ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಶ್ರೀ ಕ್ಷೇತ್ರ ಕುಂದೂರು ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ನವೆಂಬರ್ 25ರಿಂದ 28ರವರೆಗೆ ಷಷ್ಠಿಪೂಜೆಯ ಅಂಗವಾಗಿ ಭವ್ಯ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ ಎಂದು ಹಾಸನ ಶಾಖಾ ಮಠದ ಮುಖ್ಯಸ್ಥ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.
ಪ್ರತಿ ವರ್ಷ ಸಾವಿರಾರು ಭಕ್ತರನ್ನು ಸೆಳೆಯುವ ಕುಂದೂರು ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಮತ್ತು ಶ್ರೀ ರಂಗಸ್ವಾಮಿಯವರ ಈ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ವಿಶೇಷ ಶೈಲಿಯ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ-ಹವನ, ಸಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರು ವಿಧಿ-ವಿಧಾನಗಳನ್ನು ಜರುಗಿಸಲು ಮಠವು ಸಕಲ ತಯಾರಿಗಳನ್ನು ನಡೆಸಿದೆ.
ಇದನ್ನು ಓದಿ: ಚನ್ನರಾಯಪಟ್ಟಣ : ಭಾನುವಾರ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರವೇ ಕುರುಕ್ಷೇತ್ರ ನಾಟಕ ಪ್ರದರ್ಶನ – ಎಚ್ಎನ್ ಲೋಕೇಶ್
ಧಾರ್ಮಿಕ ವಾತಾವರಣ, ಭಕ್ತರ ಅನುಕೂಲಕ್ಕಾಗಿ ಅಗತ್ಯ ವ್ಯವಸ್ಥೆಗಳು, ಸುರಕ್ಷತಾ ಕ್ರಮಗಳು ಸೇರಿದಂತೆ ಎಲ್ಲ ಸಿದ್ಧತೆಯನ್ನೂ ಮಠದ ವತಿಯಿಂದ ಕೈಗೊಳ್ಳಲಾಗಿದೆ. ಜಾತ್ರಾ ದಿನಗಳಲ್ಲಿ ಭಕ್ತರ ಧಾರಾಳ ಹಾಜರಾತಿ ನಿರೀಕ್ಷಿಸಲಾಗಿದೆ.
ಮಠಾಧೀಶರು ಎಲ್ಲಾ ಭಕ್ತರನ್ನು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ದೇವರ ಅನುಗ್ರಹ ಪಡೆಯುವಂತೆ ಕೋರಿದ್ದಾರೆ.
– ಮಂಜುನಾಥ್ ಐ ಕೆ
