ಕೊರಟಗೆರೆ :- ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡಕ್ಕೆ ತನ್ನದೇ ಆದ ಆಸ್ಮಿತೆ ಇದೆ ಎಂದು ಪ್ರಾಂಶುಪಾಲ ಈರಪ್ಪನಾಯಕ ತಿಳಿಸಿದರು.
ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಸಾಂಸ್ಕೃತಿಕ ಸಮಿತಿ ಆಯೋಜಿಸಿದ್ದ ‘‘ವೈಭವದ ನಾಡೋತ್ಸವ’’ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕನ್ನಡ ಭಾಷೆಗೆ 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ತನ್ನದೇ ಆಸ್ಮಿತೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ. ಕನ್ನಡದ ಬಗ್ಗೆ ಸಾಹಿತ್ಯ ರಚಿಸಿದವರನ್ನು, ಕನ್ನಡದ ಮಹನೀಯರನ್ನು ನಾವೆಲ್ಲರೂ ನೆನೆಯಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ವಿದುಷಿ ಭೂಮಿಕ ಪ್ರಸಾದ್ ಮತ್ತು ಮಹಿಮಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕನ್ನಡ ನಾಡು ನುಡಿಯ ಮಹತ್ವವನ್ನು ಬಿಂಬಿಸುವ ಗೀತೆಗಳನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಕಳೆಗಟ್ಟಿಸಿದರು, ಕಾಲೇಜಿನ ವಿವಿಧ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು, ಪಿಪಿಟಿಯ ಮುಖಾಂತರ ಕನ್ನಡದ ಕವಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಕನ್ನಡ ನಾಡಿನ ಸಾಂಸ್ಕೃತಿಕ ವೈಭವವನ್ನು ವಿದ್ಯಾರ್ಥಿಗಳು ಸಭಿಕರಿಗೆ ಪರಿಚಯಿಸಿದರು.
ಈ ವೇಳೆ ಕಾಲೇಜಿನ ಅಧ್ಯಾಪಕ ವರ್ಗದವರು, ಅತಿಥಿ ಉಪನ್ಯಾಸಕರು ಹಾಗು ಬೋಧಕೇತರ ಸಿಬ್ಬಂದಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
-ಶ್ರೀನಿವಾಸ್ ಕೊರಟಗೆರೆ

[…] ಕನ್ನಡದ ಆಸ್ಮಿತೆ ಶ್ರೀಮಂತ: ಕೊರಟಗೆರೆಯಲ್ಲ… […]
[…] ಕನ್ನಡದ ಆಸ್ಮಿತೆ ಶ್ರೀಮಂತ: ಕೊರಟಗೆರೆಯಲ್ಲ… […]
[…] ಕನ್ನಡದ ಆಸ್ಮಿತೆ ಶ್ರೀಮಂತ: ಕೊರಟಗೆರೆಯಲ್ಲ… […]