ಮಂಗಳ ಗ್ರಹದ 3.5 ಶತಕೋಟಿ ವರ್ಷಗಳಷ್ಟು ಹಳೆಯದಾದ ಪ್ರಮುಖ ಕುಳಿಗಳ ಪೈಕಿ ಒಂದಕ್ಕೆ ಈಗ ಭಾರತೀಯ ಭೂವಿಜ್ಞಾನಿ ಎಂ.ಎಸ್. ಕೃಷ್ಣನ್ ಅವರ ಹೆಸರನ್ನು ಅಧಿಕೃತವಾಗಿ ನಾಮಕರಣ ಮಾಡಲಾಗಿದೆ. ಎದುರುಗಡೆಯಾಗಿದ್ದ ಹೆಸರಿಲ್ಲದ ಈ ಕುಳಿಯನ್ನು ಈಗಿನಿಂದ ‘ಕೃಷ್ಣನ್ ಕುಳಿ’ ಎಂದು ಕರೆಯಲಾಗುತ್ತದೆ.
ಎಂ.ಎಸ್. ಕೃಷ್ಣನ್ (1898–1970) ಅವರು ಭಾರತದ ಪ್ರಸಿದ್ಧ ಭೂವಿಜ್ಞಾನಿ ಹಾಗೂ ಭಾರತದ ಭೂವೈಜ್ಞಾನಿಕ ಸಮೀಕ್ಷೆಯ ಮೊದಲ ಭಾರತೀಯ ನಿರ್ದೇಶಕರಾಗಿದ್ದರು. ಭೂ ವಿಜ್ಞಾನ ಕ್ಷೇತ್ರದಲ್ಲಿ ನೀಡಿದ ಮಹತ್ವದ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ ಅವರ ಹೆಸರನ್ನು ಮಂಗಳ ಗ್ರಹದ ಕುಳಿಗೆ ನೀಡಲಾಗಿದೆ.
ನಾಸಾದ ಪರ್ಸೆವೆರೆನ್ಸ್ ರೋವರ್ ಈಗ ಈ ಕುಳಿಯಲ್ಲಿ ಸಂಶೋಧನೆ ನಡೆಸುತ್ತಿದ್ದು, ಅತಿಪುರಾತನ ಸೂಕ್ಷ್ಮಜೀವಿಗಳ ಕುರುಹುಗಳನ್ನು ಹುಡುಕುವ ಕಾರ್ಯ ನಡೆಯುತ್ತಿದೆ. ಇದೇ ಪ್ರದೇಶದಲ್ಲಿ ಪ್ರಾಚೀನ ಹಿಮನದಿ ಹಾಗೂ ನದಿ ಚಟುವಟಿಕೆಗಳ ಸಾಕ್ಷ್ಯಗಳು ಕಂಡುಬಂದಿರುವುದಾಗಿ ವಿಜ್ಞಾನಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಅಪರೂಪದ ಭೂಮಿಯ ಶಾಶ್ವತ ಆಯಸ್ಕಾಂತ ಉತ್ಪಾದನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
ಈ ಕುಳಿಯ ಸುತ್ತಲಿನ ಸಣ್ಣ ಭೂರೂಪಗಳಿಗೆ ಕೇರಳದ ಸ್ಥಳಗಳಾದ ವಾಲಿಯಮಲ, ತುಂಬಾ, ಬೇಕಲ್, ವರ್ಕಳ ಮತ್ತು ಪೆರಿಯಾರ್ ಎಂಬ ಹೆಸರುಗಳನ್ನು ಅಂತರಾಷ್ಟ್ರೀಯ ನಾಮಕರಣ ಮಂಡಳಿ ಅನುಮೋದಿಸಿದೆ. ಮಂಗಳದ ಭೂಪ್ರದೇಶ ಮತ್ತು ಕೇರಳದ ಭೌಗೋಳಿಕತೆಯ ನಡುವಿನ ಸಾಂಕೇತಿಕ ನಂಟನ್ನು ಈ ಹೆಸರಗಳು ವ್ಯಕ್ತಪಡಿಸುತ್ತವೆ.
ಈ ಕುಳಿಯಲ್ಲಿ ಹರಿಯುವ ಪ್ರಮುಖ ಚಾನಲ್ಗೆ ‘ಪೆರಿಯಾರ್ ವಲ್ಲಿಸ್’ ಎಂದು ಹೆಸರು ನೀಡಲಾಗಿದ್ದು, ಮುಂದಿನ ಮಂಗಳ ಸಂಶೋಧನೆಗೆ ಇದು ಮಹತ್ವದ ಭೂವೈಜ್ಞಾನಿಕ ಮಾಹಿತಿ ಒದಗಿಸಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

[…] […]