ಕೆ.ಆರ್.ಪೇಟೆ: ನ.27: 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಸಕರಾದ ಹೆಚ್.ಟಿ.ಮಂಜು ಪರ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಣ್ಣ ಅವರ ಪರ ಕೆಲಸ ಮಾಡಿ ಜೆಡಿಎಸ್ ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ನಾವುಗಳು ಜೆಡಿಎಸ್ ಕಟ್ಟಾಳುಗಳು ನಾವಿಬ್ಬರೂ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರು ಸಹ ಆದ್ದರಿಂದ ನಮ್ಮ ವಿರುದ್ಧ ಸುಳ್ಳು ಅಪಪ್ರಚಾರ ನಡೆಸಿದರೆ ಶಾಸಕರು ಹಾಗೂ ಅವರ ಹಿಂಬಾಲಕರಿಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ ಮತ್ತು ಟಿಎಪಿಸಿಎಂಎಸ್ ನಿರ್ದೇಶಕ ಬಿ.ಎಂ.ಕಿರಣ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಬೆಂಬಲಿಗರೊAದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾಲು ರವಿ ಮತ್ತು ಬಿ.ಎಂ.ಕಿರಣ್ ಅವರು ನಮ್ಮನ್ನು ಉಚ್ಚಾಟಿಸಿ ಎಂದು ಹೇಳಲು ಯಾರಿಗೂ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.

ನಾವು ನಿಷ್ಠಾವಂತ ಜೆಡಿಎಸ್ ಪಕ್ಷದ ಕಾರ್ಯಕರ್ತರು, ನಮ್ಮದು ದೇವೇಗೌಡರು ಹಾಗೂ ಕುಮಾರಣ್ಣ ಕಟ್ಟಿರುವ ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರು. ನಾವು ಎಂದಿಗೂ ಪಕ್ಷದ್ರೋಹ ಮಾಡುವುದಿಲ್ಲ. ಕಳೆದ ಲೋಕಸಭಾ ಚಯನಾವಣೆಯಲ್ಲಿ 20ಸಾವಿರ ಜೆಡಿಎಸ್ ಕಾರ್ಯಕರ್ತರ ನಡುವೆ ನಮ್ಮನ್ನು ಮನ್ಮುಲ್ ಅಭ್ಯರ್ಥಿ ಎಂದು ಕುಮಾರಣ್ಣ ಘೋಷಣೆ ಮಾಡಿದರು. ಆದರೆ ಶಾಸಕರು ಕುಮಾರಣ್ಣ ಅಭ್ಯರ್ಥಿಯಾದ ನಮ್ಮ ವಿರುದ್ದ ತಾವೇ ಪ್ರತಿಸ್ಪರ್ಧಿಯಾಗಿ ನಿಂತರು. ದೇವೇಗೌಡರ ಕುಟುಂಬದ ಹತ್ತಿರದ ಸಂಬAಧಿಯಾದ ಬಿ.ಎಂ.ಕಿರಣ್ ಅವರನ್ನು ಆನೆಗೊಳ ಗ್ರಾಮದ ಹಾಲಿನ ಡೇರಿ ಚುನಾವಣೆಯಲ್ಲಿ ಹಾಗೂ ಸೊಸೈಟಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗರ ಮೂಲಕ ಸೋಲಿಸಲು ಪ್ರಯತ್ನಿಸಿದರು ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲವೇ ಅದೇ ರೀತಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿಯೂ ಬಿ.ಎಂ.ಕಿರಣ್ ಅವರನ್ನು ಸೋಲಿಸುವ ಸುಳಿವು ಸಿಕ್ಕಿದ್ದರಿಂದ ಎಚ್ಚೆತ್ತುಕೊಂಡು ಶಾಸಕರ ತಂತ್ರಕ್ಕೆ ಪ್ರತಿತಂತ್ರ ಮಾಡಿ ಬಿ.ಎಂ.