
ಶುಭೋದಯ
“ವೈಫಲ್ಯವು ನಮ್ಮ ಗುರುವಾಗಬೇಕು, ನಮ್ಮ ಅಂಡರ್ಟೇಕರ್ ಅಲ್ಲ.
ಸೋಲು ವಿಳಂಬ, ಸೋಲು ಸೋಲೆ ಅಲ್ಲ. ಇದು ತಾತ್ಕಾಲಿಕ ತಿರುವು, ಅಂತ್ಯವಲ್ಲ.”
– ಡೆನಿಸ್ ವೈಟ್ಲಿ
*****************************
1. ಚಾಯ್ವಾಲಾಗಿಂತ ಚೆನ್ನಾಗಿ ಟೀ ಬಗ್ಗೆ ಯಾರಿಗೆ ಗೊತ್ತಿರುತ್ತೆ?; ಅಸ್ಸಾಂ ಚಹಾ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಚಾಯ್ವಾಲಾ ಆಗಿದ್ದ ತಮ್ಮ ದಿನಗಳನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಚಹಾ ಮಾರಾಟಗಾರನಾಗಿ ತಮ್ಮ ಹಿಂದಿನ ಕಾಲವನ್ನು ಮೆಲುಕು ಹಾಕಿದ್ದಾರೆ. 2023ರಲ್ಲಿ ಅಸ್ಸಾಂಗೆ ನೀಡಿದ ತಮ್ಮ ಭೇಟಿಯನ್ನು ಮೋದಿ ನೆನಪಿಸಿಕೊಂಡರು. ಆ ಭೇಟಿಯಲ್ಲಿ 11,000 ನೃತ್ಯಗಾರರು ಅತಿದೊಡ್ಡ ಬಿಹು ಪ್ರದರ್ಶನ ನಡೆಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು ಎಂದಿದ್ದಾರೆ. ಇಂದು ಸಂಜೆ 8,500 ಯುವಕರಿಂದ ನೃತ್ಯ ಪ್ರದರ್ಶನ ನಡೆದಿದ್ದು, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು 60 ವಿದೇಶಿ ರಾಯಭಾರಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ.
*************************
2. ಮಾರ್ಚ್ 20ರೊಳಗೆ ಬಿಜೆಪಿಗೆ ಹೊಸ ರಾಷ್ಟ್ರಾಧ್ಯಕ್ಷರ ಆಯ್ಕೆ ಸಾಧ್ಯತೆ
ದೆಹಲಿ ವಿಧಾನಸಭಾ ಚುನಾವಣೆ ಮತ್ತು ರಾಜ್ಯ ಘಟಕಗಳಲ್ಲಿ ಬಾಕಿ ಇರುವ ಚುನಾವಣೆಗಳಿಂದಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯೂ ವಿಳಂಬವಾಯಿತು. ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಬಿಜೆಪಿ ಪ್ರಯತ್ನಗಳನ್ನು ತೀವ್ರಗೊಳಿಸುತ್ತಿದೆ.ಈ ನಡುವೆ ಬಿಜೆಪಿಗೆ ಮಾರ್ಚ್ 20ರೊಳಗೆ ಹೊಸ ರಾಷ್ಟ್ರೀಯ ಅಧ್ಯಕ್ಷರ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಾಕಿ ಇದ್ದು, ರಾಜ್ಯ ಘಟಕಗಳಲ್ಲಿನ ಪಕ್ಷದ ಚುನಾವಣೆಗಳ ನಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
***********************
3.ತಮಿಳುನಾಡಿನಲ್ಲಿ ಮತ್ತೊಂದು ಪಟಾಕಿ ದುರಂತ: ಕಾರ್ಖಾನೆಯಲ್ಲಿ ಭಾರಿ ಸ್ಫೋಟ, ಅಕ್ಕ-ತಂಗಿ ಸೇರಿ ಮೂವರು ಮಹಿಳೆಯರ ಜೀವದಹನ
ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಂಬನಲ್ಲೂರಿನಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳಾ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇದು ಸ್ಥಳೀಯ ಪಟಾಕಿ ಉದ್ಯಮದಲ್ಲಿನ ಸುರಕ್ಷತಾ ನಿಯಮಗಳ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಮೃತರೆಲ್ಲರೂ ಹತ್ತಿರದ ಹಳ್ಳಿಯ ನಿವಾಸಿಗಳು. ಸ್ಫೋಟ ಸಂಭವಿಸಿದಾಗ ಅವರು ಚಿನ್ನದುರೈ ಒಡೆತನದ ಪರವಾನಗಿ ಪಡೆದ ಸಂಗ್ರಹಣಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ ಸ್ಫೋಟದ ತೀವ್ರತೆಗೆ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರು.
