ಕೆ.ಆರ್.ಪೇಟೆ,ನ.22: ತಾಲ್ಲೂಕಿನ ಶೀಳನೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಪೋಷಕರು, ಶಿಕ್ಷಕರು ಹಾಗೂ ಮಕ್ಕಳ ಮಹಾಸಭೆ ನಡೆಯಿತು.
ಮಕ್ಕಳ ದಿನಾಚರಣೆಯನ್ನು ಚಾಚಾ ನೆಹರು ಅವರ ಹುಟ್ಟು ಹಬ್ಬದ ಅಂಗವಾಗಿ ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ದೇಶದ ಪ್ರಥಮ ಪ್ರಧಾನಿಗಳಾದ ಜವಹರ್ಲಾಲ್ ನೆಹರು ಅವರು ಮಕ್ಕಳ ಮೇಲೆ ಬಹಳ ಪ್ರೀತಿ ಮಮತೆಯನ್ನು ಹೊಂದಿದ್ದರು. ಮಕ್ಕಳ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಹಾಗಾಗಿ ನೆಹರು ಅವರು ನನ್ನ ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ರಜೆ ರಹಿತವಾಗಿ ಆಚರಣೆ ಮಾಡುವಂತೆ ಸಲಹೆ ನೀಡಿದ್ದರು. ಹಾಗಾಗಿ ನ.14ಅನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ನಮ್ಮ ಶಾಲೆಯಲ್ಲಿಯೂ ವಾರವಿಡೀ ನೆಹರು ಅವರ ಬಗ್ಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಮಕ್ಕಳಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸಲಾಯಿತು ಎಂದು ಮುಖ್ಯ ಶಿಕ್ಷಕ ಅನಂತು ಹೇಳಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಅಣ್ಣಯ್ಯ ಮಕ್ಕಳ ದಿನಾಚರಣೆ, ಪೋಷಕರ ದಿನಾಚರಣೆ ಕುರಿತು ಮಕ್ಕಳಿಗೆ ಹಿತವಚನ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ನಾಗೇಶ್, ಶಿಕ್ಷಕರಾದ ರಾಧಾ, ವೀಣಾ, ಶ್ರೀನಿವಾಸ್, ಸುನಿತಾ, ಚಂದ್ರಕಲಾ, ಹಾಗೂ ಎಸ್.ಡಿ.ಎಂ.ಸಿ ಸದಸ್ಯರು ಭಾಗವಹಸಿದ್ದರು. ಇದೇ ಸಂದರ್ಭದಲ್ಲಿ ಸಿ.ಆರ್.ಸಿ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ 9 ಪ್ರಥಮ ಬಹುಮಾನ ಹಾಗೂ 12 ದ್ವಿತೀಯ ಬಹುಮಾನ ಮತ್ತು 4 ತೃತೀಯ ಬಹುಮಾನವನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
– ಶ್ರೀನಿವಾಸ್ ಆರ್.
