ನವದೆಹಲಿ/ಮುಂಬೈ: ದೇಶದ ಅತಿದೊಡ್ಡ ಜೀವ ವಿಮಾ ಸಂಸ್ಥೆಯಾದ ಭಾರತ ಲೈಫ್ ಇನ್ಶುರನ್ಸ್ ನಿಗಮ (ಎಲ್ಐಸಿ) ಯ ಹೊಸ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ರಾಮಕೃಷ್ಣನ್ ಚಂದರ್ ಡಿಸೆಂಬರ್ 1, 2025 ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ದಿನಾಂಕ 1 ಡಿಸೆಂಬರ್ 2025ರ ಕೇಂದ್ರ ಸರ್ಕಾರದ ಅಧಿಸೂಚನೆಯ ಮೂಲಕ ಅವರನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
1990ರಲ್ಲಿ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಆಗಿ ಎಲ್ಐಸಿಯಲ್ಲಿ ತಮ್ಮ ಸೇವೆ ಆರಂಭಿಸಿದ ಶ್ರೀ ಚಂದರ್, ಕಳೆದ 35 ವರ್ಷಗಳಲ್ಲಿ ಸಂಸ್ಥೆಯ ವಿವಿಧ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೀನಿಯರ್ ಡಿವಿಷನಲ್ ಮ್ಯಾನೇಜರ್, ಮಾರ್ಕೆಟಿಂಗ್ ಹಾಗೂ ಪೆನ್ಷನ್ & ಗ್ರೂಪ್ ಸ್ಕೀಮ್ಸ್ನ ಪ್ರಾದೇಶಿಕ ವ್ಯವಸ್ಥಾಪಕ, ಎಲ್ಐಸಿಯ ಅಂತರರಾಷ್ಟ್ರೀಯ ಕಾರ್ಯಾಚರಣೆಗಳ ಸ್ಟ್ರಾಟೆಜಿಕ್ ಬಿಸಿನೆಸ್ ಯೂನಿಟ್ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅವರು ಸೇವೆಸಲ್ಲಿಸಿದ್ದಾರೆ.

ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗುವ ಮೊದಲು, ಅವರು ಎಲ್ಐಸಿಯ ಮುಖ್ಯ ಹೂಡಿಕೆ ಅಧಿಕಾರಿಯಾಗಿ (CIO) ಹಾಗು ಇನ್ವೆಸ್ಟ್ಮೆಂಟ್ (ಫ್ರಂಟ್ ಆಫೀಸ್) ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ದೇಶದ ಅತಿ ದೊಡ್ಡ ಹೂಡಿಕೆ ಪೋರ್ಟ್ಫೋಲಿಯೊಂದನ್ನು ಮುನ್ನಡೆಸುತ್ತಿದ್ದ ಅವರು, ಹೂಡಿಕೆ ಮೌಲ್ಯವರ್ಧನೆ ಹಾಗೂ ಪಾಲಿಸುದಾರರಿಗೆ ಹೆಚ್ಚುವರಿ ಲಾಭ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು.
ಇದನ್ನು ಓದಿ : ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ 3-ಇನ್-1 ಖಾತೆಗಾಗಿ ಆಕ್ಸಿಸ್ ಸೆಕ್ಯುರಿಟೀಸ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ
ವಿಜ್ಞಾನ ಪದವಿಧರರಾಗಿರುವ ಶ್ರೀ ಚಂದರ್, ಫೈನಾನ್ಷಿಯಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದಿದ್ದಾರೆ. ಅವರು ಇನ್ಶುರನ್ಸ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಫೆಲೋ ಆಗಿದ್ದಾರೆ. ಮಾರ್ಕೆಟಿಂಗ್, ಪೆನ್ಷನ್ & ಗ್ರೂಪ್ ಸ್ಕೀಮ್ಸ್ ಹಾಗೂ ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಅವರ ವಿಶಾಲ ಅನುಭವ ಎಲ್ಐಸಿಯ ವೈವಿಧ್ಯಮಯ ಕಾರ್ಯಾಚರಣೆಗಳ ಮೇಲೆ ಅವರ ಆಳವಾದ ವಿದಗ್ಧತೆಯನ್ನು ತೋರಿಸುತ್ತದೆ.
ಎಲ್ಐಸಿಯ 70 ವರ್ಷಗಳ ದೀರ್ಘ ಪರಂಪರೆಯ ದೂರದೃಷ್ಟಿಯುತ ನಾಯಕತ್ವವನ್ನು ಮುಂದುವರಿಸೋಣ ಎಂಬ ದೃಢಸಂಕಲ್ಪದೊಂದಿಗೆ, ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ರಾಮಕೃಷ್ಣನ್ ಚಂದರ್ ಅಧಿಕಾರ ವಹಿಸಿಕೊಂಡಿದ್ದು, ಸಂಸ್ಥೆಯ ಹೊಸ ಡಿಜಿಟಲ್–ನವೀನತಾ ದಿಕ್ಕಿನೇರುವ ಪ್ರಯತ್ನಗಳಿಗೆ ಮತ್ತಷ್ಟು ಬಲ ತುಂಬಲಿದೆ.

[…] […]