ಕೆ.ಆರ್.ಪೇಟೆ: ಮಾತೃಭಾಷೆಯ ಮೇಲೆ ಗೌರವ ಅಭಿಮಾನ ಇಟ್ಟಿರುವ ಹೆಮ್ಮನಹಳ್ಳಿ ಗಂಗೆಗೌಡರು ಪ್ರಸ್ತುತ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ ಚಂದ್ರಶೇಖರ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಹೆಮ್ಮನಹಳ್ಳಿ ಗ್ರಾಮದಲ್ಲಿ ಕನ್ನಡ ಪ್ರೇಮಿ ಹಿರಿಯ ಮುಖಂಡರಾದ ಗಂಗೆಗೌಡರ ನೇತೃತ್ವದಲ್ಲಿ ಗ್ರಾಮಸ್ಥರ ಸಹಕಾರದಿಂದ ಸತತ 25 ವರ್ಷಗಳಿಂದ ನಡೆಸಿಕೊಂಡು ಬಂದಿರುವ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡಕ್ಕೆ ತನ್ನದೇ ಆದ ಸಂಪದ್ಭರಿತ ಸಂಸ್ಕೃತಿ ಮತ್ತು ಭಾಷಿಕ ಇತಿಹಾಸವಿದೆ. ಇದನ್ನು ಉಳಿಸಿ ಬೆಳೆಸುವುದು ಎಲ್ಲಕನ್ನಡಿಗರ ಆದ್ಯ ಕರ್ತವ್ಯವಾಗಿದ್ದರು ಯುವಜನತೆ ಮನಸು ಮಾಡುತ್ತಿಲ್ಲ ಇಂತಹ ಸಂದರ್ಭದಲ್ಲಿ ಹೆಮ್ಮನಹಳ್ಳಿ ಗ್ರಾಮದ ಹಿರಿಯ ಮುಖಂಡ ಗಂಗೆಗೌಡ ತಮ್ಮ ಇಳಿಯ ವಯಸ್ಸಿನಲ್ಲೂ 25 ವರ್ಷಗಳಿಂದ ನಿರಂತರವಾಗಿ ತಮ್ಮ ಗ್ರಾಮಸ್ಥರ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡದ ಮೇಲಿನ ಅಭಿಮಾನ ತೋರಿಸುತ್ತಾ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.ಕನ್ನಡ ಭಾಷೆ ಹಾಗೂ ಸಂಸ್ಕ್ರತಿಯನ್ನು ನಾವು ಸದಾ ಕಾಲ ಗೌರವಿಸಬೇಕು ಎಂದರು.
ಇದನ್ನು ಓದಿ: CNAP: ಟ್ರೂಕಾಲರ್ ಆಳ್ವಿಕೆಗೆ ತೆರೆ? – ಕರೆ ಮಾಡಿದವರ ಆಧಾರ್ ಹೆಸರು ಸರದಿ!
ಭವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಗ್ರಾಮೀಣ ಭಾಗದಲ್ಲಿ ಇದು ತನ್ನ ಮಾತೃಭಾಷೆ ಮೇಲೆ ಇಟ್ಟಿರುವ ಹೆಮ್ಮನಹಳ್ಳಿ ಗಂಗೆಗೌಡರು ನಮಗೆಲ್ಲರಿಗೂ ಸ್ಪೂರ್ತಿದಾಯಕವಾಗಿದ್ದಾರೆ ಕನ್ನಡ ನಾಡು, ನುಡಿ, ನೆಲ, ಜಲ ಉಳಿಸಲು ನೂರಾರು ಮಹಧಿನೀಯರ ಹೋರಾಟದ ಫಲದಿಂದ ಇಂದು ನಾವೆಲ್ಲರೂ ಕನ್ನಡ ತಾಯಿಯ ಒಂದೇ ಮಕ್ಕಳಂತೆ ಜೀವನ ಸಾಗಿಸುತ್ತಿರುಧಿವುದು ಹೆಮ್ಮಯ ವಿಷಯವಾದರೂ ಕನ್ನಡ ನಾಡು, ನುಡಿ, ಭಾಷೆ ಉಳಿಸುವ ಹೊಣೆ ನಾಡಿನಲ್ಲಿ ಜೀವಿಸುವ ಪ್ರತಿಯೊಬ್ಬರ ಗುರುತರ ಜವಾಬ್ದಾರಿಯಾಗಿದೆ.ಸರಕಾರ ಸಾಕಷ್ಟು ಆದೇಶಗಳನ್ನು ಹೊರಡಿಸುವ ಮೂಲಕ ಆಡಳಿತದಲ್ಲಿ ಕನ್ನಡ ಬಳಿಕೆಗೆ ಆದ್ಯತೆ ನೀಡಿ ಕಾರ್ಯ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದರು ಕೂಡ ಕೆಲ ಪೋಷಕರು ಪರಭಾಷೆ ವ್ಯಾಮೋಹಕ್ಕೆ ಗೊತ್ತಾಗುತ್ತಿದ್ದಾರೆ ಈಗಲಾದರೂ ಕೂಡ ಮಾತೃಭಾಷೆ ಕಲಿಸುವ ಮತ್ತು ಕನ್ನಡ ಶಾಲೆಗೆ ಸೇರಿಸುವ ಪಣ ತೊಡಬೇಕು ಎಂದರು.

ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಗಂಗೆಗೌಡರ ಮಾತೃ ಭಾಷೆ ಅಭಿಮಾನಕ್ಕೆ ನಮ್ಮ ಕನ್ನಡ ಸಾಹಿತ್ಯ ಪರಿಷತ್ ನಿಂದ ಈಗಾಗಲೇ ಗೌರವಿಸಿದ್ದೇವೆ ಹಾಗಾಗಿ ತಾಲೂಕು ಮತ್ತು ಜಿಲ್ಲಾಡಳಿತ ಇಂತಹ ಕನ್ನಡದ ಮೇಲೆ ಅಭಿಮಾನವುಳ್ಳ ಹಿರಿಯ ಜೀವಕ್ಕೆ ಸೂಕ್ತ ಗೌರವ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಗ್ರಾಮಸ್ಥರ ಸಹಕಾರದೊಂದಿಗೆ ಸತತ 25 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ನೇತೃತ್ವ ವಹಿಸಿದ ಕನ್ನಡ ಪ್ರೇಮಿ ಗಂಗೆಗೌಡರನ್ನ ಹಾಗೂ ಸೈನಿಕ ಕಾರ್ತಿಕ ವರನ್ನ ಗ್ರಾಮಸ್ಥರು ಅಭಿನಂದಿಸಿದರು. ಶಾಲಾ ಮಕ್ಕಳಿಂದ ನೃತ್ಯ,ನಾಟಕ, ಸ್ವತಂತ್ರ ಹೋರಾಟಗಾರರ ಕಿರು ನಾಟಕ ಅಭಿನಯಿಸಿ ಕಾರ್ಯಕ್ರಮಕ್ಕೆ ಮೆರೆಗು ತುಂಬಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಕಸಾಪ ತಾಲ್ಲೂಕು ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ,ಹೊಸಹೊಸಳಲು ನಿರ್ದೇಶಕ ಕೃಷ್ಣಗೌಡ,ಕರವೇ ಜಿಲ್ಲಾ ಅಧ್ಯಕ್ಷ ಡಿ.ಎಸ್ ವೇಣು,ಕರವೇ ತಾ.ಶ್ರೀನಿವಾಸ್,ಕರ್ನಾಟಕ ರಕ್ಷಣಾ ಸೇನೆ ತಾ ಅಧ್ಯಕ್ಷ ಸಮೀರ್, ಚೇರ್ಮನ್ ರವಿ,ಗ್ರಾ.ಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಜಗದೀಶ್,ಗ್ರಾ.ಪಂ ಸದಸ್ಯೆ ಪುಷ್ಪ ತಮ್ಮಣ್ಣಗೌಡ,ಡೈರಿ ಅಧ್ಯಕ್ಷ ಯೋಗಮ್ಮ, ಭೀಮೆಗೌಡ,ನಿರ್ದೇಶಕಿ ಅರುಣ ಜಯರಾಮೇಗೌಡ, ಶಾಲಾ ಶಿಕ್ಷಕ ಪ್ರಭು, ಕಟ್ಟೆ ಮಹೇಶ್, ಎಸ್.ಡಿ.ಎಂ.ಸಿ ಹರೀಶ್,ನಿವೃತ್ತ ಶಿಕ್ಷಕರಾದ ರಾಮಸ್ವಾಮಿ, ನಾರಾಯಣಗೌಡ,ಗ್ರಾ.ಪಂ ಮಾಜಿ ಸದಸ್ಯ ಬೆಟ್ಟಯ್ಯ,ಮುಖಂಡ ಸತೀಶ್, ಅಣ್ಣೆಗೌಡ,ಫಯಾಜ್,ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
