ಜೂನಾಗಢ (ಗುದ್ರಾತ್): ಭಾರತದ ಪುರಾತನ ಜಲ ನಿರ್ವಹಣೆ ತಂತ್ರಜ್ಞಾನದ ಅದ್ಭುತ ಉದಾಹರಣೆಯಾಗಿ ಗುರುತಿಸಲ್ಪಟ್ಟಿರುವ ಗಿರಿನಾರ್ ಪ್ರದೇಶದ “ಸುದರ್ಶನ್ ಸರೋವರ” ಮತ್ತೆ ಚರ್ಚೆಗೆ ಬಂದಿದೆ. ಕ್ರಿ.ಪೂ. ಸುಮಾರು 3000ರಲ್ಲೇ ನಿರ್ಮಿಸಲ್ಪಟ್ಟಿದ್ದೇ ಎಂದು ಜೂನಾಗಢ ಶಾಸನಗಳು ದೃಢಪಡಿಸುತ್ತಿವೆ. ಇದನ್ನು ಭಾರತದ ಅತ್ಯಂತ ಹಳೆಯ ಕೃತಕ ಸರೋವರಗಳಲ್ಲಿ ಒಂದಾಗಿ ಇತಿಹಾಸಕಾರರು ಮೌಲ್ಯಮಾಪನ ಮಾಡುತ್ತಿದ್ದಾರೆ.
ಜುನೆಗಢದ ಪುರಾತನ ಶಾಸನಗಳ ಪ್ರಕಾರ, ಈ ಸರೋವರವನ್ನು ಚಂದ್ರಗುಪ್ತ ಮೌರ್ಯನ ಅಮಾತ್ಯ ಪುಷ್ಯಗುಪ್ತ ಮೂಲತಃ ನಿರ್ಮಿಸಿದ್ದರು. ಗಿರಿನಾರ್ ಪರ್ವತದ ಪಾದದಲ್ಲಿ ನಿರ್ಮಿಸಲಾದ ಈ ಜಲಾಶಯವು ಮೌರ್ಯರ ಕಾಲದ ಜಲಸಂಗ್ರಹ ತಂತ್ರಜ್ಞಾನಕ್ಕೆ ವಿಶಿಷ್ಟ ಉದಾಹರಣೆಯಾಗಿದೆ.
ಇದನ್ನು ಓದಿ: ಎಂಜಿನಿಯರಿಂಗ್ ವೃತ್ತಿಗೆ ಪರವಾನಗಿ ಕಡ್ಡಾಯ: ಶೀಘ್ರದಲ್ಲೇ ಎಐಸಿಟಿಇ ಹೊಸ ಮಸೂದೆ
ನಂತರದ ಶತಮಾನಗಳಲ್ಲಿ ಈ ಸರೋವರ ಹಲವು ರಾಜಸತ್ವಗಳ ಕೈಯಲ್ಲಿ ಪುನಃ ನಿರ್ಮಾಣ ಕಂಡಿತು.
- ಅಶೋಕನ ಕಾಲದಲ್ಲಿ ಇದರ ವಿಸ್ತರಣೆ ನೆರವೇರಿತು.
- ಶಕ ರಾಜ್ಯದ ರುದ್ರದಾಮನ್-I ಕ್ರಿ.ಶ. 150ರಲ್ಲಿ ಭಾರೀ ನವೀಕರಣ ನಡೆಸಿದರು.
- ನಂತರ ಗುಪ್ತರ ರಾಜ ಸ್ಕಂದಗುಪ್ತನ ಕಾಲದಲ್ಲಿಯೂ ಪುನರ್ಸ್ಥಾಪನೆ ನಡೆದಿದೆ.
ಪ್ರಾಯೋಗಿಕ ಜಲ ನಿರ್ವಹಣೆಯ ಜೊತೆಗೆ, ಇದೊಂದು ಪುರಾತನ ಇಂಜಿನಿಯರಿಂಗ್ ಸಾಮರ್ಥ್ಯದ ಸಾಕ್ಷಿಯಾಗಿ ಇಂದು ಸಂಶೋಧಕರಿಗೆ ಹೊಸ ಕುತೂಹಲವನ್ನು ಮೂಡಿಸಿದೆ. ಸುಮಾರು 5,000 ವರ್ಷದ ಹಿಂದೆಯೇ ನಿರ್ಮಿಸಲ್ಪಟ್ಟ ಕೃತಕ ಸರೋವರ ಎಂಬ ವಿಶಿಷ್ಟ ಗುರುತಿನಿಂದ, “ಸುದರ್ಶನ್ ಸರೋವರ” ಭಾರತೀಯ ನಾಗರೀಕತೆಯ ತಾಂತ್ರಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ.
