ಅನೇಕ ಜನರು ನಮ್ಮ ದೇಹವನ್ನು ರೋಗಗಳಿಂದ ಮುಕ್ತವಾಗಿಡಲು ನೈಸರ್ಗಿಕ ಮಾರ್ಗಗಳನ್ನು ಅನುಸರಿಸುತ್ತಾರೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಆಹಾರ ಮತ್ತು ಗಿಡಮೂಲಿಕೆಗಳನ್ನು ಬಳಸುತ್ತಾರೆ. ಬಹುತೇಕ ಪ್ರತಿ ಮನೆಯ ಮುಂದೆ ಬೆಳೆಯುವ ಈ ಹೂವು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಈ ಹೂವನ್ನು ಹಲವು ರೋಗಗಳಿಗೆ ಮನೆಮದ್ದಾಗಿ ಬಳಸಬಹುದು.
ಮಧುಮೇಹಕ್ಕೆ ಔಷಧ :
ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ದಾಸವಾಳದ ಹೂವು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ದಾಸವಾಳ ಕುದಿಸಿದ ನೀರನ್ನು ಕುಡಿಯುವುದರಿಂದ ರಕ್ತದ ಸಕ್ಕರೆ ನಿಯಂತ್ರಣದಲ್ಲಿ ಇರುತ್ತದೆ.
ಹೈ ಬಿಪಿ ಕಡಿಮೆ ಮಾಡಿಕೊಳ್ಳಬೇಕಂದ್ರೆ ಈ ಆಹಾರ ತಿನ್ನುವುದನ್ನ ತಕ್ಷಣವೇ ನಿಲ್ಲಿಸಿ…
ಅಧಿಕ ರಕ್ತದೊತ್ತಡ :
ಅಧಿಕ ರಕ್ತದೊತ್ತಡ ತುಂಬಾ ಅಪಾಯಕಾರಿ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ದಾಸವಾಳದ ಚಹಾ ಕುಡಿಯುವುದರಿಂದ ಹೈ ಬಿಪಿಯನ್ನು ನಿಯಂತ್ರಿಸಬಹುದು. ಇದು ಹೃದಯ ಅಪಧಮನಿಗಳನ್ನು ಸಡಿಲಗೊಳಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ.
ಬೊಜ್ಜು ಕಡಿಮೆ ಮಾಡಲು :
ದಾಸವಾಳವು ಕೊಬ್ಬನ್ನು ಸುಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಹೃದಯದ ಅಪಧಮನಿಗಳಲ್ಲಿ ಸಂಗ್ರಹವಾಗುವ ಕೆಟ್ಟ ಕೊಬ್ಬಾದ LDL ಕೊಲೆಸ್ಟ್ರಾಲ್ ಅನ್ನು ಸುಡುತ್ತದೆ. ಹೃದಯ ಕಾಯಿಲೆಯಿಂದ ರಕ್ಷಿಸುತ್ತದೆ.
ಕ್ಯಾನ್ಸರ್ ವಿರುದ್ಧ ಮದ್ದು :
ದಾಸವಾಳದ ಹೂವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸಲು ಸಹಾಯ ಮಾಡುವ ಅಂಶಗಳನ್ನು ಹೊಂದಿದೆ. ದಾಸವಾಳವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಕಿಮೊಥೆರಪಿಯ ಪ್ರಯೋಜನಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದಾಸವಾಳ ಹೂವನ್ನು ಬಳಸುವ ಸರಳ ವಿಧಾನ :
ದಾಸವಾಳದ ಹೂವುಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ ಸ್ವಲ್ಪ ಬೆಚ್ಚಗಿನ ನೀರಿನೊಂದಿಗೆ ಬೆರೆಸಿ ಪ್ರತಿದಿನ ಕುಡಿಯಬಹುದು. ದಾಸವಾಳದ ಹೂವಿನ ಮೊಗ್ಗುಗಳನ್ನು ಪೂರ್ತಿಯಾಗಿ ತಿನ್ನಬಹುದು. ನಿಮಗೆ ಯಾವುದು ಸೂಕ್ತವೋ ಆ ವಿಧಾನವನ್ನು ಆರಿಸಿಕೊಂಡು ನಿಯಮಿತವಾಗಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
(ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ವಿಚಾರ ವಿಸ್ತಾರ ಇದನ್ನು ಅನುಮೋದಿಸುವುದಿಲ್ಲ.)
