ಶ್ರವಣಬೆಳಗೊಳ, ನವೆಂಬರ್ ೧೬: ಶ್ರವಣಬೆಳಗೊಳ ಹೋಬಳಿ ಕುಂಬೇನಹಳ್ಳಿ ಗ್ರಾಮದ ಯುವ ಮುಖಂಡರುಗಳಾದ ಅರುಣ, ದಿನೇಶ್, ಅಭಿ, ಶಶಿ, ಪ್ರಶ್ನಾತ್, ಪುಟ್ಟರಾಜು, ನವೀನ್, ಸಂತೋಷ, ಪ್ರವೀಣ್, ಪ್ರಮೋದ್, ಅಮರಾನಾಥ್, ವಾಸು, ಮಹೇಶ್, ಶ್ರೀನಿವಾಸ್, ಅವಿನಾಶ್, ಅಭಿಷೇಕ್ ಸೇರಿದಂತೆ ಅನೇಕ ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ಇಂದು ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಬಿಜೆಪಿ ಮುಖಂಡರಾದ ಸಿಆರ್ ಚಿದಾನಂದ್ ರವರ ನೇತೃತ್ವದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಯುವ ಮುಖಂಡರು ಪಕ್ಷದ ಧ್ವಜ ಹಿಡಿದು ಸದಸ್ಯತ್ವ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಿದಾನಂದ್ ಅವರು, “ಯುವಜನರ ಬೆಂಬಲವೇ ಅಭಿವೃದ್ಧಿಯ ಶಕ್ತಿ. ಕುಂಬೇನಹಳ್ಳಿಯಲ್ಲಿ ಪಕ್ಷ ಸಂಘಟನೆಗೆ ಯುವ ಸಮರ್ಥ ನಾಯಕತ್ವ ದೊರೆತಿರುವುದು ಬಿಜೆಪಿ ಬಲವರ್ಧಕ,” ಎಂದು ಹೇಳಿದರು.

ಸೇರ್ಪಡೆಗೊಂಡ ಯುವ ಮುಖಂಡರು ಮಾತನಾಡಿ, ಅಭಿವೃದ್ಧಿ ಮತ್ತು ಜನಪರ ನೀತಿಗಳತ್ತ ಬಿಜೆಪಿ ತೋರಿಸಿರುವ ಬದ್ಧತೆ ಹಾಗೂ ಗ್ರಾಮ ಮಟ್ಟದ ಸಮಸ್ಯೆಗಳಿಗೆ ನೀಡುತ್ತಿರುವ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಮಟ್ಟದಲ್ಲಿ ಬದಲಾವಣೆ ತರಲು ಬಿಜೆಪಿ ಸೂಕ್ತ ವೇದಿಕೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
-ಮಂಜುನಾಥ್ ಐ.ಕೆ.
