ಕೆ.ಆರ್.ಪೇಟೆ: ಸಹಕಾರ ಸಂಘಗಳು ರೈತರ ಅಭಿವೃದ್ಧಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಸಹಕಾರ ಸಂಘಗಳ ಪಿತಾಮಹ ಸಿದ್ದನಗೌಡ ಪಾಟೀಲ್ ಅವರು 1905ರಲ್ಲಿ ಏಷ್ಯಾ ಖಂಡದಲ್ಲಿಯೇ ಮೊದಲ ಭಾರಿಗೆ ಸಹಕಾರ ಸಂಸ್ಥೆ ಸ್ಥಾಪನೆ ಮಾಡಿ, ಸಹಕಾರ ಚಳುವಳಿಗೆ ನಾಂದಿ ಹಾಡಿದರು. ಇವರ ದೂರದೃಷ್ಠಿಯ ಫಲವಾಗಿ ಗ್ರಾಮೀಣ ಭಾಗದಲ್ಲಿ ಹಾಲಿನ ಡೇರಿ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆರಂಭವಾಗಿವೆ. ಸಹಕಾರ ಸಂಘಗಳ ಆರಂಭದಿಂದ ರೈತರು ಮತ್ತು ಜನಸಾಮಾನ್ಯರ ಸಬಲೀಕರಣವಾಗಿದೆ ಎಂದು ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಹೇಳಿದರು.
ಅವರು ತಾಲೂಕಿನ ಶೀಳನೆರೆ ಹೋಬಳಿ ಕೇಂದ್ರದಲ್ಲಿರುವ ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಾಜಿ ಶಾಸಕ ಹಾಗೂ ಸಹಕಾರ ಧುರೀಣ ಎಸ್.ಎಂ.ಲಿ0ಗಪ್ಪ ಮಹಾ ವೇದಿಕೆಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಕಾರ್ಯಕ್ರಮವನ್ನು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಸಹಕಾರ ಸಪ್ತಾಹ ಈ ಕಾರ್ಯಕ್ರಮವು ದೇಶದ ಪ್ರಥಮ ಪ್ರಧಾನಿ ಪಂಡಿತ್ ಜವಹರ್ಲಾಲ್ ನೆಹರು ಅವರ ಹುಟ್ಟು ಹಬ್ಬದ ದಿನದಿಂದ ಆರಂಭಗೊ0ಡು ಒಂದು ವಾರಗಳ ಕಾಲ ಇಡೀ ದೇಶಾದ್ಯಂತ ಆಚರಣೆ ಆಚರಣೆ ಮಾಡಲಾಗುತ್ತಿದೆ. ಏಕೆಂದರೆ ಸಹಕಾರ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ ದೇಶದ ಪ್ರಥಮ ಪ್ರಧಾನಿ ನೆಹರು ಅವರ ದೂರದೃಷ್ಠಿಯ ಪ್ರತಿಫಲವಾಗಿ ಇಂದು ಸಹಕಾರ ಕ್ಷೇತ್ರವು ಸಮೃದ್ದಿಯಾಗಿ ಬೆಳೆದಿದೆ ಎಂದರು. ಇನ್ನೂ ಹೆಚ್ಚು ಸಮೃದ್ದಿಯಾಗಿ ಸಹಕಾರ ವ್ಯವಸ್ಥೆ ಬೆಳೆಯಬೇಕಾದರೆ ಸಹಕಾರ ಸಂಘಗಳು ರಾಜಕೀಯ ಮುಕ್ತವಾಗಿರಬೇಕು ಎಂದು ಹೇಳಿದರು.
ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸರ್ಕಾರ 3 ರಿಂದ 5 ಲಕ್ಷದ ವರೆಗೆ ಸಾಲ ನೀಡುತ್ತಿದೆ. ಸಹಕಾರ ಸಂಘಗಳಲ್ಲಿ ರಾಜಕೀಯ ಬೆರೆಸದೇ ಈ ಸಹಕಾರ ಸಂಘಗಳನ್ನು ಹೆಚ್ಚು ಶಕ್ತಿಯುತವಾಗಿ ಬೆಳೆಸಿಕೊಂಡು ಹೋಗಬೇಕು. ರೈತರು ಸಹಕಾರ ಸಂಸ್ಥೆಗಳಲ್ಲಿ ಸಾಲ ಪಡೆದು ಸಕಾಲಕ್ಕೆ ಬಡ್ಡಿ ಮತ್ತು ಅಸಲು ಪಾವತಿಸಿ ಸಹಕಾರ ಸಂಘವನ್ನು ಬೆಳೆಸುವ ಜೊತೆಗೆ ತಾವು ಕೂಡ ಖಾಸಗಿ ಸಾಲದಿಂದ ಮುಕ್ತಿ ಪಡೆಯಬೇಕು. ಸಹಕಾರ ಸಂಘಗಳು ರಾಜಕೀಯದಿಂದ ಮುಕ್ತವಾಗಿ ರೈತರ ಸಮಗ್ರವಾದ ಅಭಿವೃದ್ಧಿಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡು ಕೆಲಸ ಮಾಡುವ ಮೂಲಕ ರೈತರ ಮಿತ್ರನಂತೆ ಸಹಕಾರ ಸಂಘಗಳನ್ನು ಮುನ್ನಡೆಸಬೇಕು ಎಂದರು. ಕರ್ನಾಟಕ ರಾಜ್ಯ ಸೇರಿದಂತೆ ಭಾರತ ದೇಶಾದ್ಯಂತ ಸಹಕಾರ ಚಳುವಳಿಯು ವಿಸ್ತರಿಸಿದ್ದು ರೈತರ ಬಂಧುವಿನಂತೆ, ರೈತರ ಮಿತ್ರನಂತೆ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿ ಬೇಕಾದ ಬಿತ್ತನೆ ಬೀಜಗಳು, ರಾಸಾಯನಿಕ ಗೊಬ್ಬರಗಳು ಹಾಗೂ ಔಷಧಿಗಳನ್ನು ರಿಯಾಯಿತಿ ದರದಲ್ಲಿ ಸಕಾಲಕ್ಕೆ ನೀಡಿ ಕೃಷಿ ಚಟುವಟಿಕೆಗಳನ್ನು ನಡೆಸಲು ಬೇಕಾದ ಸಾಲಸೌಲಭ್ಯವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುತ್ತಾ ರಾಷ್ಟೀ ಕೃತ ಬ್ಯಾಂಕುಗಳು ಮಾಡದ ಕೆಲಸವನ್ನು ಸಹಕಾರ ಸಂಘಗಳು ಮಾಡುತ್ತಾ ರೈತರ ಬೆನ್ನುಲುಬಾಗಿ ಸದೃಢವಾಗಿ ನಿಂತಿವೆ ಎಂದು ಬಿ.ನಾಗೇಂದ್ರಕುಮಾರ್ ಹೇಳಿದರು.
ಮನ್ಮುಲ್ ನಿರ್ದೇಶಕ ಡಾಲು ರವಿ ಮಾತನಾಡಿ ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ಹಲವಾರು ನಾಯಕರು ಶ್ರಮಿಸಿದ್ದಾರೆ. ಅದೇ ರೀತಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರವು ಅಭಿವೃದ್ಧಿ ಸಾಧಿಸಲು ಶೀಳನೆರೆ ಗ್ರಾಮದ ಸುಪುತ್ರ ಎಸ್.ಎಂ.ಲಿಂಗಪ್ಪ ಅವರು ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಸಹಕಾರ ಸಂಸ್ಥೆಗಳನ್ನು ಆರಂಭಿಸಿ ರಾಜ್ಯದಲ್ಲಿಯೇ ಉತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಕೆ.ಆರ್.ಪೇಟೆ ಟಿಎಪಿಸಿಎಂಎಸ್ ಸಂಸ್ಥೆಯನ್ನು ಬೆಳೆಸಿದ್ದರು. ಇಂದಿಗೂ ಈ ಸಂಸ್ಥೆ ಹೆಮ್ಮರವಾಗಿ ಐದು ಕೋಟಿ ಆದಾಯ ಗಳಿಸಿದೆ ಎಂದರೆ ಅದಕ್ಕೆ ಬದ್ರಭುನಾದಿ ಹಾಕಿದವರು ಎಸ್.ಎಂ.ಲಿAಗಪ್ಪ ಅವರು. ಅವರು ಹುಟ್ಟೂರಿನಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಎಸ್.ಎಂ.ಲಿಂಗಪ್ಪ ಅವರ ಮೊಮ್ಮಗ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್ ಅವರು ಹೆಚ್ಚು ಪರಿಶ್ರಮದಿಂದ ಅಚ್ಚುಕಟ್ಟಾಗಿ ಹಮ್ಮಿಕೊಂಡಿರುವುದು ಶ್ಲಾಘನೀಯವಾದುದು ಎಂದು ಡಾಲು ರವಿ ಹೇಳಿದರು.
