ತುಮಕೂರು: ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು,ಪ್ರೌಢಾವಸ್ಥೆಗೆ ತಲುಪುತ್ತಿರುವ ವಿದ್ಯಾರ್ಥಿಗಳು ಕೆಟ್ಟ ಚಟಗಳಿಂದ,ಅವುಗಳ ಆಕರ್ಷಣೆಗಳಿಂದ ದೂರವಿರಬೇಕು,ಪೂಜ್ಯ ಡಾ||ಡಿ.ವೀರೇಂದ್ರಹೆಗ್ಗಡೆರವರ ದೂರದೃಷ್ಠಿತ್ವದಿಂದ ಪ್ರತಿ ಶಾಲಾ-ಕಾಲೇಜುಗಳಲ್ಲಿ ದುಶ್ಚಟ ದುರಭ್ಯಾಸಗಳಿಂದ ದೂರವಿರಬೇಕು ಎಂದು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ಹಿರಿಯ ಪತ್ರಕರ್ತರು ಮತ್ತು ವಕೀಲರು ಆದ ಕೆ.ಬಿ.ಚಂದ್ರಚೂಡರವರು ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಊರ್ಡಿಗೆರೆ ವಲಯದ ಕ್ಯಾತ್ಸಂದ್ರ ಗ್ರಾಮದ ನಿವೇದಿತ ಪ್ರೌಢಶಾಲೆಯಲ್ಲಿ ಇಂದು ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಬೀಡಿ,ಸಿಗರೇಟ್,ಮದ್ಯಪಾನ,ಡ್ರಗ್ಸ್,ಮೊಬೈಲ್ ನಿಂದ ದೂರವಿರಬೇಕು,ಇದು ಸಾಧಿಸುವ ವಯಸ್ಸು ನೀವೆಲ್ಲರೂ ಹತ್ತನೇ ತರಗತಿಯಲ್ಲಿದ್ದೀರಿ ಮುಂದೆ 6 ರಿಂದ 8 ವರ್ಷ ಕಷ್ಟಪಟ್ಟು ಓದಿ ಉತ್ತಮ ಸಾಧನೆ ಮಾಡಿದರೆ ನಿಮ್ಮ ಜೀವನವೇ ಬದಲಾಗುವುದು,ಉತ್ತಮ ಆರೋಗ್ಯವನ್ನು ಹೊಂದಿ ದೇಶದ ಆಸ್ತಿಯಾಗಿ ಎಂದು ಸಲಹೆ ನೀಡಿದರು.
ಇದನ್ನು ಓದು: ತುಮಕೂರು: ಅಂಗವೈಕಲ್ಯ ಸಾಧನೆಗೆ ಅಡ್ಡಿಯಲ್ಲ ವಿದ್ಯಾರ್ಥಿನಿಯರು ಸಾಧಿಸುವ ಕೆಚ್ಚು ಬೆಳೆಸಿಕೊಳ್ಳಿ- ಡಾ.ಹೆಚ್.ಎಂ.ದಕ್ಷಿಣಮೂರ್ತಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕರಾದ ವಿಜಯ್ ಕುಮಾರ್ ರವರು ಈ ದೇಶದ ನಿಜವಾದ ಸಂಪತ್ತು ಯುವಕರು,ಸರಿದಾರಿಯಲ್ಲಿ ನಡೆದರೆ ನಿಮ್ಮ ಜೀವನ ಪಾವನವಾಗುವುದು,25 ವರ್ಷದ ತನಕ ನೀವು ಸರಿದಾರಿಯಲ್ಲಿ ನಡೆದರೆ ನಿಮಗೆ ಬುದ್ಧಿ ಬರುತ್ತದೆ ನಂತರ ನೀವು ತಪ್ಪು ಹೆಜ್ಜೆ ಇಡಲಾರಿರಿ,ವಿದ್ಯಾರ್ಥಿಗಳು ದುಶ್ಚಟ,ದುರಭ್ಯಾಸಗಳಿಂದ ದೂರವಿದ್ದು ಯೋಗ,ಉತ್ತಮ ಪುಸ್ತಕಗಳ ಓದುವಿಕೆಗಳನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ವಲಯ ಮೇಲ್ವಿಚಾರಕರಾದ ಲೋಕೇಶ್.ಎಚ್.ಎಸ್., ಶಾಲೆಯ ಸಹ ಶಿಕ್ಷಕರು, ಸೇವಾ ಪ್ರತಿನಿಧಿಯಾದ ಶೋಭಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
– ಕೆ.ಬಿ.ಚಂದ್ರಚೂಡ
