ತುಮಕೂರು:ಕನ್ನಡ ಏಕೀಕರಣಕ್ಕೆ ದುಡಿದ ಮಹನೀಯರನ್ನು ನಾವುಗಳು ಪ್ರತಿದಿನ ನೆನೆಪಿಸಿಕೊಳ್ಳಬೇಕು,ಅವರ ದೂರದೃಷ್ಟಿತ್ವದಿಂದ ಕನ್ನಡ ನಾಡು ಉದಯವಾಯಿತು,ಅಂದು 4ಭಾಗಗಳಾಗಿ ಇದ್ದ ಕನ್ನಡನಾಡು ಹೈದರಾಬಾದ್ ಕರ್ನಾಟಕ,ಮುಂಬೈ ಕರ್ನಾಟಕ,ಕೊಡಗು,ಮೈಸೂರು ಇವುಗಳನ್ನು ವಿಲೀನಗೊಳಿಸಿ ಕರ್ನಾಟಕ ಎಂದು 1956 ನವೆಂಬರ್ 1ರಂದು ಮೈಸೂರು ರಾಜ್ಯ ಉದಯವಾಯಿತು,ಅಂದಿನ ಹೋರಾಟದಲ್ಲಿ ಆಲೂರು ವೆಂಕಟರಾವ್,ಕೆಂಗೆಲ್ ಹನುಮಂತಯ್ಯ,ಎಸ್.ನಿಜಲಿಂಗಪ್ಪ ಮುಂತಾದ ಮಹನೀಯರನ್ನು ನಾವು ನೆನಪಿಸಿಕೊಂಡು ಇಂದಿನ ಮಕ್ಕಳಿಗೆ ಇವರ ಹೆಸರನ್ನು ತಿಳಿಸಿಕೊಡಬೇಕು,ಕನ್ನಡನಾಡು ಎಲ್ಲ ಪ್ರದೇಶಗಳನ್ನು ಒಳಗೊಂಡರೂ ಸಹ ಇಂದಿಗೂಅನಂತಪುರ,ಮಡಕಶಿರಾ,ಹೊಸೂರು,ಸೊಲ್ಲಾಪುರ ಹೀಗೆ ಹತ್ತಾರು ಪ್ರದೇಶಗಳು ಕರ್ನಾಟಕದಲ್ಲಿ ವಿಲೀನವಾಗದೆ ಹಾಗೆಯೇ ಉಳಿದಿದ್ದು ನಮಗೆ ನೋವಾಗಿದೆ ಎಂದು ಪತ್ರಕರ್ತ ಕೆ.ಬಿ.ಚಂದ್ರಚೂಡರವರು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಆರ್.ಎಸ್.ವೀರಪ್ಪದೇವರು ಕನ್ನಡ ನಮ್ಮ ಉಸಿರು,ಕನ್ನಡ ನಮಗೆ ಅನ್ನ ಕೊಟ್ಟ ಭಾಷೆ,ಎಲ್ಲರೂ ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾಗಿ ಕನ್ನಡವನ್ನು ತಿರಸ್ಕಾರದಿಂದ ನೋಡುತ್ತಿದ್ದಾರೆ ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ಮಾತೃಭಾಷೆ ಕನ್ನಡವನ್ನು ಹೇಳಿಕೊಡಬೇಕು,ಬೇರೆ ರಾಜ್ಯದಲ್ಲಿ ಅವರ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಆದರೆ ನಮ್ಮ ರಾಜ್ಯದಲ್ಲಿ ಬೇರೆಯವರೊಂದಿಗೆ ಅವರ ಭಾಷೆಯಲ್ಲಿಯೇ ಮಾತನಾಡಿ ವ್ಯವಹಾರ ಮಾಡುತ್ತಾರೆ ಇದು ಸಲ್ಲದು ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷರಾದ ಬಿ.ವಿ.ದ್ವಾರಕಾನಾಥ್ ಮಾತನಾಡುತ್ತಾ ದರಾಬೇಂದ್ರೆ,ಕುವೆಂಪು,ಡಿವಿಜಿ,ಬೀಚಿ ಎಲ್ಲರ ಸಾಹಿತ್ಯವನ್ನು ಇಂದಿನ ಮಕ್ಕಳು ಓದಬೇಕು,ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆ,ಕವಿರಾಜಮಾರ್ಗ ನಮ್ಮ ಕನ್ನಡದ ಪ್ರಥಮ ಕೃತಿ ಅದನ್ನು ಓದಿದರೆ ಕನ್ನಡ ಭಾಷೆಯ ಆಳ ಗೊತ್ತಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ಮಂಜುಳಾ, ಗೋವಿಂದರಾಜು, ತಿಪ್ಪೇಸ್ವಾಮಿ, ಶ್ರೀನಿವಾಸಮೂರ್ತಿ,ಆರ್.ಎಸ್.ಬಸವರಾಜಯ್ಯ, ರೇಣುಕಪ್ರಸನ್ನ, ಶಿವಶಂಕರ್ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