ಶೀಳನೆರೆ ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷರು ಹಾಗೂ ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕರಾದ ಎಸ್.ಅಂಬರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಜನರು ಸ್ವಾಭಿಮಾನದ ಬದುಕು ಕಾಣಲು ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ. ಹಿರಿಯರ ತ್ಯಾಗ, ನಿಸ್ವಾರ್ಥ ಸೇವೆಯಿಂದ ಸಹಕಾರ ಕ್ಷೇತ್ರ ಎತ್ತರಕ್ಕೆ ಬೆಳೆದು ನಿಂತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎಸ್.ಎಲ್.ಮೋಹನ್, ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ಶೀಳನೆರೆ ಕೃಷಿ ಪತ್ತಿನ ಸಹಕರ ಸಂಘದ ಅಧ್ಯಕ್ಷ ಎಸ್.ಅಂಬರೀಶ್, ಉಪಾಧ್ಯಕ್ಷ ಎಸ್.ಎಸ್.ಪುರುಷೋತ್ತಮ್, ತಾ.ಪಂ.ಮಾಜಿ ಅಧ್ಯಕ್ಷ ಜಾನಕೀರಾಂ, ಶೀಳನೆರೆ ಗ್ರಾ.ಪಂ.ಅಧ್ಯಕ್ಷ ಯುವರಾಜು, ಗ್ರಾ.ಪಂ.ಸದಸ್ಯರಾದ ಎಸ್.ಪಿ.ಸಿದ್ದೇಶ್, ಎಸ್.ಕೆ.ಪ್ರಕಾಶ್, ಟಿಎಪಿಸಿಎಂಸ್ ನಿರ್ದೇಶಕರಾದ ಬಿ.ಎಂ.ಕಿರಣ್, ಎಂ.ಪಿ.ಲೋಕೇಶ್, ಎ.ವೈ.ವಿಜಯ್ಕುಮಾರ್, ತಾಲ್ಲೂಕು ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ಎ.ಆರ್.ರಾಜನಾಯಕ್, ರಾಮೇಗೌಡ, ಪಿ.ಜೆ.ಮಂಜುಳಾ, ಜಿಲ್ಲಾ ಸಹಕಾರಿ ಮುದ್ರಣಾಲಯದ ನಿರ್ದೇಶಕಿ ಲತಾಮುರುಳಿ, ಡಿಸಿಸಿ ಬ್ಯಾಂಕ್ ಸಿಇಓ ವನಜಾಕ್ಷಿ, ಸಹಕಾರ ಸಂಘಗಳ ಉಪ ನಿಭಂದಕ ಹೆಚ್.ಆರ್.ನಾಗಭೂಷಣ್, ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಆರ್.ಭರತ್ಕುಮಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಆದಿಲ್ ಪಾಷ, ಜಲೇಂದ್ರ, ರಘು, ರಾಘವೇಂದ್ರ, ಮನ್ಮುಲ್ ಮಾರ್ಗದ ವಿಸ್ತರಣಾಧಿಕಾರಿ ನಾಗಪ್ಪ ಅಲ್ಲಿಬಾದಿ, ರಾಘವೇಂದ್ರ, ಗುರುರಾಜ್, ಮಧು, ಸೇರಿದಂತೆ ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರುಗಳು ಸೇರಿದಂತೆ ಸಾವಿರಾರು ಮಂದಿ ಸಹಕಾರಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-ಶ್ರೀನಿವಾಸ್ ಆರ್
ಇದನ್ನೂ ಓದಿ –
ಕೆ.ಆರ್.ಪೇಟೆ- ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ರವರ ನಿಧನದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಗಿಡ ನೆಡುವ ಮೂಲಕ ಶ್ರದ್ಧಾಂಜಲಿ
