ತುಮಕೂರು: ವ್ಯಕ್ತಿ ಮತ್ತು ಘಟನೆಗಳಿಂದ ಅನೇಕರು ಸ್ಪೂರ್ತಿ ಪಡೆದುಕೊಳ್ಳುತ್ತಾರೆ.ಹಾಗಾಗಿ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಅಧಿಕಾರಿಗಳು,ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಈಗಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಸಾಧನೆಯ ಮೆಟ್ಟಿಲು ಹತ್ತಲು ಸ್ಪೂರ್ತಿ ನೀಡಬೇಕೆಂದು ಶ್ರೀಸಿದ್ದಗಂಗಾ ಶಿಕ್ಷಣ ಸಂಸ್ಥೆಯಜಂಟಿ ನಿರ್ದೇಶಕ ಡಾ.ಶಿವಕುಮಾರಯ್ಯ ಸಲಹೆ ನೀಡಿದ್ದಾರೆ.
ನಗರದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಆಯೋಜಿಸಿದ್ದ ವಾರ್ಷಿಕ ಚುಟುವಟಿಕೆಗಳ ಸ್ಪೂರ್ತಿ, ಎನ್.ಎಸ್.ಎಸ್, ಯುವರೆಡ್ಕ್ರಾಸ್ ಮತ್ತುಕ್ರೀಡಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಸ್.ದಯಾಶಂಕರ್ ಮಾತನಾಡಿ,ಸ್ಪೂರ್ತಿ ಎಂಬುದು ಎಲ್ಲರಿಗೂ ಅಗತ್ಯವಿದೆ.ಸಾಧನೆಗೆ ಬಡತನ, ಅಂಗವಿಕಲತೆ ಅಡ್ಡಿಯಾಗಲಾರದು.ಎರಡು ಕೈಯಿಲ್ಲದೆ ಹುಟ್ಟಿದ ಜೆಸಿಕಾ ಕಾಕ್,ಬರವಣಿಗೆ,ಈಜು,ವಾಹನ ಚಾಲನೆ,ವಿಮಾನ ಚಾಲನೆ ಮಾಡಿ ಇತರರಿಗೆ ಸ್ಪೂರ್ತಿಯಾಗಿದ್ದಾರೆ.ಆಟೋ ಚಾಲಕನ ಮಗನಾಗಿ ಹುಟ್ಟಿದ ಕಾಶಿಯ ಗೋಪಾಲ್ಜೈಸ್ವಾಲ್ ಐಎಎಸ್ ಅಧಿಕಾರಿಯಾಗುವುದು ಸಾಧ್ಯವಾಗಿದ್ದರೆ, ಅದು ಅವರ ಸಾಧಿಸುವ ಚಲದಿಂದ ಮಾತ್ರ. ಕಿಳೀರಿಮೆ ಬಿಟ್ಟು ಸಾಧನೆಯತ್ತ ಮುಖ ಮಾಡಿ, ನಿರಂತರ ಪರಿಶ್ರಮದಿಂದಗುರಿ ಸಾಧನೆ ಸಾಧ್ಯವೆಂದರು.
ಇದನ್ನು ಓದು: ತುಮಕೂರು: ವೈಸಿರಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಂಡ್ ಟೆಕ್ನಾಲಜಿಯಲ್ಲಿ ಪ್ರಥಮ ಎಂ.ಬಿ.ಎ ಬ್ಯಾಚ್ ಉದ್ಘಾಟನೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲರಾದ ಡಾ.ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವರ್ಷವಿಡಿ ಸ್ಪೂರ್ತಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರಲಾಗುತ್ತಿದೆ. 25 ರೀತಿಯ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾದ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.ಬಡತನ,ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಅನೇಕರು ಸಾಭೀತು ಮಾಡಿ ತೊರಿಸಿದ್ದಾರೆ.ವಿದ್ಯಾರ್ಥಿನಿಯರು ಸಾಧಿಸುವ ಕೆಚ್ಚು ಬೆಳೆಸಿಕೊಳ್ಳಬೇಕೆಂದರು.
ವೇದಿಕೆಯಲ್ಲಿ ಡಾ||ಡಿ.ಎನ್.ಯೋಗೀಶ್ವರಪ್ಪ,ಡಾ.ಜಗದೀಶ್,ಹಿನ್ನಲೆ ಗಾಯಕಿ ಸುನೀತಮುರುಳಿ, ಶ್ರೀಮತಿ ಪಾವನ, ಶ್ರೀಮತಿ ಅಮೂಲ್ಯ.ಜೆ., ಶ್ರೀಮತಿ ಹರ್ಷಶ್ರೀ.ಎನ್. ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] ಇದನ್ನು ಓದು: ತುಮಕೂರು: ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ… […]