ಕೊರಟಗೆರೆ : ಭಾರತ ದೇಶದ ಐಕ್ಯತೆ ಹಾಗೂ ಸಮಗ್ರತೆಯನ್ನು ಒಂದುಗೂಡಿಸಿ ದಂತಹ ಮಹಾನ್ ವ್ಯಕ್ತಿ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ತುಮಕೂರು ಜಿಲ್ಲಾ ಪೊಲೀಸ್ ನಿರ್ದೇಶನಾದಂತೆ ಕೋಳಾಲ ಪೊಲೀಸ್ ಠಾಣಾ ವತಿಯಿಂದ ಐಕ್ಯತಾ ಓಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಪೊಲೀಸ್ ಠಾಣೆಯ ಆವರಣದಲ್ಲಿ ದೇಶದ ಪ್ರಪ್ರಥಮ ಗೃಹ ಸಚಿವ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿ ಏಕತಾ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಸಬ್ ಇನ್ಸ್ಪೆಕ್ಟರ್ ಅಭಿಷೇಕ್ ರವರು ಭಾರತದ ಸ್ವಾತಂತ್ರ್ಯದ ನಂತರ ಏಕೀಕರಣದ ಸಂದರ್ಭದಲ್ಲಿ ಇಡೀ ದೇಶ ಹರಿದು ಹಂಚು ಹೋಗಿದ್ದ ದೇಶವನ್ನು ಒಗ್ಗೂಡಿಸಿ ಐಕ್ಯತೆ ಹಾಗೂ ಸಮಗ್ರತೆಯನ್ನು ಕಾಪಾಡಲು ಶ್ರಮಿಸಿದ ಮಹಾನ್ ಚೇತನ ಎಂದು ಸ್ಮರಿಸಿದ್ದರು.

ಭಾರತೀಯ ಪ್ರತಿಯೊಬ್ಬ ನಾಗರಿಕನು ಸರ್ದಾರ್ ವಲ್ಲಬಾಯ್ ಪಟೇಲರ ಜನ್ಮದಿನದ ಅಂಗವಾಗಿ ಐಕ್ಯತೆಗಾಗಿ ಓಟವೆಂಬ ಪ್ರತಿಜ್ಞಾವಿಧಿಯನ್ನ ಸ್ವೀಕರಿಸಿ ಭಾರತದ ಪ್ರತಿಯೊಬ್ಬ ನಾಗರಿಕನು ಭಾರತದ ಏಕೀಕರಣದ ಸಮಗ್ರತೆ ಅಂಗವಾಗಿ ಶ್ರಮವಹಿಸಿ ಈ ದಿನದ ವಿಶೇಷತಾ ಅಂಗವಾಗಿ ರಾಷ್ಟ್ರೀಯ ಐಕ್ಯತೆ ಸಮಗ್ರತೆಯನ್ನು ಕಾಪಾಡಬೇಕು ಎಂಬ ಕರೆಯನ್ನು ನೀಡಿದರು.
ಈ ಓಟದಲ್ಲಿ ಕೋಳಾಲದ ಪೊಲೀಸ್ ಠಾಣೆ ಸಬ್ಇನ್ಸ್ಪೆಟರ್ ಅಭಿಷೇಕ್. ಎಎಸ್ಐ ಕುಮಾರ್. ಎಸ್ಪಿ ಕಾನ್ಸ್ಟೇಬಲ್ ಪ್ರಕಾಶ್. ಪೊಲೀಸ್ ಕಾನ್ಸ್ಟೇಬಲ್ ಮೋಹನ್.ನಾಗರಾಜ್. ಸಾಮಾಜಿಕ ಕಾರ್ಯಕರ್ತ ಮನು. ಕುಮಾರ್ ಹಾಗೂ ಸ್ಥಳೀಯ ಮುಖಂಡರು ಮುಂತಾದವರು ಐಕ್ಯತಾ ಓಟಕ್ಕೆ ಭಾಗಿಯಾಗಿದ್ದರು.
ವರದಿ :- ನರಸಿಂಹಯ್ಯ ಹೊಸಕೋಟೆ
