ಕೊರಟಗೆರೆ -ಪಟ್ಟಣದಲ್ಲಿ ಡಾ. ಜಿ. ಪರಮೇಶ್ವರ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಬೇಕೆಂಬ ಒತ್ತಾಯದೊಂದಿಗೆ ಭಾರೀ ಮೆರವಣಿಗೆ ನಡೆಯಿತು. ಡಿಸೆಂಬರ್ 9, 2025ರಂದು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆ ಎಸ್ಎಸ್ಆರ್ ಸರ್ಕಲ್ ವರೆಗೆ ಸಾಗಿದ್ದು, ಸಾವಿರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಘೋಷಣೆಗಳ ಮಧ್ಯೆ ತಾವು ಬಯಸಿದ ನಾಯಕನ ಪರವಾಗಿ ಶಕ್ತಿ ಪ್ರದರ್ಶನ ನಡೆಸಿದರು.

“ಸಂವಿಧಾನ ಬರೆದವರಿಗೆ ಸಂವಿಧಾನ ಹಿಡಿಯುವ ಹಕ್ಕಿಲ್ಲವೇ?” ಎಂಬ ಘೋಷಣೆಗಳ ಮೂಲಕ ಬೆಂಬಲಿಗರು ಡಾ. ಪರಮೇಶ್ವರ್ ಅವರನ್ನು ಈ ಬಾರಿ ಮುಖ್ಯಮಂತ್ರಿ ಸ್ಥಾನಕ್ಕೆ ಹೊಂದುವ ನಾಯಕ ಎಂದೇ ಜನತೆಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಮೆರವಣಿಗೆಗೆ ಅರಕೆರೆ ಶಂಕರ್, ಎ.ಡಿ. ಬಲರಾಮಯ್ಯ, ಮಹಾಲಿಂಗಪ್ಪ, ಅಶ್ವಥ್ ನಾರಾಯಣ, ಓಬಳರಾಜು, ದಿನೇಶ್ ವಾಲೆ, ಚಂದ್ರಯ್ಯ, ಕೋರ ನಜೀರ್ ಅಹ್ಮದ್, ಮಿಲಿಟ್ರಿ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ವಿ. ರಾಜಗೋಪಾಲ್, ಎಚ್.ಸಿ. ದೊಡ್ಡಯ್ಯ, ಪುಟ್ಟರಾಜು, ನಿವೃತ್ತ ಶಿಕ್ಷಕರು, ಎಸ್ಸಿ ಘಟಕದ ವಿಭೂತಿ ಸಿದ್ದಪ್ಪ, ಕವನದಾಳ ಶಿವಣ್ಣ, ಪನ್ನೇನಹಳ್ಳಿ ಗಂಗರಾಜು, ನಾಗರಾಜು, ಬೀಡಿಪುರ ಸುರೇಶ್, ಜಯರಾಮಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅನಿತಾ, ಪುರುಷೋತ್ತಮ್, ತೊಗರಿ ಘಟ್ಟ ಗೋವಿಂದರಾಜ್, ಗಂಗಣ್ಣ, ಪುರವರ ಚಂದ್ರು ಸೇರಿದಂತೆ ಅನೇಕ ಮುಖಂಡರು ಮುನ್ನಡೆ ನೀಡಿದರು.
ಇದನ್ನು ಓದಿ: ಕೊರಟಗೆರೆ: ಡಾ. ಜಿ. ಪರಮೇಶ್ವರರನ್ನು ಮುಂದಿನ ಮುಖ್ಯಮಂತ್ರಿ ಮಾಡುವಂತೆ ಜನಾಂದೋಲನ ಜಾಥಾ

ಸಹಸ್ರಾರು ಜನರ ಉಪಸ್ಥಿತಿಯೊಂದಿಗೆ ಮೆರವಣಿಗೆ ಘೋಷಣೆಗಳು, ಕೂಗು-ಕೋಶದ ನಡುವೆ ವೈಭವದಿಂದ ನೆರವೇರಿತು.
ವರದಿ: ನರಸಿಂಹಯ್ಯ, ಹೊಸಕೋಟೆ