ಕಿರಣ್ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ ಎಂದು ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಡಾಲು ರವಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟಿಎಪಿಸಿಎಂಎಸ್ ಚುನಾವಣೆ ಸೇರಿದಂತೆ, ಡಿಸಿಸಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ನಾವು ಪಕ್ಷದ್ರೋಹವನ್ನು ಎಂದಿಗೂ ಮಾಡಿಲ್ಲ. ಶಾಸಕ ಎಚ್ ಟಿ ಮಂಜು ಅವರು ಶಾಸಕರಾಗಿ ಆಯ್ಕೆಯಾಗಲು ನಮ್ಮನ್ನು ಏಣಿಯಂತೆ ಬಳಸಿಕೊಂಡರು. ತಾವು ಶಾಸಕರಾಗಿ ಆಯ್ಕೆಯಾದ ನಂತರ ನಮ್ಮನ್ನು ಸೇರಿದಂತೆ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ನೆನ್ನೆ ಮೊನ್ನೆ ಪಕ್ಷಕ್ಕೆ ಸೇರಿದವರು ಹಾಗೂ ಸ್ವಾರ್ಥ ಸಾಧಕರನ್ನು ತಮ್ಮ ಪಕ್ಕದಲ್ಲಿ ಇಟ್ಟುಕೊಂಡು ಮೆರೆಸುವ ಕೆಲಸ ಮಾಡುತ್ತಿದ್ದಾರೆ ನಾವು ಪಕ್ಷದ್ರೋಹ ಮಾಡಿರುವುದನ್ನು ಶಾಸಕರು ಹಾಗೂ ಅವರ ಬೆಂಬಲಿಗರು ಸಾಬೀತುಪಡಿಸಲಿ ನೋಡೋಣ ಎಂದು ಸವಾಲು ಹಾಕಿದ ಡಾಲು ರವಿ ಹಾಗೂ ಬಿ.ಎಂ.ಕಿರಣ್. ಸಂಪೂರ್ಣ ಬಹುಮತವನ್ನು ಹೊಂದಿದ್ದ ಕೆ. ಆರ್. ಪೇಟೆ ಪುರಸಭೆ ಆಡಳಿತ ಮಂಡಳಿಯನ್ನು ಕಾಂಗ್ರೆಸ್ ಪಕ್ಷಕ್ಕೆ ದಾರಿಯೆರೆದು ಕೊಟ್ಟಿದ್ದು ಶಾಸಕರೇ ಹೊರತು ನಾವಲ್ಲ ಎಂದು ವ್ಯಂಗ್ಯವಾಡಿದರು. ಟಿಎಪಿಸಿಎಂಎಸ್ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಲಾ 15 ಸೊಸೈಟಿಗಳಂತೆ ಮತದಾನದ ಹಕ್ಕನ್ನು ಪಡೆದಿದ್ದು, ಸಮಬಲದ ಹೋರಾಟವನ್ನು ನೀಡುತ್ತಿದ್ದವು. ಆದರೆ ಒಂದು ಸೊಸೈಟಿಯ ಪ್ರತಿನಿಧಿಯು ಯಾವುದೇ ಪಕ್ಷಕ್ಕೆ ಸೇರದೇ ನಿರ್ಣಾಯಕವಾಗಿತ್ತು. ಶಾಸಕ ಮಂಜು ತಮ್ಮ ಸಹೋದರ ಸೇರಿದಂತೆ ಇತರೆ ಇಬ್ಬರು ನಿರ್ದೇಶಕರಿಗೆ ಮಾತ್ರ ಮತವನ್ನು ನೀಡುವಂತೆ ಆ ಅಭ್ಯರ್ಥಿಯ ಮನವೊಲಿಸಿ ಕಿರಣ್ ಅವರನ್ನು ಸೋಲಿಸಲು ತಂತ್ರಗಾರಿಕೆ ನಡೆಸಿದ್ದರಿಂದ ನಾವು ಅನಿವಾರ್ಯವಾಗಿ ಕಿರಣ್ ಅವರ ಗೆಲುವಿಗೆ ಕಾರ್ಯತಂತ್ರ ನಡೆಸಬೇಕಾಯಿತು ಎಂದು ಡಾಲು ರವಿ ಸ್ಪಷ್ಟಪಡಿಸಿದರು. ಎರಡನೇ ಹಂತದ ಪಕ್ಷದ ಕಾರ್ಯಕರ್ತರ ಬೆಳವಣಿಗೆಯನ್ನು ಸಹಿಸದ ಶಾಸಕರು ಒಳಗೊಳಗೆ ತಂತ್ರಗಾರಿಕೆ ಮಾಡಿ ಕುತಂತ್ರ ರಾಜಕಾರಣ ಮಾಡುತ್ತಾ ತಮ್ಮ ಗೆಲುವಿಗಾಗಿ ದುಡಿದಂತಹ ಅವರನ್ನೇ ದೂರ ಬಿಟ್ಟು ಇತ್ತೀಚಿಗೆ ಪಕ್ಷ ಸೇರಿರುವ ಪುಡಾರಿಗಳ ಮಾತಿಗೆ ಮನ್ನಣೆ ನೀಡುತ್ತಾ ನಿಷ್ಠಾವಂತ ಕಾರ್ಯಕರ್ತರನ್ನು ಅವಮಾನಿಸಿ ಮನೆಯಲ್ಲಿಯೇ ಕೋರುವಂತೆ ಮಾಡುತ್ತಿದ್ದಾರೆ ಶಾಸಕ ಮಂಜು ಅವರ ಗೆಲುವಿಗಾಗಿ ನಾವಿಬ್ಬರು