ಕೊರಟಗೆರೆ ;- ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳಾಗಿದ್ದು ಬರೀ ಸಿ.ಎಂ ಕುರ್ಚಿ ಕಿತ್ತಾಟದಲ್ಲೇ ಕಾಲ ಹರಣ ಮಾಡುತ್ತಾ ರೈತರ ಮತ್ತು ಸಾರ್ವಜನಿಕರಿಗೆ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದು ತಾಲೂಕು ಬಿಜೆಪಿ ಮಂಡಲಾಧ್ಯಕ್ಷ ರುದ್ರೇಶ್ ಆಕ್ರೂಶ ವ್ಯಕ್ತ ಪಡಿಸಿದರು.
ಅವರು ಕೊರಟಗೆರೆ ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಮತ್ತು ಜನ ವಿರೋಧಿ ಆಡಳಿತ ನಡೆಸುತ್ತಿರುವ ಬಗ್ಗೆ ಮತ್ತು ಸೂಕ್ತ ಬೆಂಬಲ ಬೆಲೆ ಘೋಷಣೆ ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಮಂಜುನಾಥ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಅಧಿಕಾರ ಕುರ್ಚಿಗಾಗಿ ಸಿಎಂ ಮತ್ತು ಡಿಸಿಎಂ ಕಿತ್ತಾಡುತ್ತಿದ್ದು, ರಾಜ್ಯದ ಜನರನ್ನು ಮರೆತ್ತಿದ್ದಾರೆ ಜನ ವಿರೋಧಿ ಆಡಳಿತದಿಂದ ಸಾರ್ವಜನಿಕರು ಬೇಸತ್ತಿದ್ದು ನಿಮಗೆ ಬುದ್ದಿ ಕಲಿಸುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ ಅವರು ಅದಷ್ಟು ಬೇಗ ರೈತರಿಗೆ ಆಗಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಎನ್.ಡಿ,ಎ ವತಿಯಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪವನ್ಕುಮಾರ್ ಮಾತನಾಡಿ ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ ರೈತರ ಹಿತರಕ್ಷಣೆ ಕಾಯುವುದು ಸರ್ಕಾರದ ಕೆಲಸ ಆದರೆ ಕಾಂಗ್ರೆಸ್ ಸರ್ಕಾರ ಕುರ್ಚಿಗಾಗಿ ಕಿತ್ತಾಡುತ್ತಾ ರಾಜ್ಯದ ಜನರ ಹಿತ ದೃಷ್ಟಿ ಮರೆತಿದ್ದಾರೆ, ಗ್ಯಾರಂಟಿ ಯೋಜನೆಗಳನ್ನು ತಂದು ಸರ್ಕಾರದ ಬೊಕ್ಕಸ ದಿವಾಳಿಯನ್ನಾಗಿ ಮಾಡಿರುವ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ರೈತರ ಹಿತ ಕಾಪಾಡಲಿ ಎಂದು ತಿಳಿಸಿದರು.
ಇದನ್ನು ಓದಿ : ಕೊರಟಗೆರೆಯಲ್ಲಿ ಪದವೀಧರರ ಮತದಾರ ನೋಂದಣಿ 2399ಕ್ಕೆ ಏರಿಕೆ
ತಾಲೂಕು ಜೆಡಿಎಸ್ ಅಧ್ಯಕ್ಷ ಕಾಮರಾಜು ಮಾತನಾಡಿ ರಾಜ್ಯದಲ್ಲಿ ರೈತರಿಗೆ ಅನೇಕ ಸಮಸ್ಯೆಗಳಾಗಿದ್ದು ಮಳೆ ಸರಿಯಾಗಿ ಆಗದೆ ಬೆಳೆ ಕೈಗೆ ದೊರೆಯದೆ ಅನಾವೃಷ್ಠಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ತಾಲೂಕಿನಲ್ಲಿ ಎಪಿಎಂಸಿ ಓಪನ್ ಮಾದರಿ ಮಾರುಕಟ್ಟೆ ಮಾಡಲು ಇದುವರೆಗೂ ಸಾಧ್ಯವಾದಗೆ ಮೀನಾ ಮೇಷ ಎಣಿಸುತ್ತಿದೆ ಇದರಿಂದ ರೈತರು ಸಾರ್ವಜನಿಕರು ಅನೇಕ ಸಮಸ್ಯೆಗಳು ಇಂದಿಗೂ ಬಗೆಹರಿಯುತಿಲ್ಲ ಇನ್ನಾದರೂ ಸರ್ಕಾರ ರೈತರ ಸಾರ್ವಜನಿರಕ ಅನೇಕ ಸಮಸ್ಯಗಳು ಬಗೆ ಹರಿಯುತ್ತಿಲ್ಲ ಇನ್ನಾದರೂ ಸರ್ಕಾರ ರೈತರ ಪರವಾಗಿ ಕೆಲಸ ಮಾಡಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೇ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಜೆಡಿಎಸ್ ಕಾರ್ಯದರ್ಶಿ ಲಕ್ಷ್ಮೀಶ್, ನಿಕಟ ಪೂರ್ವ ಕಾರ್ಯಧ್ಯಕ್ಷ ನರಸಿಂಹರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಂದ್ರಬಾಬು, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದಿರ್ಶಿ ದಯಾನಂದ್, ಹೋಬಳಿ ಅಧ್ಯಕ್ಷ ಚೇತನ್, ಗಂಕಾರನಹಳ್ಳಿ ಸುರೇಶ್, ಮಂಡಲ ಉಪಾಧ್ಯಕ್ಷ ಗೋವಿಂದರೆಡ್ಡಿ, ರಾಜೇಂದ್ರ, ಶಿವಕುಮಾರ್, ದೊಡ್ಡಸಾಗ್ಗೇರೆ ಚಂದ್ರಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದಯಾಮಣಿ, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ, ರೂಪ, ಯುವ ಮುಖಂಡರಾದ ಗುರುದತ್ತು, ಜಗ್ಗಣ್ಣ, ನಟರಾಜು, ಅರುಣ್, ಶ್ರೀಧರ್, ಕುರುಡುಗಾನಹಳ್ಳಿ ರಂಜಿತ್, ಪ್ರವೀಣ್, ರಂಗರಾಜು, ರಂಗನಾಥ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
– ಶ್ರೀನಿವಾಸ್, ಕೊರಟಗೆರೆ.

[…] […]