ತುಮಕೂರು: ತುಮಕೂರು ಮತ್ತು ತಿಪಟೂರು ಭಾಗದಿಂದ ಬೆಂಗಳೂರಿಗೆ ಹೋಗಿ ಬರುವ ಪ್ರಯಾಣಿಕರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದ್ದು ಬೇಡಿಕೆಗೆ ಅನುಗುಣವಾಗಿ ರೈಲು ಸೇವೆಗಳನ್ನು ಹೆಚ್ಚಿಸಬೇಕು. ಬೆಳಿಗ್ಗೆ 8 ಗಂಟೆಗೆ ತುಮಕೂರಿನಿಂದ ಯಶವಂತಪುರವರೆಗೆ ಸಂಚರಿಸುವ ಮೆಮುರೈಲನ್ನು ಕೆಎಸ್ಆರ್ವರೆಗೂ ವಿಸ್ತರಿಸಬೇಕು.ಇದರಿಂದ ಉದ್ಯೋಗಸ್ಥರು, ಇತರರಿಗೆ ಅನುಕೂಲವಾಗುತ್ತದೆ ಎಂದು ಬೆಂಗಳೂರು ವಲಯದ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಟಿ.ಜೆ.ಗಿರೀಶ್ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ತುಮಕೂರು-ಬೆಂಗಳೂರು ನಡುವೆ ಬೆಳಿಗ್ಗೆ 8ಗಂಟೆಗೆ ಹೊರಡುವ ಮೆಮುರೈಲು ಹಾಗು ಬೆಳಿಗ್ಗೆ ಬಾಣಸವಾಡಿಯಿಂದ ತುಮಕೂರು ಮೂಲಕ ಶಿವಮೊಗ್ಗಕ್ಕೆ ತೆರಳುವ ಮೆಮು ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ನಾಲ್ಕು ಹೆಚ್ಚುವರಿ ಬೋಗಿಗಳನ್ನು ಅಳವಡಿಸುವಂತೆ ಕೋರಿದ್ದಾರೆ. ಈ ತಿಂಗಳ 26ರಂದು ಬೆಂಗಳೂರಿನಲ್ಲಿ ನಡೆಯುವ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ವಿವಿಧಕುಂದುಕೊರೆತೆ ಹಾಗೂ ಬೇಡಿಕೆ ಸಲ್ಲಿಸುವುದಾಗಿ ಹೇಳಿರುವ ಟಿ.ಜೆ.ಗಿರೀಶ್, ರೈಲ್ವೆ ಮಂತ್ರಿ ವಿ.ಸೋಮಣ್ಣನವರಿಗೂ ಈ ಬಗ್ಗೆ ಮನವಿಪತ್ರ ಸಲ್ಲಿಸಿ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಯಶವಂತಪುರ-ಅರಸಿಕೆರೆ ನಡುವೆ ಸ್ವಯಂಚಾಲಿತ ಸಿಗ್ನಲ್ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು.ತುಮಕೂರಿನಿಂದ ತಿಪಟೂರಿಗೆ ಬೆಳಿಗ್ಗೆ 10ರ ನಂತರ ರಾತ್ರಿ 9ಗಂಟೆವರೆಗೆ ಹೆಚ್ಚಿನ ರೈಲುಗಳ ಸಂಚಾರ ಒದಗಿಸಬೇಕು.ಚಿಕ್ಕಮಗಳೂರಿನಿಂದ ತುಮಕೂರು ಮಾರ್ಗವಾಗಿ ತಿರುಪತಿಗೆ ಹೋಗುವ ರೈಲನ್ನು ವಾರದಲ್ಲಿ ಕನಿಷ್ಠ ಮೂರು ಬಾರಿ ಸಂಚರಿಸಲು ಅವಕಾಶ ಮಾಡಬೇಕು ಎಂದು ಹೇಳಿದ್ದಾರೆ.
ತುಮಕೂರಿನ ಸಂಸದರೂ ಆದ ಕೇಂದ್ರ ಸಚಿವ ವಿ.ಸೋಮಣ್ಣನವರು ತುಮಕೂರು ರೈಲು ನಿಲ್ದಾಣವನ್ನು ಉನ್ನತೀಕರಿಸಿ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರಿಡಲು ಕಾಳಜಿವಹಿಸಿರುವುದು ಅಭಿನಂದನೀಯ, ಜಿಲ್ಲೆಯಲ್ಲಿ 25 ರೈಲ್ವೆಅಂಡರ್ ಪಾಸ್, ಫ್ಲೆöÊಓವರ್ ಬ್ರಿಡ್ಜ್ಗಳ ಕಾಮಗಾರಿ ಪ್ರಗತಿಯಲ್ಲಿವೆ.ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ತುಮಕೂರು-ದಾವಣಗೆರೆ ಕಾಮಗಾರಿಯನ್ನೂ ಶೀಘ್ರಗೊಳಿಸಬೇಕು ಎಂದು ಟಿ.ಜೆ.ಗಿರೀಶ್ ಸಚಿವ ವಿ.ಸೋಮಣ್ಣನವರಿಗೆ ಮನವಿ ಮಾಡಿದ್ದಾರೆ.
– ಕೆ.ಬಿ.ಚಂದ್ರಚೂಡ

[…] […]