ಚನ್ನರಾಯಪಟ್ಟಣ: ಪಟ್ಟಣದ 5ನೇ ವಾರ್ಡಿನ ತಗ್ಯಮ್ಮ ಬಡಾವಣೆಯ ನಿವಾಸಿಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69 ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿಸಿದ ಸರ್ಕಾರಿ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನ ಉಪನ್ಯಾಸಕರಾದ ರತ್ನಾಕರ ಮಾತನಾಡಿ
ಬಾಬಾ ಸಾಹೇಬ್ ಅಂಬೇಡ್ಕರ್ ಶೋಷಿತ ಸಮುದಾಯದ ವಿಮೋಚನೆಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಿಟ್ಟು ಹೋರಾಟ ಮಾಡಿದ ಮಹಾಪುರುಷ ಆದರೆ ಅವರು ತನ್ನ ಸಾವಿನ ಕೊನೆಯ ದಿನಗಳಲ್ಲಿ ಆಪ್ತ ಸಹಾಯಕ ನಾನಕ್ ಚಂದ್ ರತ್ತು ಅವರೊಡನೆ ಮಾತನಾಡುತ್ತಾ ಈ ದೇಶದ ಅಸ್ಪೃಶ್ಯರ ಮೇಲೆ ದಬ್ಬಾಳಿಕೆ ದೌರ್ಜನ್ಯ ಕೊನೆಯಾಗಲು ಅವರು ಈ ದೇಶದ ಆಳುವ ವರ್ಗವಾದ ಮಾತ್ರ ಸಾಧ್ಯ. ಹಾಗಾಗಿ ಇಂದೇ ಹೋಗಿ ಹೇಳು ನಿಮ್ಮಗಳ ಮನೆಯ ಗೋಡೆಯ ಮೇಲೆ ಬರೆದುಕೊಳ್ಳಿ ಈ ಮಾತನ್ನು ಅವರಿಗೆ ಹೋಗಿ ಹೇಳು ಎಂದು ಹೇಳಿದ್ದರು. ಆದರೆ ಅವರು ಪರಿನಿಬ್ಬಾಣ ಹೊಂದಿ 69 ವರ್ಷ ಕಳೆದರೂ ಇಂದಿಗೂ ಕೂಡ ಶೋಷಿತ ವರ್ಗದವರು ದೇಶವನ್ನು ಆಳುವ ವರ್ಗವಾಗದಿರುವುದು ವಿಷಾದನೀಯ ಎಂದರು. ಈ ದೇಶದಲ್ಲಿರುವ ಅಸ್ಪೃಶ್ಯರು ಮತ್ತು ಹಿಂದುಳಿದ ವರ್ಗದವರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಈ ದೇಶದ ಶೇಕಡ 85 ಭಾಗ ಜನಸಂಖ್ಯೆ ಇದ್ದು ಅವರು ಈ ಸಂವಿಧಾನದ ಅಡಿಯಲ್ಲಿ ಸ್ವಾಭಿಮಾನದಿಂದ ಒಗ್ಗಟ್ಟಾಗಿ ಸಂಘಟಿತರಾದರೆ ಬಾಬಾ ಸಾಹೇಬ್ ಅಂಬೇಡ್ಕರ್ ಕಂಡಂತಹ ಜಾತೀಯತೆ ರಹಿತ ಸಮಾನತೆಯ ಸಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಹಾಗಾಗಿ ಶಿಕ್ಷಣ ಮತ್ತು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದಲ್ಲಿ ಪರಿಣಾಮಕಾರಿಯಾಗಿ ತೀರ್ಮಾನ ತೆಗೆದುಕೊಳ್ಳುವ ಸ್ಥಾನದಲ್ಲಿ ಕುಳಿತು ಅಧಿಕಾರ ಚಲಾಯಿಸಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸಾಗುತ್ತದೆ ಶೋಷಿತ ಏಳಿಗೆಗೆ ನೀಡಿದಂತಹ ಮೀಸಲಾತಿ ಅಪ್ಪ್ರಸ್ತುತವಾಗುತ್ತಿರುವ ಈ ಸಂದರ್ಭದಲ್ಲಿ ನಾವು ಬೇಡುವ ವರ್ಗವಾಗುವ ಬದಲು ನೀಡುವ ವರ್ಗವಾಗುವ ಕನಸು ಕಾಣುವುದು ಅತ್ಯಂತ ಅಗತ್ಯವಾಗಿದೆ ಇದು ಸಾಧ್ಯವಾಗಲು ಬಾಬಾ ಸಾಹೇಬ್ ತೋರಿದಂತಹ ಮಾರ್ಗದಲ್ಲಿ ಮುನ್ನಡೆದು ಬುದ್ಧನ ತತ್ವವನ್ನ ಅಳವಡಿಸಿಕೊಂಡು ಶಾಂತಿ ಸಾಮರಸ್ಯದಿಂದ ಹೋರಾಡುವ ಮನೋಭಾವವನ್ನು ರೂಪಿಸಿಕೊಳ್ಳಬೇಕಾಗಿದೆ ಅಂಬೇಡ್ಕರ್ ನಮ್ಮ ನಡುವೆ ಇಲ್ಲ ಆದರೆ ಅಂಬೇಡ್ಕರ್ ಬರೆದಂತಹ ಸಂವಿಧಾನದ ಕಾಯ್ದೆ ಈ ಶೋಷಿತ ಸಮುದಾಯವನ್ನು
ರಕ್ಷಾ ಕವಚದಂತೆ ಕಾಯುತ್ತಿದೆ ಆದುದರಿಂದ ಸಂವಿಧಾನದ ಉಳಿವಿಗಾಗಿ ಶೋಷಿತರು ಆಳುವ ವರ್ಗವಾಗುವುದು ಅನಿವಾರ್ಯವಾಗಿದೆ ಎಂದರು ಇದೇ ಸಂದರ್ಭದಲ್ಲಿ ನೆಲದನಿ ಸಂಘಟನೆಯ ದಿಂಡಗೂರು ಸಂತೋಷ್ ಮತ್ತು ತಂಡದವರಿಂದ ಸಂವಿಧಾನದ ಅರಿವು ಎಂಬ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಸಮಾರಂಭದಲ್ಲಿ
ದಸಂಸ ಮುಖಂಡರಾದ ನಾಗೇಶ್, ಪುಟ್ಟಸ್ವಾಮಿ, ಟಿಎಪಿಎಂಸಿ ಅಧ್ಯಕ್ಷರಾದ ವೆಂಕಟೇಶ್, ಎಸ್ ಸಿ ಎಸ್ ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕುಪ್ಪೆ ಉಮೇಶ್, ಎಸ್ ಸಿ ಎಸ್ ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷರಾದ ಜಲೇಂದ್ರ, ಕೆ ಎಸ್ ಆರ್ ಟಿ ರಾಮು, ಮಾದೀಹಳ್ಳಿ ಮಂಜು,ಸಿ ಪಿ ಮಂಜುನಾಥ್, ಗುರುಸ್ವಾಮಿ, ತಗ್ಯಮ್ಮ ಬಡಾವಣೆಯ ಹಿರಿಯ ನಾಗರಿಕರಾದ ದೇವರಾಜ್ ಹಾಗೂ ಮಂಜು ಉಪಸ್ಥಿತರಿದ್ದರು. ಶ್ರೀಮತಿ ನಂದಿನಿ ಅಂಬೇಡ್ಕರ್ ಅವರ ಕುರಿತಾದ ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ವರದಿ : ಐ ಕೆ ಮಂಜುನಾಥ್
