ಆಲೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ ಅಂಗಾಂಗ ದಾನ ಮಾಡುವ ಮೂಲಕ ಆಲೂರು ತಾಲೂಕಿನ ಕಿತ್ತಗಳಲೆ ಗ್ರಾಮದ ಪೋಷಕರು ಅಪೂರ್ವ ಮಾನವೀಯತೆ ಮೆರೆದಿದ್ದಾರೆ. ಮೃತ ಯುವಕನನ್ನು ನಾಗರಾಜ್ (33) ಎಂದು ಗುರುತಿಸಲಾಗಿದೆ.
ಕೆಲವು ದಿನಗಳ ಹಿಂದೆ ಬೈಕ್ನಲ್ಲಿ ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಹಾಸನದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಎಲ್ಲಾ ಪ್ರಯತ್ನಗಳಿದ್ದರೂ ಮಿದುಳು ಸಂಪೂರ್ಣ ನಿಷ್ಕ್ರಿಯ (ಬ್ರೇನ್ ಡೆಡ್) ಆಗಿರುವುದು ದೃಢಪಟ್ಟಿತು.
ಇದನ್ನು ಓದಿ: ಡಿಶ್ ಟಿವಿ – ಅಮೆಜಾನ್ ಪ್ರೈಮ್ ಲೈಟ್ ಸಹಯೋಗ ಗ್ರಾಹಕರಿಗೆ ಹೆಚ್ಚುವರಿ ಮೌಲ್ಯ – ಮನರಂಜನೆಗೆ ಹೊಸ ಆಯಾಮ
ಈ ಸಂದರ್ಭದಲ್ಲಿ, ನಾಗರಾಜ್ ಅವರ ಪೋಷಕರಾದ ದೊಡ್ಡಯ್ಯ ಹಾಗೂ ನಿಂಗಮ್ಮ ಅವರು ಇತರರಿಗೆ ಬದುಕಿನ ಬೆಳಕು ನೀಡುವ ಉದ್ದೇಶದಿಂದ ಮಗನ ಅಂಗಾಂಗಗಳನ್ನು ದಾನ ಮಾಡಲು ಧೈರ್ಯದಿಂದ ಮುಂದೆ ಬಂದರು. ವೈದ್ಯಕೀಯ ತಂಡವು ಅಂಗಾಂಗ ದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ನಾಗರಾಜ್ ಅವರ ಅಂಗಾಂಗಗಳು ಹಲವು ಜೀವಗಳಿಗೆ ಹೊಸ ಬದುಕಿನ ದೀಪ ಬೆಳಗಲಿದೆ.
ನಿನ್ನೆ ರಾತ್ರಿ, ಕಿತ್ತಗಳಲೆ ಗ್ರಾಮದಲ್ಲಿ ನಾಗರಾಜ್ ಅವರ ಅಂತ್ಯಕ್ರಿಯೆ ನೆರವೇರಿತು. ಗ್ರಾಮದವರು, ಬಂಧು–ಬಳಗ ಮತ್ತು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕುಟುಂಬಕ್ಕೆ ಸಾಂತ್ವನ ಸೂಚಿಸಿದರು.
ಪೋಷಕರ ಈ ಮಾನವೀಯ ನಡೆಗೆ ಗ್ರಾಮಸ್ಥರು, ಆರೋಗ್ಯ ಇಲಾಖೆ ಮತ್ತು ಸಮಾಜದ ಹಲವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
