ಚನ್ನರಾಯಪಟ್ಟಣ:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕ ಚನ್ನರಾಯಪಟ್ಟಣ ಇವರ ವತಿಯಿಂದ ರಾಷ್ಟ್ರೀಯ ವಿಪತ್ತು ದಿನಾಚರಣೆಯ ಅಂಗವಾಗಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹೊಳೆನರಸೀಪುರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ರಕ್ತದ ಗುಂಪು ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಕೊಡುಗೆಯಾಗಿ ನೀಡಲಾಯಿತು.
ಈ ಕಾರ್ಯಕ್ರಮವನ್ನು ಶ್ರೀಯುತ ಭರತ್ ಕುಮಾರ್ ಹೆಚ್ ಜಿ ರವರು ಹಾಗೂ ಶ್ರೀಯುತ ಜಯರಾಮ್ ಎನ್ ಮತ್ತು ವೇದಿಕೆ ಗಣ್ಯರು ಉದ್ಘಾಟಿಸಿದರು.
ಈ ಕಾರ್ಯಕ್ರಮವು ಉದ್ಘಾಟಿಸಿ ಮಾತನಾಡಿದ ಶ್ರೀ ಭರತ್ ಕುಮಾರ್ ಹೆಚ್. ಜಿ ಚೇರ್ಮನ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ ಇವರು ಇಂದು ಯುವಕರಲ್ಲಿ ಸಾಮಾಜಿಕ ಕಳಕಳಿ ಕಡಿಮೆಯಾಗಿದೆ ಹಾಗೂ ಜೀವನ ಮೌಲ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಹಿಂದುಳಿದಿದ್ದಾರೆ ಹಾಗೂ ಉತ್ತಮ ಜೀವನಶೈಲಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಲ
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಿಳಿಸುವುದಾದರೆ ಮನುಷ್ಯನ ದೇಹಕ್ಕೆ ಅತಿ ಮುಖ್ಯವಾದಂತ ಅಂಶವೆಂದರೆ ರಕ್ತ ಈ ರಕ್ತಕ್ಕಾಗಿ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ರೋಗಿಗಳು ಪರಿತಪಿಸುತ್ತಿದ್ದಾರೆ, ಯುವಕರು ಹಾಗೂ ಆರೋಗ್ಯವಂತ ಸಾರ್ವಜನಿಕರು ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡಬಹುದು ನೀವು ನೀಡುವ ರಕ್ತದಿಂದ ರಕ್ತದಾನ ಮಾಡಿದ ದಾನಿಗಳ ಆರೋಗ್ಯವು ವೃದ್ಧಿಸುತ್ತದೆ ಮತ್ತು ಮೂರು ಜನರ ಜೀವ ಉಳಿಸಿದ ಪುಣ್ಯವೋ ದೊರೆಯುತ್ತದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡು ಉತ್ತಮ ರೀತಿಯ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು ಹಾಗೂ ಇಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣದ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ರಕ್ತದ ಗುಂಪು ಪರೀಕ್ಷೆಯನ್ನು ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಮತ್ತು ತೂಕ ಮಾಪನವನ್ನು ಕೊಡುಗೆಯಾಗಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಜಯರಾಮ್. ಎನ್ ಪ್ರಾಂಶುಪಾಲರು ಪಾಲಿಟೆಕ್ನಿಕ್ ಕಾಲೇಜ್ ರವರು ಮಾತನಾಡಿ ಇಂದು ವಿದ್ಯಾರ್ಥಿಗಳಿಗೆ ಯಾವುದೇ ವಿಷಯದಲ್ಲೂ ತಾಳ್ಮೆ ಇಲ್ಲ ಹಾಗೂ ಗುರುಹಿರಿಯರ ಅನುಭವಗಳನ್ನು ಪಡೆದುಕೊಳ್ಳುವ ಮನಸ್ಥಿತಿಯು ಕಮ್ಮಿಯಾಗಿದೆ ಹಾಗೂ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಬದಲು ಕಾನೂನು ವಿರುದ್ಧ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಜೀವನವನ್ನು ಕಳೆದುಕೊಳ್ಳುತ್ತಿರುವುದು ದುಃಖದ ಸಂಗತಿ, ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲ್ಲೂಕು ಘಟಕವು ಯುವಕರಿಗೆ ಉತ್ತಮ ಸಂದೇಶವನ್ನು ನೀಡುವುದರ ಜೊತೆಗೆ ಯುವಕರಲ್ಲಿ ಸಾಮಾಜಿಕ ಕಳಕಳಿಯನ್ನು ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಇದು ಶ್ಲಾಘನೀಯ ವಿಷಯ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಉಪಸ್ಥಿತಿಯಲ್ಲಿ ಶ್ರೀ ಜಬಿವುಲ್ಲಾ ಬೇಗ್ ಕಾರ್ಯದರ್ಶಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲ್ಲೂಕು ಘಟಕ ಚನ್ನರಾಯಪಟ್ಟಣ, ಶ್ರೀ ಮಂಜುನಾಥ್ ಕಾಲೇಜು ಆಡಳಿತ ಅಧಿಕ್ಷಕರು, ಶ್ರೀ ಗೋವಿಂದರಾಜು ಅಧ್ಯಕ್ಷರು ಕಾಲೇಜು ಯುವ ರೆಡ್ ಕ್ರಾಸ್ ಘಟಕ,ಶ್ರೀ ಉದಯ ಶಂಕರ್ ನಿರ್ದೇಶಕರು ರೆಡ್ ಕ್ರಾಸ್ ಸಂಸ್ಥೆ ಚನ್ನರಾಯಪಟ್ಟಣ ತಾಲೂಕು, ಶ್ರೀ ಸುದರ್ಶನ ಶಿಕ್ಷಕರು, ಶ್ರೀ ವಿಜಯ ಶಿಕ್ಷಕರು, ಶ್ರೀ ನವೀನ್ ಶಿಕ್ಷಕರು, ಹಾಗೂ ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.
-ಮಂಜುನಾಥ್ ಐ.ಕೆ.
