್ ನಾಗೇಶ್, ರಾಜು ಕುಂದೂರು, ಜಲೇಂದ್ರ, ಸಿ ಜಿ ಸೋಮಶೇಖರ್, ಸಿ ಎನ್ ಅರುಣ್ ಕುಮಾರ್,ದಮ್ಮನಿಂಗಳ ಶಂಕರ್, ಕಂಠಿ, ಗುರಿಗಾರನಹಳ್ಳಿ ಯೋಗೇಶ, ನಾಗರಾಜು, ವಿರೂಪಾಕ್ಷಪುರ ಪ್ರಕಾಶ್, ಪ್ರಭಾಕರ್, ಗವಿರಂಗ,ಮಾದಿಹಳ್ಳಿ ಮಂಜು, ಕೆ ಆರ್ ರವಿಕುಮಾರ್,ಮದುಕುಮಾರ್,ಜಗದೀಶ,ಹಿರೀಸಾವೆ ಮಂಜುನಾಥ್, ಮಧು,ಅಣ್ಣಯ್ಯ, ದಿಂಡಗೂರು ತಿಮ್ಮಯ್ಯ, ಕೃಷ್ಣಮೂರ್ತಿ, ವೆಂಕಟರಾಮ, ಹರೀಶ್,ಕೆ ವಿ ಸತೀಶ್,ಬಾಬು,ಪ್ರಸನ್ನ,ದೊರೆರಾಜು, ಬಾಲು, ಎಂ ಎಂ ದಿಲೀಪ್, ಧರ್ಮರಾಜು, ಸಿ ಪಿ ಮಂಜುನಾಥ್, ಧರಣೇಶ್, ವಕೀಲರಾದ ಆಶೋಕ್, ಷಣ್ಮುಖ, ಎ ಡಿ ಕಾಲೋನಿಯ ಶ್ರೀನಿವಾಸ್ ,ಪುನಿತ್, ಪರಮೇಶ್,ತಗ್ಯಮ್ಮ ಬಡಾವಣೆಯ ಸಿ ಸಿ ಮಂಜುನಾಥ, ಲಕ್ಷ್ಮಣ್,ರಾಮು, ಶ್ರವಣಬೆಳಗೊಳದ ರಾಜು,ಪವನ್, ಪತ್ರಕರ್ತ ಐ ಕೆ ಮಂಜುನಾಥ್, ಮಹೇಶ್ ಸೇರಿದಂತೆ ತಾಲೂಕಿನ ಪ್ರಗತಿಪರ ಹಾಗೂ ದಲಿತ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ವರದಿ : ಐ ಕೆ ಮಂಜುನಾಥ್