ನಡೆಸಿರುವ ಪಕ್ಷ ಸಂಘಟನೆ ಹಾಗೂ ಹೋರಾಟ ತಾಲೂಕಿನ ಜನತೆಗೆ ಸಂಪೂರ್ಣವಾಗಿ ಗೊತ್ತಿದೆ. ಆದರೂ ವಿನಾಕಾರಣ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಶಾಸಕರು ಹಾಗೂ ಅವರ ಹಿಂಬಾಲಕರು ನೇರವಾಗಿ ಬಹಿರಂಗ ಚರ್ಚೆಗೆ ಬಂದು ನಾವು ಮಾಡಿರುವ ತಪ್ಪುಗಳು ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ರುಜುವಾತು ಮಾಡಿ ತೋರಿಸಲಿ ಎಂದು ಡಾಲು ರವಿ ಹಾಗೂ ಕಿರಣ್ ಸವಾಲು ಹಾಕಿದರು. ಮಂಡ್ಯ ಹಾಲು ಒಕ್ಕೂಟದ ಚುನಾವಣೆಯಲ್ಲಿ ನಿರಂತರವಾಗಿ ಮೂರು ಬಾರಿ ಗೆದ್ದು ನಿರ್ದೇಶಕನಾಗಿ ರೈತ ಪರವಾಗಿ ಕೆಲಸ ಮಾಡುತ್ತಿರುವ ನಾನು 2028ನೇ ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ಧತೆ ನಡೆಸುತ್ತಿರುವುದನ್ನು ಸಹಿಸದ ಶಾಸಕರು ನಮ್ಮನ್ನು ಉದ್ದೇಶಪೂರ್ವಕವಾಗಿಯೇ ದೂರ ಬಿಟ್ಟು ನಮ್ಮ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾನ್ಯ ಶಾಸಕರು ಹಾಗೂ ಅವರ ಬೆಂಬಲಿಗರು ನಮ್ಮಗಳ ವಿರುದ್ಧ ಇಲ್ಲಸಲ್ಲದ ಸುಳ್ಳು ಅಪಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಶಾಸಕರು ನಡೆಸಿರುವ ಪಕ್ಷ ವಿರೋಧಿ ಚಟುವಟಿಕೆಗಳು ಹಾಗೂ ನಿಷ್ಠಾವಂತ ಕಾರ್ಯಕರ್ತರುಗಳ ಮೇಲೆ ನಡೆಸಿರುವ ದಬ್ಬಾಳಿಕೆ ದೌರ್ಜನ್ಯಗಳನ್ನು ಎಳೆ ಎಳೆಯಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಐಕನಹಳ್ಳಿ ಉದಯಶಂಕರ್, ಜೆಡಿಎಸ್ ಮುಖಂಡರಾದ ಅಗ್ರಹಾರಬಾಚಹಳ್ಳಿ ಬಿ.ವಿ.ನಾಗೇಶ್, ಮನ್ಮುಲ್ ಮಾಜಿ ನಿರ್ದೇಶಕ ಸಾರಂಗಿ ನಂಜುAಡೇಗೌಡ, ಸೊಳ್ಳೇಪುರ ವಾಸು, ಸಾರಂಗಿ ವಿಶ್ವನಾಥ್, ಗೊರವಿ ಶ್ರೀಧರ್, ಕಿಕ್ಕೇರಿ ಗ್ರಾ.ಪಂ.ಮಾಜಿ ಅಧ್ಯಕ್ಷ ಸೊಳ್ಳೆಪುರ ಬಾಲಕೃಷ್ಣ, ಮಾಕವಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಕುಂದನಹಳ್ಳಿ ಕೆ.ಜಿ.ಸುರೇಶ್, ಕುಬೇರ, ಯುವ ಮುಖಂಡರಾದ ಸಂತೋಷ್, ಅಜಯ್, ಲೋಕೇಶ್, ಚೇತನ್, ಆನಂದ್, ಶಿವಕುಮಾರ್, ರಾಜೇಶ್ ಸೇರಿದಂತೆ ಹಲವಾರು ಜೆಡಿಎಸ್ ಕಾರ್ಯಕರ್ತರು ಇದ್ದರು.
ಚಿತ್ರಶೀರ್ಷಿಕೆ:27.ಕೆ.ಆರ್.ಪಿ-01: ಕೆ.ಆರ್.ಪೇಟೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಟಿಎಪಿಸಿಎಂಎಸ್ ನಿರ್ದೇಶಕ ಬಿ.ಎಂ.ಕಿರಣ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
-ಸುದ್ದಿಯೊಂದಿಗೆ ಶ್ರೀನಿವಾಸ್ ಕೆ ಆರ್ ಪೇಟೆ
ಇದನ್ನು ಓದಿ….
