ತುಮಕೂರು:ಆಗ್ನೆಯ ಪದವಿಧರ ಕ್ಷೇತ್ರದ ಮತದಾರರ ಪಟ್ಟಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವವರ ಹೋಬಳಿವಾರು ಕರಡುಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೊ ಇಲ್ಲವೊ ಎಂದು ಪರೀಕ್ಷಿಸಿಕೊಳ್ಳಬೇಕು. ಆಕ್ಷೇಪಣೆಗಳಿದ್ದರೆ ಆಯೋಗಕ್ಕೆ ಸಲ್ಲಿಸಬಹುದುಎಂದು ಬಿಜೆಪಿ ಕಾನೂನು ಪ್ರಕೋಷ್ಠ ರಾಜ್ಯ ಸಂಚಾಲಕ ಹಾಗೂ ಆಗ್ನೇಯ ಪದವಿಧರರ ಕ್ಷೇತ್ರದ ಸ್ಪರ್ಧಾಕಾಂಕ್ಷಿ ವಸಂತಕುಮಾರ್ ತಿಳಿಸಿದ್ದಾರೆ.
2026ರಲ್ಲಿ ನಡೆಯಲಿರುವ ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಲು ಅರ್ಹ ಪದವಿಧರರಿಗೆ ನವೆಂಬರ್ 25ರಿಂದ ಡಿಸೆಂಬರ್ 10ರವರೆಗೆ ಕಾಲಾವಧಿ ನೀಡಲಾಗಿದೆ.ನೋಂದಾವಣೆ ಆಗಿಲ್ಲದವರು ನೋಂದಾವಣೆ ಮಾಡಿಕೊಂಡು ತಮ್ಮ ಸಾಂವಿಧಾನಿಕ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಈಗಾಗಲೇ ಅರ್ಜಿ ಸಲ್ಲಿಸಿರುವವರ ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಹೋಬಳಿವಾರು ಬಿಡುಗಡೆ ಮಾಡಿದೆ.ಕರಡು ಪಟ್ಟಿಯಲ್ಲಿ 1,51,374 ಮತದಾರರು ನೋಂದಣಿಯಾಗಿದ್ದಾರೆ. ಅರ್ಜಿ ಸಲ್ಲಿಸಿರುವವರು ತಮ್ಮ ಹೆಸರುಗಳನ್ನು ಪರೀಕ್ಷಿಸಿಕೊಳ್ಳಿ.ಆಕ್ಷೇಪಣೆಗಳೇನಾದರೂ ಇದ್ದರೆ ಸಲ್ಲಿಸಬಹುದು.ಅರ್ಜಿಯನ್ನು ಸಲ್ಲಿಸದೇ ಇರುವವರು ಡಿಸೆಂಬರ್ 10ರೊಳಗೆ ಆಯಾ ತಾಲ್ಲೂಕು ಕಚೇರಿಗಳಲ್ಲಿ ಸಲ್ಲಿಸಬೇಕು ಎಂದು ವಸಂತಕುಮಾರ್ ತಿಳಿಸಿದ್ದಾರೆ.
ವರದಿ : ಕೆ ಬಿ ಚಂದ್ರಚೂಡ್