**************************
4.ನನ್ನ ಸ್ಥಾನ ಏನೇ ಇರಲಿ, ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ: ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರಿಗೆ, 2028ರ ಚುನಾವಣೆಗಳು ನಿಮ್ಮ ನೇತೃತ್ವದಲ್ಲಿ ನಡೆಯುತ್ತವೆಯೇ ಎಂದು ಪ್ರಶ್ನಿಸಿದ್ದಕ್ಕೆ, ನಾನು ಆ ಸಮಯದಲ್ಲಿ ಯಾವುದೇ ಹುದ್ದೆಯನ್ನು ಹೊಂದಿದ್ದರೂ, ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಹುದ್ದೆಗಳು ನಾಯಕತ್ವವನ್ನು ನಿರ್ಧರಿಸುವುದಿಲ್ಲ. ನಾಯಕತ್ವ, ಬದ್ಧತೆ ಮತ್ತು ದೃಷ್ಟಿಕೋನವು ಪಕ್ಷವನ್ನು ಮುನ್ನಡೆಸುತ್ತದೆ. ನಾನು ಏನಾಗುತ್ತೇನೆ ಎಂಬುದು ಮುಖ್ಯವಲ್ಲ, ನನಗೆ ವಹಿಸಿಕೊಟ್ಟ ಅಧಿಕಾರದೊಂದಿಗೆ ಪಕ್ಷವನ್ನು ಬಲಪಡಿಸುವುದು ಮತ್ತು ನಿಜವಾದ ಕಾಂಗ್ರೆಸ್ಸಿಗನಾಗಿ ಮುನ್ನಡೆಸುವುದು ಮುಖ್ಯ ಎಂದರು.
************************
5. ಮುಸ್ಲಿಮರು ಮಕ್ಕಳನ್ನು ತಾವು ಹುಟ್ಟಿಸಿ ದೇವರು ಕೊಟ್ಟ ಅಂತಾರೇ, ಹಾಗಾದ್ರೆ ದೇವರೇ ನೋಡಿಕೊಳ್ಳಲಿ, ತೆರಿಗೆದಾರರ ಹಣ ಯಾಕೆ ಬೇಕು?: Pratap Simha
ಮುಸ್ಲಿಮರು ಪುರುಸೊತ್ತಿಲ್ಲದೇ ಮಕ್ಕಳು ಹುಟ್ಟಿಸುತ್ತಾರೆ ಎಂದು ನಾನು ಹೇಳಿರುವುದು ಪ್ರಚೋದನಕಾರಿನಾ? ಎಂದು ಪ್ರತಾಪ್ ಸಿಂಹ ಇದೇ ವೇಳೆ ಪ್ರಶ್ನೆ ಮಾಡಿದ್ದಾರೆ. ಉದಯಗಿರಿ ಗಲಭೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಆರೋಪದಲ್ಲಿ ಎಫ್ಐಆರ್ ದಾಖಲಾಗಿರುವುದರ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಗಲಭೆ ನಡೆದ ದಿನ ನಾನು ಪೊಲೀಸರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇನೆಯೇ ಹೊರತು ಪ್ರಚೋದನೆ ನೀಡಿಲ್ಲ. ಒಬ್ಬ ಮುಲ್ಲಾ ಪ್ರಚೋದನೆ ಮಾಡಿದ್ದರೂ ಯಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
*******************