ಕೆ.ಆರ್.ಪೇಟೆ: ಪಿ.ಎಲ್.ಡಿ ಬ್ಯಾಂಕ್ನಾ ಕಟ್ಟಡ ನವೀಕರಣ ಕಾಮಗಾರಿಗೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಆರ್ಥಿಕ ಧನ ಸಹಾಯ ನೀಡಿದರು.
ಪಿ.ಎಲ್.ಡಿ ಬ್ಯಾಂಕ್ ನಾ ಆಡಳಿತ ಮಂಡಳಿ ಸರ್ವಾನುಮತದಿಂದ ಬ್ಯಾಂಕಿನ ಕಟ್ಟಡ ನವೀಕರಣಕ್ಕೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನರವರಿಂದ ಸಹಾಯ ಪಡೆಯಬೇಕೆಂದು ನಿರ್ಧರಿಸಿ ಮನವಿ ಮಾಡಿದ ಹಿನ್ನೆಲೆ.ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಹೆಸರಿನಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಕೆ.ಆರ್.ಪೇಟೆ ಜಯನಗರ ಬಡಾವಣೆಯಲ್ಲಿರುವ ತಮ್ಮ ಕಚೇರಿಯಲ್ಲಿ ಬ್ಯಾಂಕ್ ಆಡಳಿತ ಮಂಡಳಿಯ ಮನವಿ ಸ್ಪಂದಿಸಿ ಆರ್ಥಿಕ ಧನ ಸಹಾಯ ನೀಡಿದರು.

*ಧನ ಸಹಾಯ ಸ್ವೀಕರಿಸಿ ಮಾತನಾಡಿದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ* ಪುಟ್ಟಸ್ವಾಮಿಗೌಡ ನಮ್ಮ ಬ್ಯಾಂಕಿನ ಕಟ್ಟಡ ನವೀಕರಣಕ್ಕಾಗಿ ತಾಲೂಕಿನಲ್ಲಿ ಸಮಾಜ ಸೇವೆಯಲ್ಲಿ ಜನಾನುರಾಗಿರುವ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರು ಮನವಿ ಮಾಡಿದ್ದು ಆ ಮನವಿ ಪರಿಗಣಿಸಿ ಒಂದು ಲಕ್ಷ ದೇಣಿಗೆ ನೀಡಿದ್ದಾರೆ.ತಾಲೂಕಿನಲ್ಲಿ ಇಂತಹ ಸೇವಾ ಮನೋಭಾವನೆ ವ್ಯಕ್ತಿ ಇರುವುದರಿಂದಲೇ ಸಹಕಾರ ಸಂಸ್ಥೆಗಳು ಹಾಗೂ ಸಂಕಷ್ಟ ಕುಟುಂಬಗಳ ಸಮಸ್ಯೆಗಳು ಪರಿಹಾರಕಂಡು ಅಭಿವೃದ್ಧಿಯತ್ತ ಸಾಗುತಿವೆ ಇವರು ಸಹಕಾರಕ್ಕೆ ನಮ್ಮ ಬ್ಯಾಂಕಿನ 13 ಸಾವಿರಕ್ಕೂ ಹೆಚ್ಚು ಸದಸ್ಯರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ರವರಿಗೆ ಮುಂಬರುವ ದಿನಮಾನಗಳಲ್ಲಿ ಗೌರವಾನ್ವಿತ ಸ್ಥಾನಮಾನಗಳು ದೊರಕಲಿ ಎಂಬುವುದೇ ನಮ್ಮ ಆಶಯ ಎಂದರು.

ಇದೆ ವೇಳೆ ಮಂಡ್ಯ ಜಿಲ್ಲಾ ಸಹಕಾರಿ ಮುದ್ರಣ ಮತ್ತು ಪ್ರಕಾಶನಾಲಯ ನಿ.ಮಂಡ್ಯ ನೂತನ ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಕೆ.ಆರ್.ಪೇಟೆ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕರಾದ *ಮಂಜುಳಾ ಕೃಷ್ಣೇಗೌಡ,ಎ. ಆರ್ ರಾಜನಾಯಕ* ಅವರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಪೇಟ ತೊಡಿಸಿ ಸನ್ಮಾನಿಸುವ ಮೂಲಕ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮಿಗೌಡ, ಉಪಾಧ್ಯಕ್ಷ ಸಿಮೆಂಟ್ ಮಂಜು (ರಮೇಶ್),ಮಾಜಿ ಅಧ್ಯಕ್ಷ ಅಣ್ಣೆಚಾಕನಹಳ್ಳಿ ನಾಗರಾಜೇಗೌಡ,ನಿರ್ದೇಶಕರಾದ ಶೀಳನೆರೆ ರಾಮೇಗೌಡ,ಅರಳಕುಪ್ಪೆ ಮೋಹನ್, ಚಂದ್ರೇಗೌಡ, ಲಕ್ಷ್ಮೀಪುರ ಚಂದ್ರೇಗೌಡ, ಬೊಪ್ಪನಹಳ್ಳಿ ಸುನಿಲ್,ಜಗದೀಶ್,ಕೃಷ್ಣೇಗೌಡ,ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ*

[…] […]